Hardhik Pandya: ಹಾರ್ಧಿಕ್ ಪಾಂಡ್ಯ ಫುಲ್ ಟೈಮ್ ಭಾರತ ತಂಡಕ್ಕೆ ನಾಯಕ. ಮಾಡಬಾರದು ಎಂದು ಎಚ್ಚರಿಕೆ ನೀಡಿದ ಮಾಜಿ ಬೌಲರ್ ಇರ್ಫಾನ್ ಪಠಾಣ್.
ಭಾರತ ವಿಶ್ವಕಪ್ (World Cup) ಅಲ್ಲಿ ಮುಗ್ಗರಿಸಿದ್ದು ಎಲ್ಲರಿಗು ಗೊತ್ತೇ ಇದೆ. ಭಾರತದಲ್ಲಿ ಬೌಲರ್ ಹಾಗು ನಾಯಕತ್ವ ವಿಚಾರದಲ್ಲಿ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ನಿವೃತ್ತಿ ನಂತರ ವಿರಾಟ್ ಕೊಹ್ಲಿ ಕೆಲ ವರ್ಷಗಳ ಕಾಲ ನಾಯಕತ್ವ ವಹಿಸಿಕೊಂಡರು ಕೂಡ ಇದು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬಿದ್ದಿತ್ತು ಎಂದರೆ ತಪ್ಪಾಗಲಾರದು. ಇದೆ ಕಾರಣಕ್ಕೆ ಐಪಿಎಲ್ ಇಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಆಟಗಳ ತಂಡದ ನಾಯಕತ್ವದಿಂದ ಕೆಳಗಿಳಿದರು. ನಂತರ ರೋಹಿತ್ ಶರ್ಮ (Rohit Shrama) ಅವರನ್ನು ಮೂರೂ ಮಾದರಿಯ ಕ್ರಿಕೆಟ್ ಗು ನಾಯಕರನ್ನಾಗಿ ಮಾಡಲಾಯಿತು.
ಹಾಗೇನೇ ಈಗಾಗಲೇ ಎರಡು ತಂಡಗಳಾಗಿದೆ ಭಾರತ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಮಯದಲ್ಲಿ ಬೇರೆ ಹೊಸಬರ ತಂಡ ಪಂದ್ಯಗಳನ್ನು ಆಡುತ್ತವೆ. ಈ ತಂಡಕ್ಕೆ ನಾಯಕ ಕೂಡ ಬಿಸಿಸಿಐ (BCCI) ನಿರ್ಧಾರ ಮಾಡಿದೆ. ಮುಂಬರುವ ನ್ಯೂಜಿಲ್ಯಾಂಡ್ ವಿರುದ್ದದ ಟಿ-೨೦ ಪಂದ್ಯಕ್ಕೆ ಹಾರ್ಧಿಕ್ ಪಾಂಡ್ಯ ನಾಯಕ ಹಾಗು ರಿಷಬ್ ಪಂತ್ ಉಪನಾಯಕ. ಹಾಗೇನೇ ಏಕದಿನ ಪಂದ್ಯಕ್ಕೆ ಶಿಕಾರ ಧವನ್ (Shikar Dhavan) ನಾಯಕ ಹಾಗು ರಿಷಬ್ ಪಂತ್ (Rishab Pant) ಉಪನಾಯಕರಾಗಿದ್ದಾರೆ.
ಇದೀಗ ರೋಹಿತ್ ಶರ್ಮ ಅವರನ್ನು ಬದಲಿಸಿ, ಪೂರ್ಣ ಪ್ರಮಾದಲ್ಲಿ ಹಾರ್ಧಿಕ್ ಪಾಂಡ್ಯ ಅವರನ್ನೇ ನಾಯಕನನ್ನಾಗಿ ಮಾಡಬೇಕೆಂದು ಅನೇಕ ಹಿರಿಯ ಆಟಗಾರರು ಹಾಗು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಭಾರತದ ಮಾಜಿ ಬೌಲರ್ ಇರ್ಫಾನ್ ಪಠಾಣ್ ಮಾತ್ರ ಆಯ್ಕೆ ಸಮಿತಿಗೆ ಹಾಗು ಬಿಸಿಸಿಐ ಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಇರ್ಫಾನ್ ಪಠಾಣ್ ಹೇಳಿದ ಸಮಸ್ಯೆ ಆದರೂ ಏನು?
