Kacha Badam : ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್ ಸಂಪಾದನೆಗೆ ಬ್ರೇಕ್. ಮತ್ತೆ ಬೀದಿಗೆ ಬಂದ ಸ್ಟಾರ್. ಅಳುತ್ತ ನೋವು ತೋಡಿಕೊಂಡಿದ ಹಾಡುಗಾರ.
ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ದಿಂದ ಸ್ಟಾರ್ ಆದ ಕಚ್ಚಾ ಬಾದಾಮ್ (Kacha Badam) ಹಾಡು ಖ್ಯಾತಿಯ ಭುವನ್ ಬಡ್ಯಾಕರ್ (Bhuban Badyakar) ಇದೀಗ ಮತ್ತೊಮ್ಮೆ ಬೀದಿಗೆ ಬಂದಿದ್ದಾರೆ. ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದೀಗ ಕಾಪಿ ರೈಟ್ ನೋಟೀಸ್ ಬಂದ ಕಾರಣ ಬೀದಿಯಲ್ಲಿ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಅಷ್ಟಕ್ಕೂ ನಡೆದದ್ದು ಏನು?
ಕಚ್ಚಾ ಬಾದಾಮ್ (Kacha Badam) ಎನ್ನುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರೇಲ್ಸ್ ಮಾಡುವವರಿಗೆ ಇದೆ ಅಚ್ಚು ಮೆಚ್ಚಿನ ಹಾಡಾಗಿತ್ತು. ಇದಾದ ನಂತರ ಈ ಹಾಡು ಹಾಡಿದ ಗಾಯಕ ಹಳ್ಳಿಯವ ಎಂದು ಗೊತ್ತಾಗಿ ರಾತ್ರೋ ರಾತ್ರಿ ಇವರನ್ನು ಸ್ಟಾರ್ ಮಾಡಿತು ದೇಶದ ಜನತೆ. ಇದಾದ ನಂತರ ಇವರ ಹಾಡು ಹಾಗು ಇವರನ್ನು ಬಳಸಿಕೊಂಡು ಆಲ್ಬಮ್ ಕೂಡ ಮಾಡಲಾಗಿತ್ತು. ವಿಡಿಯೋ ಸಾಂಗ್ ಗೆ ಇವರ ಹಾಡು ಬಳಸಿ ರಿಮಿಕ್ಸ್ ಮಾಡಲಾಗಿತ್ತು.
ಇವರ ಈ ಹಾಡಿಗೆ ಒಬ್ಬ 3 ಲಕ್ಷ ನೀಡಿ ಯೌಟ್ಯೂಬ್ (Youtube) ಅಲ್ಲಿ ಹಾಕುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಒಪ್ಪಿದ ಈ ವ್ಯಕ್ತಿ ಹಣ ಪಡೆದು ಹಾಡು ಕೂಡ ಸಿಕ್ಕಾಪಟ್ಟೆ ವೈರಲ್ ಆಯ್ತು. ಇದಾದ ನಂತರ ಈ ವ್ಯಕ್ತಿ ಬೇರೆ ಕಡೆ ಈ ಹಾಡು ಹಾಡಲು ಆ youtuber ಅನುಮತಿ ನೀಡುತ್ತಿಲ್ಲ. ಕಾಂಟ್ರಾಕ್ಟ್ ಪ್ರಕಾರ ಬೇರೆ ಎಲ್ಲೂ ಈ ಹಾಡನ್ನು ಅನುಮತಿ ಇಲ್ಲದೆ ಬಳಸ ಬಾರದು ಎಂದು ಹೇಳಿತ್ತು. ಓದದೇ ಇರುವ ಈ ವ್ಯಕ್ತಿ ಸಹಿ ಹಾಕಿಸಿಕೊಂಡು ಇದೀಗ ಎಲ್ಲೂ ಈ ಹಾಡನ್ನು ಶೋ ಗಳಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ.
ತನಗೆ ಗೊತ್ತಿಲ್ಲದೇ ಕಾಪಿ ರೈಟ್ ಕಾಂಟ್ರಾಕ್ಟ್ ಗೆ ಸಹಿ ಮಾಡಿಕೊಂಡಿದ್ದ ಭುವನ್ ಗೆ ಇಂದು ಈ ಹಾಡು ಎಲ್ಲೂ ಬಳಸಲು ಸಾಧ್ಯವಾಗುತ್ತಿಲ್ಲ. ತನ್ನದೇ ಹಾಡನ್ನು ಇಂದು ಹಾಡಲು ಸಾಧ್ಯವಾಗುತ್ತಿಲ್ಲ. ಕಾಪಿ ರೈಟ್ ನೋಟೀಸ್ ಮೇಲೆ ನೋಟೀಸ್ ಬರುತ್ತದೆ. ಈ ಹಾಡಿನಿಂದನೆ ಹೊಟ್ಟೆಪಾಡು ನಡೆಸುತ್ತಿದ್ದ ಈ ವ್ಯಕ್ತಿ ಇಂದು ಯಾವುದು ಇಲ್ಲದೆ ಅನ್ನಕ್ಕಾಗಿ ಅಲೆದಾಡುತ್ತಿದ್ದಾರೆ. ಅಂದು ಸಿಕ್ಕಿದ ಗೌರವ, ಹಣ ಸನ್ಮಾನ ಇದೀಗ ಏನು ಸಿಗುತ್ತಿಲ್ಲ.