ಹೊಸದಾದ ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯೋದು ಹೇಗೆ? ಎಟಿಎಂ ಮಾದರಿಯಲ್ಲಿದೆ ಹೊಸ ಕಾರ್ಡ್ ಇಲ್ಲದೆ ಪಡೆಯುವ ವಿಧಾನ!
ಆಧಾರ್ ಕಾರ್ಡ್ ಎಂಬ ವ್ಯವಸ್ಥೆ ದೇಶದಲ್ಲಿ ಬಹಳ ಮಹತ್ತರ ಬದಲಾವಣೆ ತಂದ ವ್ಯವಸ್ಥೆ ಆಗಿದೆ. ಆಧಾರ್ ಯೋಜನೆ ಜಾರಿ ಮಾಡುವ ಮೂಲಕ ಅದೆಷ್ಟೋ ಅನುಕೂಲಗಳು ಆಗಿದೆ ಈ ದೇಶದಲ್ಲಿ. ಅದೆಷ್ಟೋ ಸರ್ಕಾರಿ ಯೋಜನೆಗಳು ಬಡ ಜನರಿಗೆ ನೇರವಾಗಿ ತಲುಪಿದೆ. ಸರ್ಕಾರದ ಹಣ ಪೋಲಾಗದಂತೆ ತಡೆಯಲು ಕೂಡ ಇದು ಬಹಳ ಸಹಕಾರಿ ಆಗಿದೆ. ಆದರೆ ಆಧಾರ್ ಕಾರ್ಡ್ ಮೊದಲೆಲ್ಲ ಉದ್ದನೆಯದಾಗಿ ದೊಡ್ಡ ಕಾರ್ಡ್ ಬರುತ್ತಾ ಇತ್ತು. ಆದರೆ ಈಗ ಆಧಾರ್ ಕಾರ್ಡ್ ಅನ್ನು ಕೂಡ ಸ್ಮಾರ್ಟ್ ಕಾರ್ಡ್ ಆಗಿ ಬದಲಾವಣೆ ಮಾಡಿದ್ದಾರೆ.
ಈಗ ಆಧಾರ ಕಾರ್ಡ್ ಬಹಳ ಸಣ್ಣದಾಗಿ ಎಟಿಎಂ ಕಾರ್ಡ್ ತರ ಬರುತ್ತಾ ಇದೆ. ಆದರೆ ಅದು ಬೇಕಾದಲ್ಲಿ ನಾವು ಅದಕ್ಕೆ ಅಪ್ಲೈ ಮಾಡಬೇಕು. ಮತ್ತು ಅದಕ್ಕೆ ಮಿನಿಮಮ್ 50ರುಪಾಯಿ ಶುಲ್ಕ ಇರುತ್ತದೆ. ಇದನ್ನು ಆಧಾರ್ ಪೋರ್ಟಲ್ ನಲ್ಲಿಯೇ ಮಾಡಬೇಕು. ಮೊದಲು ಆಧಾರ್ official website https://uidai.gov.in/en/ bheti ಮಾಡಿ. ಅಲ್ಲಿ Get Adhar ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿರಿ. ಅಲ್ಲಿ Order Adhar pvc card ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದು ಮಾಡಿ otp ಬಳಸಿ ಯಾವುದೇ ಆನ್ಲೈನ್ ಮೂಲಕ 50 ರುಪಾಯಿ ಪಾವತಿ ಮಾಡಿ ಆಧಾರ್ ಕಾರ್ಡ್ ಆರ್ಡರ್ ಮಾಡಬಹುದು.
ಹೀಗೆ ಆರ್ಡರ್ ಮಾಡಿದ ಆಧಾರ್ ಕಾರ್ಡ್ ನಿಮ್ಮ ಮನೆಯ ವಿಳಾಸಕ್ಕೆ ಬರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಆಗದೆ ಇದ್ದಲ್ಲಿ ಅಲ್ಲೇ ಮೊಬೈಲ್ ನಂಬರ್ ನೋಟ್ ಲಿಂಕ್ಡ್ (Mobile number not linked option) ಆಯ್ಕೆ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ otp ನಮೂದು ಮಾಡಿ ನಿಮ್ಮ ಆರ್ಡರ್ ಮಾಡಬಹುದು.