ಭಾರತದ ಅತ್ಯಂತ ಲಾಭದಾಯಕ ರೈಲು: ವಾರ್ಷಿಕವಾಗಿ ರೂ 1,76,06,66,339 ಉತ್ಪಾದಿಸುತ್ತದೆ; ಇದು ಶತಾಬ್ದಿ ಅಥವಾ ವಂದೇ ಭಾರತವಲ್ಲ ಮತ್ಯಾವುದು ಈ ರೈಲು?
ರಾಜಧಾನಿ, ಶತಾಬ್ದಿ, ಡುರಂಟೊ ಮತ್ತು ವಂದೇ ಭಾರತ್ ಮುಂತಾದ ರೈಲುಗಳು, ಮೇಲ್ ಎಕ್ಸ್‌ಪ್ರೆಸ್ (ಗೂಡ್ಸ್ ) ಮತ್ತು ಪ್ಯಾಸೆಂಜರ್ ರೈಲುಗಳು ವಿಶಾಲವಾದ ಜಾಲವನ್ನು ದೇಶದಾದ್ಯಂತ ಹೊಂದಿದೆ. ಈ ಎಲ್ಲಾ ರೈಲಿನ ಬೇಡಿಕೆಗಳನ್ನ ಗಮನಿಸಿದರೆ, ಯಾವ ರೈಲು ಹೆಚ್ಚು ಲಾಭದಾಯಕ ಎಂದು ನಿಮಗೆ ತಿಳಿದಿದೆಯೇ? Rajdhani Express ರಾಜಧಾನಿ ರೈಲುಗಳಿಂದ ಉತ್ಪತ್ತಿಯಾಗುವ ಆದಾಯವು ಅಗ್ರಸ್ಥಾನದಲ್ಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಗಳಿಕೆಯ ವಿಷಯದಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ.
ವರದಿಯ ಪ್ರಕಾರ, ರೈಲು ಸಂಖ್ಯೆ 22692, ಹಜರತ್ ನಿಜಾಮುದ್ದೀನ್‌ನಿಂದ ಕೆಎಸ್‌ಆರ್ ಬೆಂಗಳೂರಿಗೆ ಪ್ರಯಾಣಿಸುವ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಉನ್ನತ ಆದಾಯವನ್ನು ರೈಲ್ವೆ ಇಲಾಖೆಗೆ ಗಳಿಸುತ್ತದೆ. 2022-23 ರ ಆರ್ಥಿಕ ವರ್ಷದಲ್ಲಿ, ಈ ರೈಲು 509,510 ಪ್ರಯಾಣಿಕರನ್ನು ಸಾಗಿಸಿತು ಮತ್ತು ರೈಲ್ವೆ ಅಂದಾಜು 1,76,06,66,339 ರೂ ಆದಾಯವನ್ನು ಗಳಿಸಿತು.
ಭಾರತೀಯ ರೈಲ್ವೆಗೆ ಎರಡನೇ ಅತ್ಯಂತ ಲಾಭದಾಯಕ ರೈಲು ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್ ಆಗಿದೆ, ಇದು ಪಶ್ಚಿಮ ಬಂಗಾಳದ ಕೋಲ್ಕತ್ತಾವನ್ನು ರಾಷ್ಟ್ರ ರಾಜಧಾನಿ ನವದೆಹಲಿಗೆ ಸಂಪರ್ಕಿಸುತ್ತದೆ. ರೈಲು ಸಂಖ್ಯೆ 12314, ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್, 2022-23 ರ ಆರ್ಥಿಕ ವರ್ಷದಲ್ಲಿ 509,164 ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ, ಅಂದಾಜು 1,28,81,69,274 ರೂ ಆದಾಯವನ್ನು ಗಳಿಸಿದೆ.ಮೂರನೆಯದು ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್. ನವದೆಹಲಿ ಮತ್ತು ದಿಬ್ರುಗಢ್ ನಡುವೆ ಕಾರ್ಯನಿರ್ವಹಿಸುವ ಈ ರೈಲು ಕಳೆದ ವರ್ಷದಲ್ಲಿ 474,605 ಪ್ರಯಾಣಿಕರನ್ನು ಹೊತ್ತೊಯ್ದಿದ್ದು , ಭಾರತೀಯ ರೈಲ್ವೆಗೆ ಅಂದಾಜು 1,26,29,09,697 ರೂ ಆದಾಯ ಗಳಿಸಿ ಕೊಟ್ಟಿದೆ .