ಗೌತಮ್ ಗಂಭೀರ್ ಈ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಬಾಂಗ್ಲಾ ವಿರುದ್ಧ ಭಾರತಕ್ಕೆ 280 ರನ್ ಗಳ ಅಂತರದಲ್ಲಿ ಜಯ.

ಭಾರತ ಹಾಗು ಬಾಂಗ್ಲಾದೇಶ ಗಳ(IND VS BAN) ನಡುವೆ ಮೊದಲ ಟೆಸ್ಟ್ ಪಂದ್ಯ ಚೆಪಾಕ್ ನಲ್ಲಿ ನಡೆದಿದೆ. ೫ ದಿನಗಳ ಟೆಸ್ಟ್ ಪಂದ್ಯ ಕೇವಲ ನಾಲ್ಕೇ ದಿನದಲ್ಲಿ ಮುಗಿದಿದೆ. ಭಾರತೀಯ ಕ್ರಿಕೆಟ್ ತಂಡ (Indian Cricket Team) ಬಾಂಗ್ಲಾದೇಶ (Bangladesh Cricket Team) ವನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 280 ರನ್ ಗಳಿಂದ ಸೋಲಿಸಿದೆ. ಇದರ ಜೊತೆಗೆ ಭಾರತ ಬಾಂಗ್ಲಾದೇಶವನ್ನು ಸತತ ೬ ನೇ ಟೆಸ್ಟ್ ಮ್ಯಾಚ್ ನಲ್ಲಿ ಸೋಲಿಸಿದೆ. ಇದು ಒಂದು ಐತಿಹಾಸಿಕ ದಾಖಲೆ ಕೂಡ ಆಗಿದೆ.

ಭಾರತ ಈ ಪಂದ್ಯ ಗೆಲ್ಲುವಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin), ರವೀಂದ್ರ ಜಡೇಜಾ(Ravindra Jadeja), ಶುಭಮನ್ ಗಿಲ್(Shubman Gill) ಹಾಗು ರಿಷಬ್ ಪಂತ್(Rishab Pant) ಮುಖ್ಯ ಪಾತ್ರ ವಹಿಸಿದ್ದಾರೆ. ಅಶ್ವಿನ್ ರವರ ಶತಕ ಹಾಗು ಜಡೇಜಾ ಅರ್ಧ ಶತಕ ಭಾರತ ಮೊದಲ ಇನ್ನಿಂಗ್ಸ್ ಅಲ್ಲಿ 376 ರನ್ ಕಲೆಹಾಕುವಲ್ಲಿ ಸಹಾಯ ಮಾಡಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾ ಕೇವಲ 149 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಎರಡನೇ ಇನ್ನಿಂಗ್ಸ್ ಅಲ್ಲಿ ರಿಷಬ್ ಪಂತ್ ಹಾಗು ಶುಭಮನ್ ಗಿಲ್ ಅವರ ಭರ್ಜರಿ ಶತಕ ದಿಂದಾಗಿ ಇನ್ನಿಂಗ್ಸ್ ಮುನ್ನಡೆ ಪಡೆದು ಭಾರತ ತಂಡ ಡಿಕ್ಲೇರ್ ಮಾಡಿಕೊಂಡಿತ್ತು. 515 ರನ್ ಗಳ ಗುರಿ ನೀಡಿತ್ತು. ಆದರೆ ಬಾಂಗ್ಲಾ ತಂಡ ಕೇವಲ 234 ರನ್ ಗಳಿಸಲಷ್ಟೇ ಶಕ್ತವಾಗಿತ್ತು ಹಾಗೇನೇ ಭಾರತ 280 ರನ್ ಗಳಿಂದ ಮೊದಲ ಟೆಸ್ಟ್ ಪಂದ್ಯ ಜಯ ಗಳಿಸಿದೆ.

ಭಾರತ ತಂಡದ ಈ ಗೆಲುವಿನ ಹಿಂದೆ ನಾಯಕ ರೋಹಿತ್ ಶರ್ಮ (Rohit Sharma) ನಾಯಕತ್ವದ ಜೊತೆಗೆ ಕೋಚ್ ಆದ ಗೌತಮ್ ಗಂಭೀರ್ (Gautam Gambir) ಅವರ ರಣನೀತಿ ಕೂಡ ಅಷ್ಟೇ ಇದೆ. ಗಂಭೀರ್ 3 ಫಾಸ್ಟ್ ಬೌಲರ್ ಜೊತೆ ಆಡಲು ನಿರ್ಧಾರ ಮಾಡಿದ್ದರು. ಇದರ ಬಗ್ಗೆ ಅನೇಕ ಕ್ರಿಕೆಟ್ ಪಂಡಿತರ ಅಸಮಾಧಾನವಿತ್ತು. ಆದರೆ ಭಾರತದ 3 ನೇ ಫಾಸ್ಟ್ ಬೌಲರ್ ಆಕಾಶ್ ದೀಪ್ (Akash Deep) ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ಅಲ್ಲಿ ಚಿಲ್ಲರೆ ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಎರಡನೇ ಇನ್ನಿಂಗ್ಸ್ ಅಲಿ ಜಡೇಜಾ ಹಾಗು ಅಶ್ವಿನ್ ರವರ ಸ್ಪಿನ್ ಜುಗಲ್ಬಂದಿ ಬಾಂಗ್ಲಾವನ್ನ ಕಟ್ಟಿ ಹಾಕುವಲ್ಲಿ ಯಶಸ್ವೀ ಆಯಿತು. ಅಶ್ವಿನ್ 6 ವಿಕೆಟ್ ತೆಗೆದರೆ ಜಡೇಜಾ 3 ವಿಕೆಟ್ ತೆಗೆದು ಭಾರತ ಗೆಲುವನ್ನ ನಿರ್ಧರಿಸಿದರು. ಈ ಗೆಲುವೊಂದಿಗೆ ಭಾರತ ಟೆಸ್ಟ್ ವಿಶ್ವಕಪ್ ನಲ್ಲಿ ತನ್ನ ಸ್ಥಾನ ಭದ್ರಗೊಳಿಸಿದೆ.

indiarohit sharmavirat kohli
Comments (0)
Add Comment