ತಿಂಗಳಿಗೆ ಕೇವಲ 2000/- ಹೂಡಿಕೆ ಮಾಡಿ 1ಕೋಟಿ 30 ಲಕ್ಷ ಗಳಿಸಿ! ನಿವೃತ್ತಿ ಜೀವನವನ್ನು ಭದ್ರಗೊಳಿಸಿ.
ಜೀವನ ಎಂದಮೇಲೆ ಕಷ್ಟ ಸುಖಗಳು ಇದ್ದದ್ದೇ ಆದರೆ ಸುಖ ಇದ್ದಾಗ ಎಲ್ಲರೂ ಇರುತ್ತಾರೆ ಕಷ್ಟ ಎಂದಾಗ ದೂರ ಓಡಿ ಹೋಗುತ್ತಾರೆ. ಇಷ್ಟೇ ಜೀವನ, ಅದಕ್ಕಾಗಿ ನಮ್ಮ ಜೀವನದ ಭದ್ರತೆ ನಮ್ಮದೇ ಕೈಯಲ್ಲಿ ಇದೆ. ಯಾರ ಮೇಲೆ ಅವಲಂಬಿತರಾಗದೆ ಬದುಕುವ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ನಾವು ನಮ್ಮ ಮುಂದಿನ ಜೀವನದ ದಾರಿಗೆ ಹಣ ಸಂಪಾದನೆ ಮಾಡಬೇಕು. ಸಂಪಾದಿಸಿದ ಹಣವನ್ನು ಸ್ವಲ್ಪ ಸ್ವಲ್ಪ ಸರಿಯಾದ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ಅದೇ ಬೆಳೆದು ದೊಡ್ಡ ಸಂಪತ್ತಾಗುತ್ತದೆ. ಆದರೆ ಹೂಡಿಕೆ ಮಾಡುವ ವಿಧಾನ ಸರಿಯಾಗಿ ಇರಬೇಕು ಅಷ್ಟೇ .
ಕಾಲೇಜು ಮುಗಿಸಿ ಮೊದಲ ಕೆಲಸದಲ್ಲಿ ಎಲ್ಲರಿಗೂ ಲಕ್ಷಾಂತರ ಸಂಬಳ ಸಿಗುವುದಿಲ್ಲ. ಆದರೆ ಸಿಕ್ಕಿದ ಸ್ವಲ್ಪ ಸಂಬಲದಲ್ಲೂ ಅಲ್ಪ ಮೊತ್ತವನ್ನು ಹೂಡಿಕೆ ಮಾಡಿದರೆ ಮುಂದೆ ಅದೇ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಕು. ಯಾರ ಮೇಲೂ ಕೂಡ ಅವಲಂಬನೆ ಆಗಿ ಬದುಕುವ ಅಗತ್ಯ ಇಲ್ಲ. ಅದಕ್ಕಾಗಿ ನಾವು ಹೂಡಿಕೆ ಮಾಡುವಾಗ ಸರಿಯಾದ ಹೂಡಿಕೆ ಮಾಡಬೇಕು. ಅಂತಹ ಹೂಡಿಕೆಗಳಲ್ಲಿ ಒಂದು SIP.
ವ್ಯವಸ್ಥಿತ ಹೂಡಿಕೆ ಯೋಜನೆ Systematic Investment Plan (SIP) ಈ ಹೂಡಿಕೆಯೂ ಒಂದು ಶಿಸ್ತುಬದ್ಧ ವಿಧಾನವಾಗಿದ್ದು, ಮ್ಯೂಚುವಲ್ ಫಂಡ್‌ಗೆ ನಿಗದಿತ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡುವುದನ್ನು ಒಳಗೊಂಡಿರುತ್ತದೆ. ಪ್ರತಿ ತಿಂಗಳು ಕೂಡ ನೀವು ನಿಮ್ಮ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಬಹುದು. SIP ಗಳು ಹೂಡಿಕೆದಾರರಿಗೆ ಕಾಲಾನಂತರದಲ್ಲಿ ಸಂಪತ್ತನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮಗೆ ಸಂಬಳ ಎಷ್ಟೇ ಇರಲಿ ತಿಂಗಳಿಗೆ ಒಂದು 2000/- ಮೊತ್ತವನ್ನು ನಿಮ್ಮ 25ನೆಯ ವಯಸ್ಸಿಗೆ ನೀವು ಹೂಡಿಕೆ ಮಾಡಲು ಶುರು ಮಾಡಿದರೆ ವಾರ್ಷಿಕ ಅಂದಾಜು 12% ರಿಟರ್ನ್ ಮೂಲಕ ನಿಮ್ಮ ನಿವೃತ್ತಿ ಸಮಯದಲ್ಲಿ ಅದು 1 ಕೋಟಿ 30 ಲಕ್ಷ ಆಗಿರುತ್ತದೆ. ಹೌದು ಅಚ್ಚರಿ ಅನಿಸಿದರೂ ಇದು ನೈಜ ಸಂಗತಿ. ಆದರೆ ನೀವು ಹೂಡಿಕೆ ಮಾಡುವ ಮುನ್ನ ಕಂಪನಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅತಿ ಹೆಚ್ಚು ರಿಟರ್ನ್ ಕೊಡುವ ಕಂಪನಿ ಯಲ್ಲಿಯೇ ಹೂಡಿಕೆ ಮಾಡಿ.