ಇರ್ಫಾನ್ ಪಠಾಣ್ ( Irfan Patan) ಪ್ರಕಾರ ಹಾರ್ಧಿಕ್ ಪಾಂಡ್ಯ (Hardik Panyda) ಉತ್ತಮ ಆಟಗಾರ, ನಾಯಕ. ಅದರಲ್ಲಿ ಎರಡು ಮಾತಿಲ್ಲ. ಹಾಗೇನೇ ಇವರೊಬ್ಬ ಓಲ್ ರೌಂಡರ್. ಇವರನ್ನು ಟಿ-೨೦(T-20) ನಾಯಕರನ್ನಾಗಿ ಮಾಡಿದರೆ ಅವರ ಗಾಯದ ಸಮಯದಲ್ಲಿ ಇನ್ನೊಬ್ಬ ನಾಯಕನನ್ನು ಬಿಸಿಸಿಐ ಸಿದ್ದ ಮಾಡಲೇಬೇಕಾಗಿದೆ. ಇಲ್ಲದೆ ಹೋದರೆ ತಂಡ ಗೊಂದಲಕ್ಕೆ ಇದಾಗಲಿದೆ. ನಾಯಕನನ್ನು ಬದಲಾಯಿಸಿದರೆ ತಂಡದ ಫಲಿತಾಂಶದಲ್ಲಿ ಬದಲಾವಣೆ ಬರಲ್ಲ ಎಂದು ನಾನು ಹೇಳುತ್ತಿಲ್ಲ. ಪಾಂಡ್ಯ ವೇಗದ ಬೌಲರ್, ಆಲ್ ರೌಂಡರ್. ಇವರಿಗೂ ಗಾಯದ ಸಮಸ್ಯೆ ಇದೆ ಎಂದು ಎಲ್ಲರಿಗು ಗೊತ್ತೇ ಇದೆ. ಇವರು ವಿಶ್ವಕಪ್ ಮೊದಲೇ ಗಾಯಕ್ಕೆ ತುತ್ತಾದರೆ ಏನು ಮಾಡುವುದು?
ನಿಮ್ಮ ಬಳಿ ಇವರ ಬದಲಿಗೆ ಇನ್ನೊಬ್ಬ ನಾಯಕ ಇಲ್ಲದಿದ್ದರೆ ಏನು ಮಾಡುತ್ತೀರಾ? ಐಪಿಎಲ್ (IPL) ಅಲ್ಲಿ ನಾಯಕನಾಗಿ ಚೊಚ್ಚಲ ಸರಣಿಯಲ್ಲೇ ಗುಜರಾತ್ ಟೈಟನ್ ಐಪಿಎಲ್ ಕಪ್ ತನ್ನದಾಗಿಸಿಕೊಂಡಿದೆ. ಹಾರ್ದಿಕ್ ಉತ್ತಮ ನಾಯಕ. ಹೇಗೆ ನಾವು ಆರಂಭಿಕ ಆಟಗಾರರ ಬದಲಿ ತಯಾರಾಗಿ ಇಡುತ್ತೆವೆಯೋ ಹಾಗೇನೇ ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಕೂಡ ಬದಲಿ ನಾಯಕನನ್ನು ತಯಾರು ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಮುಂಬರುವ ನ್ಯೂಜಿಲ್ಯಾಂಡ್ (New Zeland) ಸರಣಿಗೆ ಹಾರ್ದಿಕ್ ನಾಯಕರಾಗಿದ್ದರೆ. ಸರಣಿ ಗೆಲುವು ಸಿಗಬಹುದೇ ಎಂದು ಕಾದು ನೋಡಬೇಕಿದೆ.