ಬಿಗ್ ಬಾಸ್ ಮೊದಲ ದಿನದಲ್ಲೇ ಎಲ್ಲರ ನಿರೀಕ್ಷೆಗೆ ಮೀರಿದ ಕೆಲವೊಂದು ಟರ್ನ್ಸ್ ಪಡೆದುಕೊಂಡಿದೆ. ಈ ಬಾರಿ ಬಿಗ್ ಬಾಸ್ ಬೋರ್ ಎಂದವರಿಗೆ ಮಾತ್ರ ಮೊದಲ ಎಪಿಸೋಡ್ ನಲ್ಲಿ ಭರ್ಜರಿ ರಸದೌತಣ ಸಿಕ್ಕಿದೆ . ಮೊದಲು ಶಿಕ್ಷೆಗೆ ಗುರಿಯಾಗಿದ್ದ ಧನರಾಜ್ ಅವರ ನಂತರ ಇದೀಗ ಮನೆಗೆ ಮೊದಲ ಶಿಕ್ಷೆ ಸಿಕ್ಕಿದೆ. ಕೇವಲ ಮನೆಯವರ ಕ್ಷುಲ್ಲಕ ಕಾರಣಕ್ಕೆ ಇದೀಗ ಇಡೀ ಮನೆಗೆ ದೊಡ್ಡ ಹೊಡೆತ ಕೊಟ್ಟಿದ್ದಾರೆ ಬಿಗ್ ಬಾಸ್.
ಹೌದು ನೀವು ನೋಡಿರುವ ಹಾಗೆ ಮನೆ ಮಂದಿ ಲಕ್ಷುರಿ ಬಜೆಟ್ ಪಡೆದಿದ್ದು ಲಕ್ಷುರಿ ಐಟಂ ಮನೆ ಒಳಗೆ ಬಂದಿತ್ತು. ಆದರೆ ಬೆಳಗ್ಗೆ ನರಕ ನಿವಾಸಿಗಳಿಗೆ ಬಿಸಿ ನೀರು ಕೊಟ್ಟಿರುವುದರಿಂದ ಮನೆಯ ಮೂಲ ನಿಯಮದ ಉಲ್ಲಂಘನೆ ಆಗಿದೆ. ಇದರಿಂದಾಗಿ ಬಿಗ್ ಬಾಸ್ ಮನೆ ಮಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಮೂಲ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಮನೆ ಗಳಿಸಿದ್ದ ಲಕ್ಷುರಿ ಬಜೆಟ್ ಇದೀಗ ಬಿಗ್ ಬಾಸ್ ಹಿಂದಕ್ಕೆ ಪಡೆದು ಕೊಂಡಿದ್ದಾರೆ.
ಲಾಯರ್ ಜಗದೀಶ್ ಅವರು ಬೆಳಗೆ ಬಿಸಿ ನೀರು ಕೊಟ್ಟಿದ್ದು ತನ್ನ ತಪ್ಪಾಗಿದೆ ಎಂದು ಕೂಡ ಒಪ್ಪಿಕೊಂಡಿದ್ದಾರೆ. ಅದೇನೇ ಇರಲಿ ಮನೆಯವ್ರು ಇಲ್ಲಿ ಪಾಪ ಪುಣ್ಯ ಅಂತ ನೋಡುವ ಹಾಗೆ ಇಲ್ಲ ಬದಲಾಗಿ ಇಲ್ಲಿ ಬಿಗ್ ಬಾಸ್ ಕೊಟ್ಟ ನಿಯಮಗಳಿಗೆ ಎಲ್ಲರೂ ತಲೆಬಾಗಬೇಕು. ಇಲ್ಲವಾದರೆ ಇಂತಹ ದೊಡ್ಡ ದೊಡ್ಡ ತಳೆದಂಡಗಳು ಕಾಣಸಿಗುತ್ತದೆ. ದಿನ ಕಳೆದಂತೆ ಎಲ್ಲವೂ ರೋಚಕವಾಗುತ್ತಾ ಇದ್ದು ಮುಂದೆ ಏನಾಗುತ್ತದೆ ಅಂತ ಕಾದು ನೋಡಬೇಕು.