Ind Vs Eng 2nd Semifinal: ಇಂಗ್ಲೆಂಡ್ ವಿರುದ್ದದ ಪಂದ್ಯಕ್ಕೆ ರೋಹಿತ್ ಶರ್ಮ ಫಿಟ್ನೆಸ್ ಅಪ್ಡೇಟ್. ಏನು ಹೇಳಿದ್ದಾರೆ ರೋಹಿತ್ ಶರ್ಮ?

226

ಇಂಗ್ಲೆಂಡ್ ವಿರುದ್ದದ ಸೆಮಿ ಫೈನಲ್ ಪಂದ್ಯಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮ ಲಭ್ಯರಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ಪ್ರೆಸ್ ಕಾನ್ಫರೆನ್ಸ್ ಮೂಲಕ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಪ್ರೆಸ್ ಕಾನ್ಫರೆನ್ಸ್ ಮೂಲಕ ಅನೇಕ ವಿಷಯಗಳ ಬಗ್ಗೆ ಮಾತಾಡಿದ್ದಾರೆ ಕೂಡ. ರೋಹಿತ್ ಶರ್ಮ ಆಟಗಾರರ ಪ್ರದರ್ಶನ ಬಗ್ಗೆ ಮಾತಾಡುತ್ತ, ಸೆಮಿಫೈನಲ್ ಪಂದ್ಯದ ಇಂಪಾರ್ಟೆನ್ಸ್ ಎಲ್ಲ ಆಟಗಾರರಿಗೆ ಗೊತ್ತಿದೆ. ಹಾಗೇನೇ ಕೇವಲ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಆಟಗಾರ ಒಳ್ಳೆ ಆಟಗಾರ ಅಲ್ಲ ಎಂದಲ್ಲ ಎಂದು ರೋಹಿತ್ ಶರ್ಮ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್ ಅಲ್ಲಿ ನಾವು ಚೆನ್ನಾಗಿ ಆಡಬೇಕಿದೆ. ನಾವು ಒಳ್ಳೇದಾಗಿ ಆಡುತ್ತೇವೆ ಕೂಡ, ಹಿಂದೆ ನಾವು ಆಡಿದ ಒಳ್ಳೆ ಆಟಗಳನ್ನು ಕೂಡ ನೀವು ನೆನಪಿಸಿಕೊಳ್ಳಬೇಕಾಗುತ್ತದೆ. ಒಬ್ಬ ಆಟಗಾರನ ಒಂದು ಕೆಟ್ಟ ಆಟದಿಂದ ಆತ ಉತ್ತಮ ಆಟಗಾರನೂ ಅಥವಾ ಕೆಟ್ಟ ಆಟಗಾರನೂ ಎಂದು ನೀವು ತೀರ್ಪು ಕೊಡಲು ಸಾಧ್ಯವಿಲ್ಲ. ಹೋದ ವರ್ಷ ದುಬೈ ಅಲ್ಲಿ ಗ್ರೌಂಡ್ ಬೌಂಡರಿ ಅಲ್ಲಿ ಜಾಸ್ತಿ ಚೇಂಜ್ ಇಲ್ಲ ಎನ್ನುವುದು. ಆದರೆ ಆಸ್ಟ್ರೇಲಿಯಾದಲ್ಲಿ ಕೆಲವು ದೊಡ್ಡ ಬೌಂಡರಿ ಇದ್ದರೆ, ಕೆಲವು ಚಿಕ್ಕದು ಕೂಡ ಇರುತ್ತದೆ. ನಾವು ಇದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ನಾವು ಹಿಂದೆಯೂ ಅನೇಕ ಬಾರಿ ಮಾತಾಡಿದ್ದೇವೆ. ಹಾಗೇನೇ ಇಲ್ಲಿನ ಪಿಚ್ ಗೆ ಅಡ್ಜಸ್ಟ್ ಆಗುತ್ತಿದ್ದೇವೆ.

ಅಕ್ಸರ್ ಪಟೇಲ್ ಅವರ ಬಗ್ಗೆ ಮಾತಾಡುತ್ತ, ನಾವು ಅವರ ಪ್ರದರ್ಶನದ ಬಗ್ಗೆ ಚಿಂತೆ ಮಾಡುತ್ತಿಲ್ಲ. ಅವರಿಗೆ ಹೆಚ್ಚಿನ ಓವರ್ ಹಾಕುವ ಅವಕಾಶ ಸಿಕ್ಕಿಲ್ಲ. ನಮಗೆ ಅವರನ್ನು ಪವರ್ ಪ್ಲೇ ಅಲ್ಲಿ ಬೌಲಿಂಗ್ ಮಾಡಿಸುವಂತಹ ಸಂಧರ್ಭ ಬಂದಿರಲಿಲ್ಲ. ಆ ಓವರ್ ಗಳಲ್ಲಿ ಅಕ್ಸರ್ ಪಟೇಲ್ ಉತ್ತಮ ಬೌಲಿಂಗ್ ಮಾಡುತ್ತಾರೆ. ಇನ್ನು ಸೂರ್ಯ ಕುಮಾರ್ ಯಾದವ್ ಬಗ್ಗೆ ಮಾತಾಡಿದ ರೋಹಿತ್. ತಂಡದ ಪರಿಸ್ಥಿತಿ ೧೦-೨ ವಿಕೆಟ್ ಹೋಗಿರಲಿ ಅಥವಾ ೧೦೦-೨ ಹೋಗಿರಲಿ. SKY ಅವರಿಗೆ ಬೇಕಾದ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರಿಗೆ ಚಿಕ್ಕ ಮೈದಾನಕ್ಕಿಂತ ದೊಡ್ಡ ಮೈದಾನ ಇಷ್ಟವಂತೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ.

ಇನ್ನು ರಿಷಬ್ ಪ್ಯಾಂಟ್ ಹಾಗು ದಿನೇಶ್ ಕಾರ್ತಿಕ್ ಇವರ ಮದ್ಯೆ ಯಾರಿಗೆ ಅವಕಾಶ ಸಿಗಲಿದೆ ಎನ್ನುವ ಪ್ರಶ್ನೆ ಗೆ ಉತ್ತರಿಸಿದ ರೋಹಿತ್ ಶರ್ಮ ರಿಷಬ್ ಪಂತ್ ಅಭ್ಯಾಸ ಪಂದ್ಯದ ಬಳಿಕ ಜಿಂಬಾಬ್ವೆ ವಿರುದ್ದ ಪಂದ್ಯವನ್ನೇ ಆಡಿದ್ದು. ಇದೀಗ ನಮ್ಮ ಬಳಿ ಇಬ್ಬರು ವಿಕೆಟ್ ಕೀಪರ್ ಹಾಗು ಬ್ಯಾಟ್ಸಮನ್ ಗಳು ಇದ್ದಾರೆ. ಎಡಗೈ ಬ್ಯಾಟ್ಸಮನ್ ಅವಶ್ಯಕತೆ ನಮಗೆ ಬೇಕೆಂದು ಅನಿಸಿದರೆ ನಾವು ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ರೋಹಿತ್ ಹೇಳಿದ್ದಾರೆ. ಇನ್ನು ರೋಹಿತ್ ಶರ್ಮ ಅವರ ಫಿಟ್ನೆಸ್ ಬಗ್ಗೆ ಮಾತಾಡಿ, ಮುಂದಿನ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಲಭ್ಯವಿದ್ದಾರೆ. ಹಾಗು ಅವರ ಗಾಯ ಕೂಡ ಕಡಿಮೆ ಇದೆ ಎಂದು ಹೇಳಿದ್ದಾರೆ.

Leave A Reply

Your email address will not be published.