ಪೋಸ್ಟ್ ಆಫೀಸ್ ಈ ಸ್ಕೀಂ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15ಲಕ್ಷ ಪಡೆಯಿರಿ! ಯಾವುದು ಆ ಸ್ಕೀಂ?
ಹಣ ಮಾಡಬೇಕು ಎಂಬುವುದು ಎಲ್ಲರ ಬಯಕೆ. ದುಡಿದು ಉಳಿದ ಅಲ್ಪ ಸ್ವಲ್ಪ ಮೊತ್ತವನ್ನು ಎಲ್ಲಾದರೂ ಸೇಫ್ ಇರುವ ಜಾಗದಲ್ಲಿ ಹೂಡಿಕೆ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೆಲವು ಕಡೆ ಹೆಚ್ಚಿನ ಹಣದ ಆಸೆಗೆ ಒಳಗಾಗಿ ಇದ್ದ ಹಣವನ್ನು ಕಳೆದು ಕೊಂಡ ಹಲವಾರು ನಿದರ್ಶನ ಗಳು ಕೂಡ ಇದೆ. ಹಾಗಿರುವಾಗ ತಾವು ಕಷ್ಟ ಪಟ್ಟು ದುಡಿದ ಹಣ ಸುಮ್ಮನೆ ಪೋಲು ಮಾಡದೇ ಒಂದು ಒಳ್ಳೆಯ ವಿಧಾನದಲ್ಲಿ ಹೂಡಿಕೆ ಮಾಡಿ ಅದರ ಮೂರು ಪಟ್ಟು ಹಣ ಗಳಿಸುವ ಸ್ಕೀಂ ಬಗೆಗೆ ನಾವು ಇಂದು ತಿಳಿಸುತ್ತಾ ಇದ್ದೇವೆ.
ಈ ಯೋಜನೆಯ ಮೂಲಕ ನೀವು ಮೊತ್ತವನ್ನು ಮೂರು ಪಟ್ಟು ಹೆಚ್ಚು ಮಾಡಬಹುದು, ಅಂದರೆ ರೂ. 5,00,000 ಹೂಡಿಕೆ ಮಾಡಿದರೆ, ನೀವು ರೂ.15,00,000 ಕ್ಕಿಂತ ಹೆಚ್ಚು ಹಣ ಒಟ್ಟು ಮಾಡಬಹುದು. ನೀವು ಐದು ವರ್ಷಗಳವರೆಗೆ ನಿಮ್ಮ ಹಣವನ್ನು ಹೂಡಿಕೆ ಮಾಡಬೇಕು. ಪೋಸ್ಟ್ ಆಫೀಸ್ 5 ವರ್ಷಗಳ ಲಾಕ್-ಇನ್ ಮೇಲೆ ಶೇಕಡಾ 7.5 ರ ಬಡ್ಡಿದರವನ್ನು ಒದಗಿಸುತ್ತಿದೆ. ಪ್ರಸ್ತುತ ಬಡ್ಡಿ ದರದ ಪ್ರಕಾರ, ನೀವು 7,24,974 ರೂ.ಗಳನ್ನು ಮೆಚ್ಯೂರಿಟಿ ಮೊತ್ತವಾಗಿ ಪಡೆಯುತ್ತೀರಿ.
ಈ ಹಣವನ್ನು ಹಿಂಪಡೆಯಬೇಡಿ, ಇನ್ನೂ ಐದು ವರ್ಷಕ್ಕೆ ಲಾಕ್ ಮಾಡಿ. ಈ ರೀತಿಯಾಗಿ, ನೀವು 10 ವರ್ಷಗಳಲ್ಲಿ 5,51,175 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಒಟ್ಟು ಮೊತ್ತ 10,51,175 ರೂ. ಇದನ್ನು 15 ಲಕ್ಷ ರೂಪಾಯಿಯನ್ನಾಗಿ ಮಾಡಲು, ನೀವು ನಿಮ್ಮ ಹಣವನ್ನು ಇನ್ನೂ ಐದು ವರ್ಷಗಳವರೆಗೆ ಮರುಹೂಡಿಕೆ ಮಾಡಬೇಕಾಗುತ್ತದೆ. ಈ ರೀತಿಯಾಗಿ, ನೀವು ಒಂದೇ ಯೋಜನೆಯಡಿ ಎರಡು ಬಾರಿ ಮರುಹೂಡಿಕೆ ಮಾಡಿದರೆ ನಿಮ್ಮ ಬಡ್ಡಿ 10,24,149 ರೂ. ನಿಮ್ಮ ಒಟ್ಟು ಆದಾಯ ರೂ 15 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಝೀರೋ ರಿಸ್ಕ್ ನಲ್ಲಿ ನಿಮ್ಮ 5 ಲಕ್ಷವನ್ನು 15 ಲಕ್ಷವಾಗಿ ಮಾಡಬಹುದು. ಇಂದೇ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಈ ಸ್ಕೀಂ ಬಗ್ಗೆ ವಿಚಾರಿಸಿ. ನಿಮ್ಮ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿರಿ.