ಚಿನ್ನ ಗೆದ್ದಿದ್ದ ಇರಾನ್ ಸದೆಗ್ ಅವರನ್ನು ಡಿಸ್ಕ್ವಾಲಿಫ್ಯ್ ಮಾಡಲು ಕಾರಣ ಏನು? ಭಾರತದ ನವದೀಪ್ ಸಿಂಗ್ ಬೆಳ್ಳಿ ಪದಕದಿಂದ ಚಿನ್ನಕ್ಕೆ ಭಡ್ತಿ ಪಡೆದರು!
ನಿನ್ನೆ ನಡೆದ F41 ವಿಭಾಗದ ಜಾವಲಿನ್ ಥ್ರೋ ನಲ್ಲಿ ಭಾರತದ ನವದೀಪ್ ಅವರು ಬೆಳ್ಳಿಯ ಪದಕ ಗೆದ್ದಿದ್ದರು. ಅದೇ ರೀತಿಯಾಗಿ ಇರಾನಿನ ಸದೆಗ್ ಬೈಟ್ ಸಾಯನ್ ಅವರು ದಾಖಲೆ ಮಾಡುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಆದರೆ ಮುಂದೆ ನಡೆದ ಒಂದು ಸಣ್ಣ ಘಟನೆ ಚಿತ್ರಣವನ್ನೇ ಬದಲಿಸಿತು. ಹೌದು ಒಲಂಪಿಕ್ಸ್ ನಲ್ಲಿ ಅದರದ್ದೇ ಆದ ಕೆಲವು ನಿಯಮಗಳು ಇವೆ ಆ ನಿಯಮಗಳಿಗೆ ಬದ್ದರಾಗದೆ ಇದ್ದಲ್ಲಿ ಅದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ, ಅದೇ ಇರಾನಿನ ಪಾಲಿಗೆ ಕೂಡ ಆಗಿದ್ದು .
ತಮ್ಮ ಒಂದು ಸಣ್ಣ ಉದ್ಧಟತನದ ನಡತೆಯಿಂದ ವರ್ಷಾನುಗಟ್ಟಲೆ ಕಷ್ಟ ಪಟ್ಟು ಪಡೆದಿದ್ದ ಚಿನ್ನದ ಪದಕವನ್ನು ಕಳೆದುಕೊಳ್ಳುವಂತೆ ಮಾಡಿತು.
ಇಂಟರ್ನ್ಯಾಷನಲ್ ಒಲಂಪಿಕ್ಸ್ ಅಸೋಸಿಯೇಷನ್ ತನ್ನದೇ ಆದ ಕೆಲವೊಂದು ನಿಯಮಗಳಿವೆ. ಅದರ ಪ್ರಕಾರ ನಿಯಮ 8.1 ರ ಉಲ್ಲಂಘನೆಯ ಆಧಾರದಲ್ಲಿ ಇರಾನ್ ಆಟಗಾರರನ್ನು disqualify ಮಾಡಲಾಗಿದೆ. ಯಾವುದೇ ದೇಶದ ಆಟಗಾರ ಆಗಲಿ ತಮ್ಮ ದೇಶದ ಬಾವುಟ ಬಿಟ್ಟು ಬೇರೆ ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದ ಬಾವುಟಗಳನ್ನು ಹಿಡಿಯುವಂತೆ ಇಲ್ಲ. ರಾಜಕೀಯ ಘೋಷಣೆಗಳನ್ನು ಕೂಗುವಂತೆ ಇಲ್ಲ. ಆದರೆ ಇರಾನ್ ಆಟಗಾರ ಈ ಒಂದು ನಿಯಮದ ಉಲ್ಲಂಘನೆ ಮಾಡಿದ್ದು ಕಂಡುಬಂದ ಕಾರಣ ಅವರನ್ನು disqualify ಮಾಡಿ ಬೆಳ್ಳಿ ಪದಕ ಪಡೆದಿದ್ದ ಭಾರತದ ನವದೀಪ್ ಅವರನ್ನು ಭಡ್ತಿ ಮಾಡಿ ಅವರಿಗೆ ಚಿನ್ನದ ಪದಕ ನೀಡಲಾಯಿತು. ನಾಲ್ಕನೇ ಸ್ಥಾನ ಪಡೆದಿದ್ದ ಆಟಗಾರನಿಗೆ ಕಂಚಿನ ಪದಕ ನೀಡಲಾಯಿತು .
ಇದರ ವಿರುದ್ಧವಾಗಿ ಇರಾನ್ ಪ್ರತಿಭಟನೆ ಮಾಡಿತಾದರೂ ಇದಕ್ಕೆ ಯಾವುದೇ ಸೊಪ್ಪು ಹಾಕದೆ ನಿಯಮ ಎಲ್ಲರಿಗೂ ಒಂದೇ. ನಿಯಮ ಯಾರು ಉಲ್ಲಂಘನೆ ಮಾಡಿದರು ಅದಕ್ಕೆ ಇದೆ ಶಿಕ್ಷೆ ಎಂದು ಖಡಾಖಂಡಿತವಾಗಿ ಹೇಳಿದೆ. ನಿಯಮಗಳು ಇರುವುದು ಪಾಲನೆ ಮಾಡಲು ಅದಕ್ಕೆ ಗೌರವ ತರುವ ಏನೇ ಕೆಲಸ ಆದರೂ ಅದನ್ನು ಸೈಹಿಸಿಕೊಳ್ಳುವ ಯಾವುದೇ ಮಾತಿಲ್ಲ ಎಂದು ಅಧಿಕಾರಿಗಳು ಹೇಳಿದರು.