KGF ಬಂದ ನಂತರ ಎಲ್ಲಾ ಸಿನೆಮಾದ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಉದಾಹರಣೆ ಇತ್ತೀಚಿಗೆ ಬಿಡುಗಡೆ ಆದಂತಹ ಸ್ಟಾರ್ ನಂತರ ಫ್ಲಾಪ್ ಸಿನೆಮಾಗಳು.
KGF ಚಾಪ್ಟರ್ ೨ ಚಿತ್ರ ಬಿಡುಗಡೆ ಅದ ನಂತರ ಬಾಲಿವುಡ್ ಆಗಲಿ ಯಾವುದೇ ಚಿತ್ರರಂಗವಾಗಲಿ ಹೊಸ ಸಿನೆಮಾಗಳು ಅದು ಕೂಡ ಸ್ಟಾರ್ ನಂತರ ಸಿನೆಮಾಗಳು ಯಾವುದೇ ಕಲೆಕ್ಷನ್ ಮಾಡುತ್ತಿಲ್ಲ. ಹಾಕಿದ ಬಂಡವಾಳ ತೆಗೆಯಲು ಕೂಡ ಹೆಣಗಾಡುತ್ತಿದೆ. ಇದಕ್ಕೆ ಕಾರಣ ಕನ್ನಡದ KGF ನ ಸಿನೆಮಾ ಕಥೆ, ಮ್ಯೂಸಿಕ್ ಹಾಗು ಸಿನಿಮಾಟೋಗ್ರಫಿ ಹಾಗು ಮೇಕಿಂಗ್. ಇದೆಲ್ಲ ಕಾರಣದಿಂದ ಜನರಲ್ಲಿ ಭಾರತೀಯ ಸಿನೆಮಾ ಮೇಲೆ ಹೊಸ ನಿರೀಕ್ಷೆ ಹುಟ್ಟಿಸಿದೆ. ಭಾರತೀಯ ಸಿನೆಮಾ ಕೂಡ ಒಳ್ಳೆ ಗುಣಮಟ್ಟದ ಸಿನೆಮಾ ಮಾಡಬಹುದು ಎಂದು ಯೋಚನೆ ಹುಟ್ಟುಹಾಕಿದೆ.
ಯಾವುದೇ ಚಿತ್ರರಂಗ ಇರಲಿ ೨೦೨೨ ರಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಾಧನೆ ಮಾಡಲಿಲ್ಲ. ರಾಜಮೌಳಿ ಸಿನೆಮಾ RRR ೧೦೦೦ ಕೋಟಿ ದಾಟಿದೆ. ನಂತರ ಬಂದ KGF ಇದೀಗ RRR ಅನ್ನು ಹಿಂದೆ ಸರಿಸಿದೆ. ಬಾಲಿವುಡ್ ನ ಗಂಗೂಬಾಯಿ ಕಥಿಯವಾಡಿ ಸಿನೆಮಾ ಬಿಟ್ಟರೆ ಹೇಳಿಕೊಳ್ಳುವಂತಹ ಯಶಸ್ಸು ಯಾವ ಸಿನೆಮಾಗೂ ಸಿಕ್ಕಿಲ್ಲ. ದೊಡ್ಡ ದೊಡ್ಡ ಹೆಸರಾಂತ ಸಿನೆಮಾಗಳಾದ ಹೇರೊಪಂತಿ೨, ರನ್ ವೇ, ಜೆರ್ಸಿ, ಬೀಸ್ಟ್, ಆಚಾರ್ಯ ಅಂತಹ ಸಿನೆಮಾಗಳು ಯಾವುದೇ ಸದ್ದು ಮಾಡದೇ ಥಿಯೇಟರ್ ಗೆ ಬಂದ ರೀತಿಯೇ ವಾಪಸು ಹೋಗಿದೆ. ಇದಕ್ಕೆ ಠಕ್ಕರ್ ನೀಡಿದ್ದು ಕನ್ನಡದ KGF ಚಾಪ್ಟರ್ ೨.
ಪ್ರೇಕ್ಷಕರಿಗೆ ಇಂದಿನ ಕಾಲದಲ್ಲಿ ಸಿನೆಮಾ ನಾಯಕನಗಿಂತ ಹೆಚ್ಚಾಗಿ ಮನೋರಂಜನೆ ಮುಖ್ಯ ಎನ್ನುವಂತಾಗಿದೆ. ಅದೇ ಕಾರಣಕ್ಕೆ ಕರ್ನಾಟಕದ ಯಶ್ ರವರ ಸಿನೆಮಾವನ್ನು ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ನೆಚ್ಚಿಕೊಂಡಿದೆ. ಹಾಗೇನೇ ಇಲ್ಲಿ ಮುಖ್ಯವಾಗಿ ಜನ ಇಷ್ಟಪಟ್ಟಿದ್ದು ಚಿತ್ರದ ಕಥೆ, ಮ್ಯೂಸಿಕ್, ನಿರ್ದೇಶನ ಹಾಗೇನೇ ಅದಕ್ಕೆ ಪೂರಕವೆಂಬಂತೆ ರಾಕಿಂಗ್ ಸ್ಟಾರ್ ಯಶ್ ರವರ ನಟನೆ. ಜನರು ಸಿನೆಮಾದ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದು ಮೊದಲು ಚಿತ್ರತಂಡ ಬಿಡುಗಡೆ ಮಾಡುವ ಟ್ರೈಲರ್ ಅಲ್ಲಿ. ಟ್ರೈಲರ್ ಅಲ್ಲಿ ವಿಭಿನ್ನವಾಗಿ ತೋರಿಸಿದ್ದರೆ ಜನರು ನಿರೀಕ್ಷೆ ಇಟುಕೊಂಡು ಚಿತ್ರ ಮಂದಿರಕ್ಕೆ ಬಂದು ಸಿನೆಮಾ ನೋಡುತ್ತಾರೆ.
ದೊಡ್ಡ ದೊಡ್ಡ ನಟರು ತಮ್ಮ ಚಿತ್ರ ಫ್ಲಾಪ್ ಅಂತ ಘೋಷಣೆ ಮಾಡಿಲ್ಲ, ಬದಲಾಗಿ ಕೊರೊನ ಮೇಲೆ ದೂರು ಹಾಕಿ ಜನರ ಬಳಿ ಸಿನೆಮಾ ನೋಡಲು ಹಣವಿಲ್ಲ ಎಂದು ಹೇಳಿ ತಿರುಗುತ್ತಿದ್ದರು. ಅದಾದ ನಂತರ ದಕ್ಷಿಣದ ಪುಷ್ಪ, RRR, ಹಾಗೇನೇ KGF ಚಿತ್ರಗಳು ಒಂದರ ಮೇಲೊಂದರಂತೆ ಕಲೆಕ್ಷನ್ ಮಾಡುವಾಗ ಜನರು ಚಿತ್ರದ ಕಥೆ ಚೆನ್ನಾಗಿದ್ದರೆ ಟಿಕೆಟ್ ಬೆಲೆ ಎಷ್ಟೇ ದುಬಾರಿ ಇದ್ದರು ಕೂಡ ಸಿನೆಮಾ ಮಂದಿರಕ್ಕೆ ಬಂದು ನೋಡುತ್ತಾರೆ ಎನ್ನುವುದು ಈ ಸಿನೆಮಾಗಳು ಸಾಬೀತು ಮಾಡಿದೆ. ಈಗಾಗಲೇ KGF ೩ ಕೂಡ ಬರುತ್ತದೆ ಎಂದು ತಂಡ ಹೇಳಿರುವುದು ಜನರ ನಿರೀಕ್ಷೆ ಹೆಚ್ಚಿಸಿದೆ.