Interesting

Interesting News: ಬ್ರಾಹ್ಮಣರು ಧರಿಸುವ ಜನಿವಾರದ ಮಹತ್ವವೇನು? ಇದರ ಹಿಂದೆ ಇರುವ ಆದ್ಯಾತ್ಮ ಎಂತದು ಗೊತ್ತೇ?

ಸನಾತನ ಧರ್ಮ (Sanathan Dharma) ಅತ್ಯಂತ ಹಳೆಯ ಹಾಗು ಮೊದಲ ಧರ್ಮ ಎಂದರು ತಪ್ಪಾಗಲಾರದು. ಈ ಸನಾತನ ಧರ್ಮವನ್ನೇ ಇಂದು ಹಿಂದೂ ಅಂತ ಕರೆಯುತ್ತಾರೆ. ಈ ಹಿಂದೂ ಧರ್ಮದಲ್ಲಿ ಅನೇಕ ವಿಧದ ಆಚರಣೆಗಳಿವೆ. ಈ ಆಚರಣೆಗಳೇ ಇಂದಿಗೂ ಹಿಂದೂ ಧರ್ಮವನ್ನು ಜೀವಂತವಾಗಿದೆ ಎಂದರೆ ತಪ್ಪಾಗಲಾರದು. ದೀಪಾವಳಿ ಆಗಿರಬಹುದು, ನದಿಗೆ ಬಾಗಿನ ಬಿಡುವುದು ಹಾಗೇನೇ ಬ್ರಾಹ್ಮಣರು ಜನಿವಾರ ಧರಿಸುವುದು ಕೂಡ ಈ ಆಚರಣೆಗಳಲ್ಲಿ ಒಂದಾಗಿದೆ. ಇದು ಬಿಳಿಯ ದಾರವಾಗಿದ್ದು ಬ್ರಾಹ್ಮಣರು ತಮ್ಮ ಗಂಡು ಮಕ್ಕಳಿಗೆ ಉಪನಯನ ಮಾಡುವ ಮೂಲಕ ಯಜನೋಪವೀತ ಧಾರಣ ಮಾಡುತ್ತಾರೆ.

ಈ ಯಜನೋಪವೀತ ಧಾರಣೆ ಅಥವಾ ಜನಿವಾರ ಹಾಕಿಕೊಳ್ಳುವುದು ಬ್ರಾಹ್ಮಣ ಸಮುಧಾಯದಲ್ಲಿ (Brahmin Community) ಅತ್ಯಂತ ಪವಿತ್ರವಾದದ್ದು ಹಾಗೇನೇ ಒಂದು ಮುಖ್ಯ ಆಚರಣೆ ಆಗಿದೆ. ಇದನ್ನು ಕೆಲವರು ಹಿಂದೂ ಸಂಸ್ಕಾರದ ಹತ್ತನೇ ಸಂಸ್ಕಾರ ಅಂತಾನೂ ಕರೆಯುತ್ತಾರೆ.

significance of wearing janeu.

ಜನಿವಾರ ಧರಿಸುವುದರಿಂದ ಆಗುವ ಪ್ರಯೋಜನಗಳೇನು?

ಈ ಜನಿವಾರ ವನ್ನು ಕಿವಿಗೆ ಕಟ್ಟಿಕೊಂಡರೆ ನಿಮ್ಮ ಬುದ್ದಿ ಹಾಗು ಸ್ಮರಣೆ ಶಕ್ತಿಯನ್ನು ಚುರುಕುಗೊಳಿಸುತ್ತದೆ ಎಂದು ಕೂಡ ಹೇಳುತ್ತಾರೆ. ಹಾಗೇನೇ ಹೊಟ್ಟೆಗೆ ಸಂಬಂದಿಸಿದ ಅನೇಕ ಸಮಸ್ಯೆಗಳನ್ನು ಕೂಡ ಸರಿಪಡಿಸಬಲ್ಲದು ಎಂದು ಹೇಳುತ್ತಾರೆ. ಈ ಜನಿವಾರವನ್ನು ಹಾಕಿಕೊಳ್ಳುವುದು ಕೂಡ ನೆಲದ ಮೇಲೆ ಕಾಲು ಮಡಿಚಿಕೊಂಡು ಹಾಕಿಕೊಳ್ಳುವ ಪದ್ಧತಿ ಆಗಿರುವದರಿಂದ ಬೆನ್ನು ನೇರವಾಗಿ ಇರಬೇಕಾಗುತ್ತದೆ. ಇದರಿಂದ ಬೆನ್ನಿನ ಸಮಸ್ಯೆ ಕೂಡ ಬಾರದ ಹಾಗೆ ಇದರಿಂದ ಉಪಯೋಗವಾಗುತ್ತದೆ.

ಈ ಜನಿವಾರದಲ್ಲಿ 3 ದಾರಗಳಿವೆ ಈ ಮೂರೂ ದಾರಗಳನ್ನು ಮೂರೂ ದೇವತೆಗಳನ್ನು ಸೂಚಿಸಲಾಗುತ್ತದೆ. ಒಂದು ದಾರ ಪಾರ್ವತೀ (ಶಕ್ತಿ), ಎರಡನೆಯದು ಲಕ್ಷ್ಮಿ (ಸಂಪತ್ತು) ಹಾಗು ಮೂರನೆಯದು ಸರಸ್ವತಿ (ಜ್ಞಾನ) ಎಂದು ಪವಿತ್ರವಾಗಿ ಪರಿಗಣಿಸಲಾಗುತ್ತದೆ. ಹಾಗೇನೇ ಒಮ್ಮೆ ನೀವು ಜನಿವಾರ ಧರಿಸದರೆ ನಿಮ್ಮ ಜೀವನದುದ್ದಕ್ಕೂ ಯಾವುದೇ ನಕಾರಾತ್ಮಕ ಶಕ್ತಿ ಹಾಗು ಆಲೋಚನೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆ ಗಳು ಕೂಡ ಇದೆ. ಇನ್ನು ಈ ಜನಿವಾರ ಧರಿಸುವವರಿಗೆ ಇತರ ಜನರನ್ನು ಹೋಲಿಸಿದರೆ ರಕ್ತದೊತ್ತಡ ಕೂಡ ಕಡಿಮೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *