ಉದ್ಘಾಟನೆಗೊಂಡ 6 ತಿಂಗಳಲ್ಲಿ ಅಯೋಧ್ಯೆಗೆ ಬಂದ ಭಕ್ತರು ಇಷ್ಟಾ ? ಗಳಿಸಿದ ಆದಾಯ ಎಲ್ಲಾ ದಾಖಲೆ ಮುರಿದಿದೆ!
ಅಯೋಧ್ಯೆ ಭಾರತದ ಜನಮಾನಸದಲ್ಲಿ ಒಂದು ಮರೆಯಲಾಗದ ಕ್ಷಣ. ಪ್ರಭು ಶ್ರೀ ರಾಮನ ಜ್ಞಾನ ಸ್ಥಾನ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರತಿಷ್ಠೆಗೊಂಡು 6 ತಿಂಗಳು ಕಳೆದಿದೆ. ಇದ್ದ ಎಲ್ಲಾ ಕಂತಕಗಳು ದೂರವಾಗಿ ಪ್ರಭು ಶ್ರೀರಾಮ ಕೊನೆಗೂ ತನ್ನ ಹುಟ್ಟಿದ ಸ್ಥಳದಲ್ಲಿ ವಿರಾಜಮಾನನಾಗಿ ಕೂತಿದ್ದಾರೆ . ಅದೆಷ್ಟೋ ಅಸಂಖ್ಯಾತ ಜನರ ನಿರಪೇಕ್ಷಿತ ಸಾಹಸದಿಂದ ತಲೆ ಎತ್ತಿ ನಿಂತಿದೆ ಈ ದೇಗುಲ. ಜನರ ದೇಣಿಗೆಯ ಬಡ್ಡಿ ಹಣದಲ್ಲಿಯೇ ಈ ದೇವಸ್ಥಾನ ಲೋಕಾರ್ಪಣೆ ಆಗಿದೆ. ಆದರೆ ಇದೀಗ ದೇವಸ್ಥಾನ ಲೋಕಾರ್ಪಣೆ ಆಗಿ 6 ತಿಂಗಳು ಆಗಿದೆ. ಇದೀಗ ದೇವಸ್ಥಾನ ಲೆಕ್ಕಾಚಾರ ಕೆಲವು ಬಿಡುಗಡೆ ಮಾಡಿದೆ ಅದರ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ರಾಮಲಲ್ಲಾ ವಿರಾಜಮನನಾಗಿ 6 ತಿಂಗಳು ಕಳೆದಿದೆ. 6 ತಿಂಗಳಲ್ಲಿ ಬರೋಬ್ಬರಿ 11 ಕೋಟಿ ಜನ ಭಕ್ತ ಸಾಗರ ಅಯೋಧ್ಯೆಗೆ ಭೇಟಿ ನೀಡಿದೆ. ಹೌದು ಇದು ಇತಿಹಾಸದಲ್ಲಿಯೇ ಮೊದಲು ಎಂದರೂ ತಪ್ಪಾಗಲಿಕ್ಕಿಲ್ಲ. ಪ್ರಭು ಶ್ರೀರಾಮನ ನೋಡ್ಬೇಕು ಎಂದು ಜೀವ ಬಿಟ್ಟವರು ಅದೆಷ್ಟೋ ಅದನ್ನು ಕಂಡ ನಾವೇ ಭಾಗ್ಯವಂತರು. ಹಾಗೆ ದೇವಳದ ಆದಾಯದಲ್ಲಿ ಮಹತ್ತರ ಬೆಳವಣಿಗೆ ಇದೆ. ಪ್ರತಿ ತಿಂಗಳು ದೇವಸ್ಥಾನದಲ್ಲಿ ಭಕ್ತರು ಹಾಕಿದ ಹುಂಡಿ ಹಣ ಬಿಟ್ಟು ಇತರ ಎಂಬಂತೆ 20-25 ಕೋಟಿ ಹಣ ಬರುತ್ತಿದೆ. ಇದರಲ್ಲಿ ದೇವರಿಗೆ ಸಲ್ಲಿಕೆ ಆಗುವ ಚಿನ್ನಾಭರಣ ವಸ್ತುಗಳ ಮೌಲ್ಯ ಕೂಡ ಸೇರಿದೆ. ಹಾಗೆ ಸರ್ಕಾರಕ್ಕೂ ಕೂಡ ಭರ್ಜರಿ ಆದಾಯ ಬರುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಸರ್ಕಾರವು ರಾಮ ಮಂದಿರಂದಿಂದಾಗಿ ಒಟ್ಟಾರೆಯಾಗಿ 400 ಕೋಟಿ ಅಷ್ಟು GST ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಹತ್ತು ಹಲವಾರು ದೇವಸ್ಥಾನಗಳು ಸುತ್ತ ಮುತ್ತಲೂ ಆಗುತ್ತಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆದ ನಂತರ ದೇವಸ್ಥಾನ ಮತ್ತಷ್ಟು ಆದಾಯ ತರಲಿದೆ ಎಂದು ಹೇಳಲಾಗಿದೆ . ದೇವಸ್ಥಾನ ದ ಟ್ರಸ್ಟ್ ವತಿಯಿಂದ ಇನ್ನೂ ಯವುದೇ ಅಧಿಕೃತ ಲೆಕ್ಕಾಚಾರದ ಮಾಹಿತಿ ಇದು ವರೆಗೂ ಬಂದಿಲ್ಲ ಈ ಎಲ್ಲಾ ಮಾಹಿತಿ ಕ್ರೋಡಿಕೃತವಾಗಿದೆ.