IDBI ಬ್ಯಾಂಕ್ ನೇಮಕಾತಿ: ಲಿಖಿತ ಪರೀಕ್ಷೆ ಇಲ್ಲ, ತಿಂಗಳಿಗೆ 1,57,000 ಸಂಬಳ. ನೀವು ಕೂಡ ಅರ್ಹರೇ? ಸಂಪೂರ್ಣ ಸುದ್ದಿ ಓದಿರಿ.
IDBI ಬ್ಯಾಂಕ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದ್ದು ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳು ಸೇರಿದಂತೆ 56 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 28 ರಿಂದ 40 ಮತ್ತು ಮ್ಯಾನೇಜರ್ ಹುದ್ದೆಗೆ 25 ರಿಂದ 35 ವರ್ಷಗಳು. ಈ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳು 157000 ರುಪಾಯಿ ವರೆಗೆ ಸಂಬಳ ಪಡೆಯಬಹುದು .IDBI RECRUITMENT 2024
ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು IDBI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.in ನಲ್ಲಿ ಪರಿಶೀಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಆಗಿರುತ್ತದೆ. ಅರ್ಜಿ ನಮೂನೆಗಳನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಭರ್ತಿ ಮಾಡಲು ಅವಕಾಶ ಇರುತ್ತದೆ. ಅರ್ಜಿ ನಮೂನೆಯ ಅಂತಿಮ ಪ್ರಿಂಟ್ ಔಟ್ ಅನ್ನು ಸೆಪ್ಟೆಂಬರ್ 30 ರವರೆಗೆ ತೆಗೆದುಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆ ಹೇಳುತ್ತದೆ.
ಯಾವುದೇ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಯು ಸಹಾಯಕ ಜನರಲ್ ಮ್ಯಾನೇಜರ್ ಗ್ರೇಡ್ ಸಿಗೆ ಅರ್ಜಿ ಸಲ್ಲಿಸಬಹುದು. ಎಂಬಿಎ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಕನಿಷ್ಠ ಏಳು ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು .ಈ ಐಡಿಬಿಐ ಬ್ಯಾಂಕ್ ನೇಮಕಾತಿಗಳಿಗೆ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಸಂದರ್ಶನ ಪಾಸ್ ಆದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಒಳಗಾಗುತ್ತಾರೆ. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.