Interesting Facts: ಬಾವಿಯನ್ನು ವೃತ್ತಾಕಾರವಾಗಿ ಮಾತ್ರ ಯಾಕೆ ಕಟ್ಟುತ್ತಾರೆ ಎನ್ನುವ ಕಾರಣ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರಣೆ.

529

Why Well is in Round Shape: ನೀವು ನಿಮ್ಮ ಮನೆ ಅಥವಾ ಅಸು ಪಾಸಿನ ಪರಿಸರದಲ್ಲಿ ಮಾನವ ನಿರ್ಮಿತ ಏನಾದರು ಇದ್ದರೆ, ಅದು ಒಂದೇ ಶೇಪ್ ಅಲ್ಲಿ ಇರುವುದನ್ನು ಗಮನಿಸಿರುತ್ತೀರಿ. ಅದರ ಹಿಂದೆ ಏನಾದರು ಕಾರಣ ಕೂಡ ಇದ್ದೆ ಇರುತ್ತದೆ. ಇನ್ನು ಗಮನಿಸುವುದಾದರೆ ಬಾವಿ ಕೇವಲ ವೃತ್ತಾಕಾರವಾಗಿರುತ್ತದೆ ಯಾಕೆ ಎನ್ನುವ ಪ್ರಶ್ನೆ ಕೂಡ ನಿಮ್ಮಲ್ಲಿ ಮೂಡಿರುತ್ತದೆ. ಇದಕ್ಕೆ ಕಾರಣ ವೃತ್ತಾಕಾರವಾಗಿ ಡ್ರಿಲ್ (Drill) ಮಾಡುವುದು ಅಥವಾ ಕೊರೆಯುವುದು ಸುಲಭ. ಬೇರೆ ಆಕಾರದಲ್ಲಿ ಕೊರೆಯುವುದು ಕಷ್ಟಕರ. round well information

ಒಂದು ವೃತ್ತ ಆಕಾರದಲ್ಲಿ ಬಾವಿಯನ್ನು ಮಾಡುವುದರಿಂದ, ಬಾವಿಯ ಮಣ್ಣಿನ ಕುಸಿತದ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಇದರಿಂದಾಗಿ ಬಾವಿಯ ಮೇಲೆ ಕಡಿಮೆ ಒತ್ತಡ (Pressure) ಉಂಟಾಗುತ್ತದೆ. ಆದ್ದರಿಂದ, ವೃತ್ತ (Round) ಆಕಾರದಿಂದಾಗಿ, ಬಾವಿಯ ಗೋಡೆಗಳು ಹಲವು ವರ್ಷಗಳವರೆಗೆ ಸ್ಥಿರವಾಗಿರುತ್ತವೆ ಮತ್ತು ಕುಸಿಯುವುದಿಲ್ಲ. narrow and deep well

ವೃತ್ತ ಬಾವಿಗಳು (Well) ಇತರ ಆಕಾರಗಳಿಗಿಂತ ಬಲವಾಗಿರುತ್ತವೆ ಮತ್ತು ಅವುಗಳ ಸ್ಥಿರತೆಯನ್ನು ಉಳಿಸಿಕೊಳ್ಳುತ್ತವೆ. ನೀರನ್ನು (Water) ಸಂಗ್ರಹಿಸಿದಾಗ, ಅದು ಅದರ ಗೋಡೆಗಳ ಮೇಲೆ ಒತ್ತಡವನ್ನು ಬೀರುತ್ತದೆ. ಬಾವಿಯು ಬೇರೆ ಯಾವುದೇ ಆಕಾರದಲ್ಲಿದ್ದರೆ, ಆ ಆಕಾರದ ಮೂಲೆಗಳಲ್ಲಿ (Corner) ನೀರಿನ ಒತ್ತಡವು ಗರಿಷ್ಠವಾಗಿರುತ್ತದೆ, ಇದರಿಂದಾಗಿ ಬಾವಿಯ ಗೋಡೆಗಳು ಹಾನಿಗೊಳಗಾಗಬಹುದು. ಅದೇ ಕಾರಣಕ್ಕೆ ವೃತ್ತಾಕಾರದಲ್ಲಿ ಯಾವದೇ ಮೂಲೆಗಳು ಇಲ್ಲದೆ ಇರುವುದರಿಂದ ಒತ್ತಡ ಅಷ್ಟು ಇರುವುದಿಲ್ಲ. square well

ಗುಂಡಗಿರುವುದರಿಂದ (Round shape) ಬಾವಿಯಲ್ಲಿ ಯಾವುದೇ ಮೂಲೆಯಿಲ್ಲ ಮತ್ತು ಆದ್ದರಿಂದ ನೀರಿನ ಒತ್ತಡವು ಎಲ್ಲಾ ದಿಕ್ಕುಗಳಲ್ಲಿಯೂ ಒಂದೇ ಆಗಿರುತ್ತದೆ ಮತ್ತು ಬಾವಿಗೆ ತ್ವರಿತವಾಗಿ ಹಾನಿಯಾಗುವುದಿಲ್ಲ. ಈ ಕಾರಣದಿಂದ ಬಾವಿಯ ಆಕಾರ ಯಾವಾಗಲೂ ದುಂಡಾಗಿರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿ. round well – wikipedia, What is the difference between round and square well?

Leave A Reply

Your email address will not be published.