Chennai: ಭಾರತ vs ಬಾಂಗ್ಲಾದೇಶದ ಮೊದಲನೇ ಟೆಸ್ಟ್ ದಿನ 1: IND 339/6, ಹೇಗಿತ್ತು ಮೊದಲ ದಿನದ ಆಟ? ಇಲ್ಲಿದೆ ವರದಿ.
ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ನಜ್ಮುಲ್ ಶಾಂಟೊ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತದ್ದು ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ. ದಿನದ ಅಂತ್ಯದಲ್ಲಿ ಇಬ್ಬರು ನೋಟೌಟ್ ಆಗಿ ಉಳಿದರು. ಅಶ್ವಿನ್ ತಂಡದ ಪರ ಶತಕ ದಾಖಲಿಸಿದರು, ಇನ್ನೊಂದೆಡೆ ರವೀಂದ್ರ ಜಡೇಜಾ 86 ರನ್ ಬಾರಿಸಿ ಅಜೇಯರಾಗಿ ಉಳಿದರು.
ಆರಂಭಿಕ ಆಘಾತ ಅನುಭವಿಸಿದ್ದ ಭಾರತದ ಟಾಪ್ ಆರ್ಡರ್ ಸಂಪೂರ್ಣವಾಗಿ ಕುಸಿದಿತ್ತು. ನಾಯಕ ರೋಹಿತ್, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಎರಡಂಕಿ ಸ್ಕೋರ್ ದಾಟಲಿಲ್ಲ. ಇನ್ನುಳಿದಂತೆ ರಾಹುಲ್ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರು ಆದರೆ 16, ರನ್ ಗಳಿಸಿ ತಮ್ಮ ವಿಕೆಟ್ ಕಳೆದು ಕೊಂಡರು. ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಭಾರತಕ್ಕೆ ತಕ್ಕ ಮಟ್ಟಿನ ಚೇತರಿಕೆ ನೀಡಿದರು. ಒಂದೆಡೆ ವಿಕೆಟ್ ಬೀಳುತಾ ಇದ್ದರು ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ತಮ್ಮ ಬ್ಯಾಟ್ ಬೀಸುತ್ತಾ ಇದ್ದರು. 56 ರನ್ ಬಾರಿಸುವ ಮೂಲಕ ಅರ್ಧ ಶತಕ ಕೂಡ ದಾಖಲಿಸಿದರು.
ಆದರೆ ಒಂದು ಸಣ್ಣ ತಪ್ಪಿನ ನಿರ್ಧಾರದಿಂದ ತಮ್ಮ ವಿಕೆಟ್ ಕಳೆದುಕೊಂಡರು. ರೀಶಬ್ ಪಂತ್ ಎಂದಿನಂತೆ ಬ್ಯಾಟ್ ಬೀಸುತ್ತಾ ಇದ್ದರು. ಅವರು ಕೂಡ 36 ರನ್ ಬಾರಿಸಿ ಇಲ್ಲದ ರನ್ ಕಡಿಯಲು ಹೋಗಿ ತಮ್ಮ ವಿಕೆಟ್ ಕಳೆದು ಕೊಂಡರು. ನಂತರ ಜೊತೆಯಾದ ಅಶ್ವಿನ್ ಮತ್ತು ಜಡೇಜಾ ಎರಡನೇ ದಿನಕ್ಕೆ ಆಟ ಮುಂದುವರಿಸಲಿದ್ದಾರೆ.