IPO ನಲ್ಲಿ ಹೂಡಿಕೆ ಮಾಡುವುದರಿಂದ ನೀವು ಅಲ್ಪ ಸಮಯದಲ್ಲಿ ಅತೀ ಹೆಚ್ಚು ಹಣ ಪಡೆಯಬಹುದು! ಏನಿದು IPO?

12

ಹಣ ಮಾಡುವುದು ಎಂದರೆ ಯಾರಿಗೆ ತಾನೇ ಇಷ್ಟ ಜ ಹೇಳಿ. ಎಲ್ಲರಿಗೂ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಮಾಡಬೇಕು. ಅದಕ್ಕಾಗಿ ಏನೋ ಎಲ್ಲ ಅಡ್ಡ ದಿಡ್ಡ ಮಾರ್ಗ ಹಿಡಿದು ಹಣ ಕಳೆದು ಕೊಳ್ಳುವವರೆ ಹೆಚ್ಚು. ಹೌದು ಇದು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆ. ಈ ಅಲ್ಪ ಸಮಯದಲ್ಲಿ ಹಣ ಗಳಿಸುವ ಆಸೆಯಿಂದ ಹಣ ಕಳೆದು ಕೊಂಡವರ ಸಂಖ್ಯೆಯೇ ಹೆಚ್ಚು. ನಾವು ಇಂದು ನಿಮಗೆ ಅಲ್ಪ ಸಮಯದಲ್ಲಿ ಅತಿ ಹೆಚ್ಚು ಹಣ ಸಂಪಾದನೆ ಮಾಡುವ ವಿಧಾನ ಹೇಳಿ ಕೊಡುತ್ತೇವೆ. ಇದು ಸುರಕ್ಷಿತ ಮತ್ತು ನೀವು ಅಲ್ಪ ಮಟ್ಟಿಗೆ ಇದರ ಬಗ್ಗೆ ಅಧ್ಯಯನ ನಡೆಸಿ ಹಣ ಹೂಡಿಕೆ ಮಾಡಿದರೆ ಯಾವುದೇ ರಿಸ್ಕ್ ಇರುವುದಿಲ್ಲ.

IPO ಎಂದರೆ Initial Public Offer. ಐಪಿಒ ಅನ್ನು ಖಾಸಗಿ ಕಂಪನಿ ಅಥವಾ ನಿಗಮವು ಹೂಡಿಕೆದಾರರಿಗೆ ತನ್ನ ಪಾಲಿನ ಭಾಗವನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕವಾಗಬಹುದಾದ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು. IPO ದಿಂದಾಗಿ ಪ್ರೈವೇಟ್ ಲಿಮಿಟೆಡ್ ಇದ್ದ ಕಂಪನಿ ಪಬ್ಲಿಕ್ ಲಿಮಿಟೆಡ್ ಕಂಪನಿ ಆಗಿ ಹೊರ ಹೊಮ್ಮುತ್ತದೆ. ಕಂಪನಿ ತನಗೆ ಬೇಕಾದ ಹಣ ಹೊಂದಿಸಲು ಪ್ರೈವೇಟ್ ಹೋಲ್ಡಿಂಗ್ಸ್ ಅನ್ನು ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಜನರಿಂದ ಹಣ ಕ್ರೋಢೀಕರಣ ಮಾಡುತ್ತಾರೆ. ಹಾಗದರೆ ಇದರಲ್ಲಿ ಹೂಡಿಕೆ ಮಾಡುವುದು ಹೇಗೆ?

ನಿಮ್ಮಲ್ಲಿ ಡಿಮ್ಯಾಟ್ ಖಾತೆ ಇದ್ದರೆ ನೀವು ಇದೀಗಾಗಲೇ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದರೆ ಅದೇ ಅಕೌಂಟ್ ಬಳಸಿ IPO ಗೆ ಕೂಡ ಅಪ್ಲಿಕೇಶನ್ ಹಾಕಬಹುದು. ಅದರಲ್ಲಿ IPO ಎಂಬ ಆಯ್ಕೆ ಬರುತ್ತದೆ. ಅಲ್ಲಿ ಇನ್ನೂ ಮುಂದಕ್ಕೆ ಯಾವ ಕಂಪನಿಯ IPO ಬರಲಿದೆ ಮತ್ತು ಯಾವಾಗ ಅಪ್ಲಿಕೇಶನ್ ಆರಂಭ ಕೊನೆ ದಿನ ಹೇಗೆ ಅಪ್ಲೈ ಮಾಡುವುದು ಎಂದು ನಮೂದಿಸಿರುತ್ತಾರೆ. ಅದೇ ರೀತಿಯಾಗಿ ಅಪ್ಲೈ ಮಾಡಿದರೆ ಆಯ್ತು.

ಭಾರತದ ಇತಿಹಾಸದಲ್ಲಿ ಸಿಗಚಿ ಕಂಪೆನಿಯ IPO ಅತಿ ಹೆಚ್ಚು ಮೊತ್ತದಲ್ಲಿ ಲಿಸ್ಟಿಂಗ್ ಆಗಿತ್ತು. ನೀವು ಕಂಪನಿಯ ಮೂಲ ಬೆಲೆ 163 ರುಪಾಯಿ ಯ ಷೇರು ಖರೀದಿ ಮಾಡಿದ್ದಾರೆ ಅದು ಲಿಸ್ಟಿಂಗ್ ನ ಮೊದಲ ದಿನದ ಕೊನೆಯಲ್ಲಿ 603 ರುಪಾಯಿಗೆ ಕ್ಲೋಸಿಂಗ್ ಆಗಿತ್ತು. ನೀವು 15000 ದ ಒಂದು ಲಾಟ್ ತೆಗೆದಿದ್ದರು ಅದು ದಿನಾಂತ್ಯಕ್ಕೆ 55000 ರುಪಾಯಿ ಆಗುತ್ತಿತ್ತು. ಹೀಗೆ ನೀವು ಎಷ್ಟು ಲಾಟ್ ಕೂಡ ಖರೀದಿ ಮಾಡಬಹುದು.ವಿ. ಸೂ: ಈ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ನಿಮ್ಮದೇ ಆದ ಅಧ್ಯಯನ ನಡೆಸಿ. ನಾವು ಇಲ್ಲಿ ಯಾವುದೇ ರೀತಿಯ ಕಂಪನಿ ಆಗಲಿ ಷೇರು ಖರೀದಿ ಮಾಡುವ ಬಗ್ಗೆ ತಿಳಿಸುತ್ತಿಲ್ಲ. ಬದಲಾಗಿ ಈ ಒಂದು ಮಾರ್ಗ ಇದೆ ಎಂಬ ದಾರಿಯನ್ನು ತೋರಿಸುತ್ತಾ ಇದ್ದೇವೆ ಅಷ್ಟೇ. ಎಲ್ಲಿ ಹೂಡಿಕೆ ಮಾಡುವ ಮುನ್ನ ಕೂಡ ಅದರ ಬಗ್ಗೆ ಅಧ್ಯಯನ ನಡೆಸಿ ನಿಮ್ಮ ಹಣವನ್ನು ಉಳಿಸಿಕೊಳ್ಳಿ.

Leave A Reply

Your email address will not be published.