Paris Paraolympic:ಒಂದೇ ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕ ಪಡೆದ ಭಾರತ! ನಿನ್ನೆ ಮತ್ತೆ ನಾಲ್ಕು ಪದಕ ಗೆಲ್ಲುವ ಮೂಲಕ ಈ ಸಾಧನೆ? ಹಾಗದರೆ ಪಡೆದ ಒಟ್ಟು ಪದಕ ಎಷ್ಟು?
ಈ ಬಾರಿಯ ಪ್ಯಾರ ಒಲಂಪಿಕ್ಸ್ (paraolympics) ಭಾರತದ ಪಾಲಿಗೆ ಅತಿ ಉತ್ತಮ ಆಗಿತ್ತು ಎಂದರು ತಪ್ಪಾಗಲಿಕ್ಕಿಲ್ಲ. ಈ ಹಿಂದೆ ನಡೆದ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ನಿರೀಕ್ಷೆ ಇಟ್ಟಷ್ಟು ಪ್ರದರ್ಶನ ತೋರಿಲ್ಲ ಆದರೆ ನಮ್ಮ ಪ್ಯಾರ ಅಥ್ಲೀಟ್ ಗಳು ಮಾತ್ರ ನಮ್ಮನ್ನು ನಿರಾಶೆ ಮಾಡಲಿಲ್ಲ. ಭಾರತದ ಒಲಂಪಿಕ್ಸ್ ಇತಿಹಾಸದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದೆ. ಕಳೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ 19 ಪದಕ ಗೆದ್ದು ಸಾಧನೆ ಮಾಡಿತ್ತು . ಆದರೆ ಈ ಬಾರಿ ಭಾರತ ಇದುವರೆಗೆ ಒಟ್ಟು 20 ಪದಕ ಗೆದ್ದಿದೆ. ನಿನ್ನೆಯ ಒಂದೇ ದಿನ 4 ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದೆ. (Record breaking 20 medals for india).
ಈಗ ಒಟ್ಟಾರೆಯಾಗಿ 3 ಚಿನ್ನ 7 ಬೆಳ್ಳಿ 10 ಕಂಚಿನ ಪದಕ(3Gold, 7 silver,10 bronze) ಪಡೆಯುವ ಮೂಲಕ ಒಟ್ಟು 20 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 19ನೆಯ ಸ್ಥಾನ ಪಡೆದಿದೆ. ಇನ್ನೂ 4 ದಿನಗಳ ಸಮಯ ಇದ್ದು ನಿರ್ಣಾಯಕ ಕೆಲವು ವಿಭಾಗದಲ್ಲಿ ಭಾರತ ಸ್ಪರ್ಧೆ ಮಾಡಲಿದೆ ತಮ್ಮ ಪದಕದ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶ ಭಾರತದ ಪಾಲಿಗೆ ಇದೆ. ಇನ್ನಷ್ಟು ಸಾಧನೆ ಮಾಡಿ ಮತ್ತಷ್ಟು ಹೆಸರು ನಮ್ಮ ದೇಶಕ್ಕೆ ತರಲಿ ಎಂದು ನಾವು ಕೂಡ ಆಶಿಸುತ್ತೇವೆ.