ಕಡೆಗೂ ಪರಶುರಾಮ್. ಥೀಮ್ ಪಾರ್ಕ್ ವಿಚಾರದಲ್ಲಿ ಮೌನ ಮುರಿದ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್? ಏನಿವರ ಪ್ರತಿಕ್ರಿಯೆ? ಇಲ್ಲಿ ಓದಿರಿ.
ರಾಜಕೀಯದಲ್ಲಿ ಮೇಲಾಟಗಳು ಸರ್ವೇ ಸಾಮಾನ್ಯ, ಒಬ್ಬರ ಮೇಲೊಬ್ಬರು ಪೈಪೋಟಿಯಲ್ಲಿ ಇರುತ್ತಾರೆ . ತಮ್ಮ ತಮ್ಮ ಪ್ರತಿಷ್ಠೆ ಘನತೆ ಉಳಿಸಿಕೊಳ್ಳುವಲ್ಲಿ ದಿನಾ ಒಂದಿಲ್ಲ ಒಂದು ಕೆಲಸಗಳು ಆಗುತ್ತಲೇ ಇರುತ್ತದೆ. ಅಂತಹದೇ ಚುನಾವಣೆ ಸಂದರ್ಭದಲ್ಲಿ ನಡೆಯುವ ಕೆಲವು ರಾಜಕೀಯದ ಕೆಸರೆರಚಾಟ. ಇಂತಹದೇ ಆಪಾದನೆಗೆ ಒಳಗಾದವರು ಕಾರ್ಕಳ ಶಾಸಕ ಸನ್ಮಾನ್ಯ ಶ್ರೀ ಸುನಿಲ್ ಕುಮಾರ್ ಅವರು. ಚುನಾವಣೆಗೂ ಮುನ್ನ ಕ್ಷಿಪ್ರ ಗತಿಯಲ್ಲಿ ಕೆಲಸ ಮುಗಿಸಿ ಜನರಿಗಾಗಿ ತೆರೆದಿದ್ದೆ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಈ ಒಂದು ಯೋಜನೆ ಕೈ ತೆಗೆದುಕೊಂಡಿದ್ದ ಸುನಿಲ್ ಕುಮಾರ್ ಅವರು ಚುನಾವಣೆ ಹತ್ತಿರ ಬರುವಾಗ ಚುನಾವಣೆಗೂ ಮುನ್ನ ಇದನ್ನು ಲೋಕಾರ್ಪಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಮಾಡಿದ ಯೋಜನೆ.
ಆದರೆ ಮುಂದೊಂದು ದಿನ ಇದುವೇ ಇವರಿಗೆ ಮುಳುವಾಗಿ ಪರಿಣಮಿಸಿತು. ಕಳಪೆ ಕಾಮಗಾರಿ ನೆಪದಲ್ಲಿ ಎದ್ದ ಭುಗಿಲು ನಿಲ್ಲುವ ಮಾತೆ ಕೇಳಲಿಲ್ಲ. ಕೊನೆಗೂ ಅದು ನಕಲಿ ಮೂರ್ತಿ ಎನ್ನುವ ಮಟ್ಟಕ್ಕೆ ಸುದ್ದಿ ಆಯಿತು. ಥೀಮ್ ಪಾರ್ಕ್ ಸದ್ಯದ ಮಟ್ಟಿಗೆ ಮುಚ್ಚಲು ಪಟ್ಟಿತು. ಆದರೆ ಇದು ಬಹಳಷ್ಟು ಡ್ಯಾಮೇಜ್ ಮಾಡಿದ್ದು ಬಿಜೆಪಿ ಪಕ್ಷಕ್ಕೆ ಎಂದರು ತಪ್ಪಾಗಲಿಕ್ಕಿಲ್ಲ. ಸುನಿಲ್ ಕುಮಾರ್ ಅವರು ಕ್ಷೇತ್ರ ಹೇಗೋ ಗೆದ್ದು ಬಿಟ್ಟರು ಆದರೆ ತಮ್ಮ ವರ್ಚಸ್ಸು ಸ್ವಲ್ಪ ಕಡಿಮೆ ಆಯ್ತು ಎಂದರೆ ಅಚ್ಚರಿ ಏನಿಲ್ಲ. ಹೀಗೆ ಇಂದಿಗೂ ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಆರೋಪ ಪ್ರತ್ಯಾರೋಪ ಮಾಡುತ್ತಾ ಇದ್ದು. ತನಿಖೆ ಕೂಡ ನಡೆಸಿ ಆಗಿದೆ. ಆದರೆ ಕಾಂಗ್ರೆಸ್ ಎಲ್ಲೂ ಕೂಡ ತಮ್ಮದೇ ಸರ್ಕಾರ ಇದ್ದರೂ ಇದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ ಬದಲಾಗಿ ಮಾಧ್ಯಮದಲ್ಲಿ ಮಾತ್ರ ಈ ಬಗೆಗೆ ಮಾತಿನ ಚಕಮಕಿಗಳು ಆಗುತ್ತಲೇ ಇರುತ್ತದೆ.
ಆದರೆ ಈ ವಿಚಾರದಲ್ಲಿ ಸದಾ ಮೌನ ಇದ್ದ ಶಾಸಕರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರ ಇರುವಾಗ ಕೊಟ್ಟ ಈ ಯೋಜನೆ ಇದರಲ್ಲಿ ಯಾವುದೇ ಭ್ರಷ್ಟಚಾರ ಆಗಿಲ್ಲ. ಬದಲಾಗಿ ಕಾಂಗ್ರೆಸ್ ಇದನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ. ಬ್ರಾಂಡ್ ಕಾರ್ಕಳ ಮಾಡಿ ಟೂರಿಸಂ ಉತ್ತೇಜನ ನೀಡುವುದು ನನ್ನ ಕನಸು. ಕಾರ್ಕಳವನ್ನು ಬೆಳೆಸಬೇಕು ಪ್ರವಾ ತಾನವಾಗಿ ಮಾಡಬೇಕು ಎಂಬುದು ನನ್ನ ಕನಸು. ಈ ಯೋಜನೆ ನನ್ನ ಕನಸಿನ ಕೂಸು ಇದನ್ನು ಮುಂದೆ ಆದರೂ ನಾನು ಮಾಡಿಯೇ ಸಿದ್ಧ. ರಾಜಕೀಯ ಲಾಭಕ್ಕೋಸ್ಕರ ಈ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ ಅಷ್ಟೇ. ಎಲ್ಲವೂ ಸರಿಯಾಗುತ್ತದೆ ಮುಂದೆ ಈ ಪಾರ್ಕ್ ಜನರಿಗೆ ಬಹಳಷ್ಟು ಅನುಕೂಲ ಆಗಲಿದೆ. ಅದೆಷ್ಟೋ ಜನರಿಗೆ ಉದ್ಯೋಗ ಕೂಡ ಸೃಷ್ಟಿ ಆಗಲಿದೆ ಎಂದು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.