ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಲು ಇನ್ನು ಮುಂದೆ ಹಣ ಕಟ್ಟಬೇಕು? SEBI ಹೇಳಿದ್ದೇನು?
ದೇಶದಲ್ಲಿ ಅತೀ ಹೆಚ್ಚು ಹಣ ಜನರು ಹೂಡಿಕೆ ಮಾಡಿರುವುದು ಷೇರು ಮಾರುಕಟ್ಟೆಯಲ್ಲಿ. ಹೌದು ಅತಿ ಹೆಚ್ಚಿನ ಹಣದ ಹರಿವು ಷೇರು ಮಾರುಕಟ್ಟೆಯಲ್ಲಿ ಇದೆ. ಇತ್ತೀಚಿನ ಬ್ಯಾಂಕಿಂಗ್ ವರದಿಗಳ ಪ್ರಕಾರ ಜನರು ಬ್ಯಾಂಕ್ ನಲ್ಲಿ ಹಣ ಇಡುವುದನ್ನು ಕಡಿಮೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಜನರು ಅಲ್ಲಿಯೇ ಹೆಚ್ಚಿನ ಲಾಭ ಕೂಡ ಗಳಿಸುತ್ತಾರೆ. ಈಗಿನ ಯುವ ಜನತೆ ಅಂತೂ ಬಹಳ ಆಸಕ್ತಿ ವಹಿಸಿ ಇತ್ತ ಕಡೆ ಮುಖ ಮಾಡಿದೆ. ಆದರೆ ಇಂದು SEBI ಬೋರ್ಡ್ ನ ಪೂರ್ಣಕಾಲಿಕ ಮೆಂಬರ್ ಆದ ಅನಂತ್ ನಾರಾಯಣ ಅವರು ಕೊಟ್ಟ ಹೇಳಿಕೆ ಈಗ ಸಂಚಳ ಮೂಡಿದೆ.
ಹೌದು ಕೆಲವು ಕಂಪನಿಗಳು ಡಿಮ್ಯಾಟ್ ಅಕೌಂಟ್ ಮೂಲಕ 0 ಬ್ರೋಕರೇಜ್ ಅಥವಾ ಅತಿ ಕಡಿಮೆ ಬೆಲೆಯ ಬ್ರೋಕರೆಜ್ ಮೂಲಕ ವಹಿವಾಟು ನಡೆಸುತ್ತಾ ಇದೆ. ಆದರೆ ಇನ್ನೂ ಮುಂದೆ ಹಾಗಿರುವುದಿಲ್ಲ ಯಾವುದು ಕೂಡ ಫ್ರೀ ಆಗಿ ಬರುವುದಿಲ್ಲ . ಇನ್ನು ಮುಂದಕ್ಕೆ ಹೂಡಿಕೆ ಮಾಡುವವರು ಮಾರ್ಕೆಟ್ ಡ್ರಿವನ್ ಚಾರ್ಜಸ್ (market driven charges) ನೀಡಬೇಕು ಎಂದು ಅವರು ಹೇಳಿದ್ದಾರೆ. ಆದರೆ ಇದು ಇನ್ನೂ sebi ಮೂಲಕ ಯಾವುದೇ ರೀತಿಯಲ್ಲಿ ಘೋಷಣೆ ಆಗಿಲ್ಲ ಆದರೆ ಇಂತಹ ಹೇಳಿಕೆ ನಾಳೆ ಮಾರುಕಟ್ಟೆಯಲ್ಲಿ ಸಣ್ಣ ಮಟ್ಟಿನ ಸಂಚಲನ ಮೂಡಿಸಿದರು ಅಚ್ಚರಿ ಇಲ್ಲ .
ಈಗಾಗಲೇ ಸರ್ಕಾರ ಎಲ್ಲಾ ರೀತಿಯ ಷೇರು ವಹಿವಾಟು ಮೇಲೆ ಟ್ಯಾಕ್ಸ್ ಹಾಕುತ್ತಾ ಇದು ಇದೀಗ SEBI ಯ ಪೂರ್ಣಕಾಲಿಕ ಮೆಂಬರ್ ಒಬ್ಬರ ಈ ಹೇಳಿಕೆ ಜನರನ್ನು ಕೆರಳಿಸಿದೆ. ಹೌದು ಸರ್ಕಾರ ಎಲ್ಲದರಲ್ಲೂ ಟ್ಯಾಕ್ಸ್ ಪಡೆಯುತ್ತಿದೆ ಇನ್ನೂ sebi ಕೂಡ ಶುರು ಮಾಡಿದರೆ ಜನರು ಮಾರುಕಟ್ಟೆಯಿಂದ ದೂರ ಸರಿಯುತ್ತಾರೆ ಎಂದು ಹೇಳಿದೆ. ಕೆಲವು ಜನರು ಇದಕ್ಕೂ ಸರ್ಕಾರವನ್ನು ದೂರುತ್ತಾ ಇದ್ದು ಇನ್ನೂ SEBI ಅವರ ಆಫೀಸಿಯಲ್ ಘೋಷಣೆ ಬಗೆಗೆ ಕಾದು ನೋಡಬೇಕು. ಏನೇ ಆಗಲಿ ಷೇರು ವಹಿವಾಟು ನಡೆಸುವ ಮೇಲಂತೂ ಬರೆಯ ಮೇಲೆ ಬರೆ ಬಿದ್ದ ಹಾಗೆ ಆಗಿದೆ.