Kannada BigBoss Season9: ಬಿಗ್ ಬಾಸ್ ಮನೆಯಿಂದ ಔಟ್ ಆದ ವಿನೋದ್ ಗೊಬ್ಬರಗಾಲ.

185

)ವಿನೋದ್ ಗೊಬ್ಬರಗಾಲ (Vinod Gobbaragala) ಹಳ್ಳಿ ಪ್ರತಿಭೆ ಕಲರ್ಸ್ ಕನ್ನಡ (Colors Kannada) ದಲ್ಲಿ ಪ್ರಸಾರಾಗುತ್ತಿದ್ದ ಮಜಾ ಭಾರತ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯವಾದಂತಹ ವ್ಯಕ್ತಿ. ತಮ್ಮ ಹಾಸ್ಯ ಚತುರತೆ ಮೂಲಕ ಇಡೀ ಕರ್ನಾಟಕವನ್ನು ನಗೆ ಕಡಲಿನಲ್ಲಿ ತೇಲಾಡಿಸಿ, ಕಾರಂತಕದದ ದೊಡ್ಡ ರಿಯಾಲಿಟಿ ಶೋ ಅಂತಾನೆ ಕರೆಸಿಕೊಳ್ಳೋ ಬಿಗ್ ಬಾಸ್ ನಲ್ಲಿ (Kannada Biggboss Season ಸ್ಥಾನ ಪಡೆದಿದ್ದರು. ಇದು ಒಬ್ಬ ಸಾಮಾನ್ಯ ವ್ಯಕ್ತಿ ಟಿವಿ ಮಾದ್ಯಮದಲ್ಲಿ ಪಡೆಯಬಲ್ಲ ಅತಿ ಎತ್ತರದ ಸ್ಥಾನ ಎಂದರೆ ತಪ್ಪಾಗಲಾರದು.

pc-tvice media

ಕಳೆದ ವಾರ ದೀಪಿಕಾ ದಾಸ್ (Deepika Das) ಅವರು ಎಲಿಮಿನೇಷನ್ ಮೂಲಕ ಹೊರಗೆ ಹೋಗಿದ್ದರು ಕೂಡ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಅದಕ್ಕಿಂತ ಮೊದಲು ಯಾವುದೇ ಎಲಿಮಿನೇಷನ್ ಇರಲಿಲ್ಲ. ವಿನೋದ್ ಅವರಿಗಿಂತ ಮೊದಲು ಮನೆಯಿಂದ ಔಟ್ ಆಗಿದ್ದವರು ಸಾನ್ಯ ಅಯ್ಯರ್ (Saanya Iyer). ಇದೀಗ ಎರಡು ವಾರ ನಂತರ ವಿನೋದ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಿದಿದ್ದು ಮನೋರಂಜನೆಗೆ ಬ್ರೇಕ್ ಬಿದ್ದಂತಾಗಿದೆ.

ಕಳೆದ ವಾರ ದೀಪಿಕಾ ದಾಸ್ (Deepika das) ಅವರು ಮನೆಯಿಂದ ಎಲಿಮಿನೇಷನ್ ಆಗಿ ಹೊರಗೆ ಹೋಗಿದ್ದಾಗ ಎಲ್ಲರು ಶಾಕ್ ಗೊಂಡಿದ್ದರು. ಕಾರಣ ಅವರು ಬಲಿಷ್ಠ ಸ್ಪರ್ದಿಗಳಲ್ಲಿ ಪ್ರಮುಖರಾಗಿದ್ದರು. ಇದೀಗ ವಿನೋದ್ ಅವರು ಮನೆಯಿಂದ ಹೊರಗೆ ಹೋಗುತ್ತಿದ್ದು ಮನೆಯಲ್ಲಿ ದೊಡ್ಡ ತಿರುವು ತಂದಿದೆ. ವಿನೋದ್ (Vinod Gobbaragala) ಅವರು ಟಾಸ್ಕ್, ಮನೋರಂಜನೆ, ಹಾಗು ವ್ಯಕ್ತಿತ್ವ ಎಲ್ಲದರಲ್ಲೂ ಕೂಡ ಸೈ ಎನಿಸಿಕೊಂಡ ಸ್ಪರ್ದಿ. ಇವರನ್ನು ಮನೆಯಿಂದ ಔಟ್ ಮಾಡಿದ್ದೂ ಎಲ್ಲರಲ್ಲೂ ಬೇಸರ ತಂದಿದೆ. ಇನ್ನು ಈಗಾಗಲೇ ಅರ್ಧ ಬಿಗ್ ಬಾಸ್ ಮನೆಯಲಿ ಸ್ಪರ್ದಿ ಯಾಗಿ ಕಾಣಿಸಿಕೊಂಡಿದ್ದ ವಿನೋದ್ ಅವರ ಈ ಸಾಧನೆ ಚಿಕ್ಕದೇನಲ್ಲ.

Leave A Reply

Your email address will not be published.