News Update: ಹಿಂದೂಗಳ ಒಗ್ಗಟ್ಟಿನ ಹೋರಾಟಕ್ಕೆ ಜಯ. ರಾಜ್ಯದಲ್ಲಿ ದೇವಾಲಯಗಳಿಗೆ ತುರ್ತು ಸುತ್ತೋಲೆ ಹೊರಡಿಸಿದ ಕಾಂಗ್ರೆಸ್ ಸರಕಾರ.
ಕಾಂಗ್ರೆಸ್ ಸರ್ಕಾರ ಬಂದಾಗ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತದೆ. ಆದರೆ ಇದೀಗ ಈ ಒಂದು ನಿರ್ಧಾರ ಮಹತ್ತರ ವಾಗಿದೆ. ಇತ್ತೀಚೆಗೆ ತಿರುಪತಿ (Tirupati Laddoos) ಅಲ್ಲಿ ನಡೆದ ಅಧರ್ಮದ ಕೆಲಸ ಬಹಳ ಸುದ್ದಿಯಲ್ಲಿದೆ. ದೇವರ ಪ್ರಸಾದಕ್ಕೆ ದನದ ಕೊಬ್ಬು (Beef tallow) ಮತ್ತು ಮೀನಿನ ಎಣ್ಣೆ (Fish Oil) ಬಳಸಲಾಗಿತ್ತು ಎಂದು ದೃಢ ವಾದ ನಂತರ ಆಕ್ರೋಶ ಹೊರಹೊಮ್ಮಿತು. ಮೊದಲು ಕರ್ನಾಟಕದ ನಂದಿನಿ ಇಂದಲೇ ತಿರುಪತಿಗೆ ತುಪ್ಪದ ಸರಬರಾಜು ಆಗುತ್ತಿತ್ತು ಆದರೆ ಕೊನೆಗೆ ಜಗನ್ ರೆಡ್ಡಿ ಸರ್ಕಾರದ ಕೆಲವು ನೀತಿಗಳಿಂದ ಈ ಎಲ್ಲಾ ಆವಾಂತರ ಆಗಿತ್ತು.
ಆದರೆ ಈ ಘಟನೆ ಸುದ್ದಿಯಲ್ಲಿ ಬರುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಚ್ಚೆತ್ತು ಧಾರ್ಮಿಕ ದತ್ತಿ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ. ಹೌದು ಸುತ್ತೋಲೆ ಪ್ರಕಾರ ದೇವಸ್ಥಾನದ ಎಲ್ಲಾ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ತಯಾರಿಗೆ ನಂದಿನಿ ತುಪ್ಪ ಮಾತ್ರ ಬಳಸಬೇಕು . ನಂದಿನಿ (Nandini Ghee) ಅಲ್ಲದೆ ಬೇರೆ ಯಾವುದೇ ತುಪ್ಪಗಳನ್ನು ಬಳಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದು. ಕಾಂಗ್ರೆಸ್ ಸರ್ಕಾರದಿಂದ ಈ ಒಂದು ನಡೆ ಹಿಂದೂಗಳ ಪರ ನೀತಿ ಎಂದೇ ಹೇಳಲಾಗುತ್ತಿದೆ.
ಮತ್ತೊಂದೆಡೆ ಕೆಲವು ವಾದಗಳ ಪ್ರಕಾರ ಕೆಲವು ದೇವಸ್ಥಾನಗಳಲ್ಲಿ ಅಲ್ಲೇ ದನ ಸಾಕಿ ಅವರೇ ತುಪ್ಪ ತಯಾರು ಮಾಡುತ್ತಾರೆ. ಸರ್ಕಾರದ ಬೊಕ್ಕಸ ತುಂಬುವ ಸಲುವಾಗಿ ಈ ಒಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಅದೇನೇ ಇರಲಿ ಈ ಒಂದು ನಡೆಯಿಂದಾಗಿ ಬಹುತೇಕರಲ್ಲಿ ಸಂತಸ ಹುಟ್ಟಿದೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಸರ್ಕಾರದ ಹೊಣೆ. ಯಾರ ನಂಬಿಕೆ ಹೇಗೆ ಇರಲಿ ಮತ್ತೊಬ್ಬರ ನಂಬಿಕೆಯನ್ನು ಸಣ್ಣದಾಗಿ ಕಾಣುವ ಅಧಿಕಾರ ಯಾರಿಗೂ ಯಾರು ಕೊಟ್ಟಿಲ್ಲ. ಮತ್ತೊಂದು ಧರ್ಮವನ್ನು ಕೀಳು ಮಾಡಬೇಕು ಎಂದು ಆಲೋಚಿಸಿದರೆ ಅಂತಹ ಅಧರ್ಮಿಗಳಿಗೆ ಕಾಲವೇ ಉತ್ತರ ನೀಡುತ್ತದೆ.