KGF ಮೀರಿಸುತ್ತೆ ಅನ್ನೋ ನಿರೀಕ್ಷೆ ಹುಸಿ ಮಾಡುತ್ತೆ ಉಪೇಂದ್ರ ಹಾಗು ಕಿಚ್ಚ, ಶಿವಣ್ಣರ Kabza ಸಿನೆಮಾ. ಬೋರಾಗುತ್ತೆ ಸಿನೆಮಾ ಅಂತಿದ್ದಾರೆ ಅನೇಕರು.

ಕನ್ನಡ ಸಿನೆಮಾ ರಂಗ ಕಳೆದ ಎರಡು ವರ್ಷಗಳಲ್ಲಿ ದೇಶದ ಬೇರೆ ಬೇರೆ ಸಿನೆಮಾ ಇಂಡಸ್ಟ್ರಿ ಗಳು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದಕ್ಕೆ ಉದಾಹರಣೆ KGF ನ ಎರಡು ಭಾಗ ಕನ್ನಡ ಸಿನೆಮಾ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಕಲ್ಲೆಕ್ಷನ್ ಹಾಗೇನೇ ಜನಪ್ರಿಯತೆ ಗಳಿಸಿದ ಸಿನೆಮಾವಾದರೆ, ಚಾರ್ಲಿ ಹಾಗು ರಿಷಬ್ ಶೆಟ್ಟಿ ಅವರ ಕಾಂತಾರ ಸಿನೆಮಾ ನಾವೇನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿತು.

ಇದೀಗ ಮೂರೂ ವರ್ಷಗಳಿಂದ ಆರ್. ಚಂದ್ರು ಅವರ ನಿರ್ದೇಶನ ಹಾಗು ನಿರ್ಮಾಣ ಮಾಡಿದ ಕಬ್ಜ ಸಿನೆಮಾ ಬಹು ನಿರೀಕ್ಷೆಯಿಂದ ತೆರೆಗೆ ಬಂದಿದೆ. ಈ ಸಿನೆಮಾ ಮೇಲೆ ನಿರೀಕ್ಷೆ ಹೆಚ್ಚಾಗಲು ಕಾರಣ ಉಪೇಂದ್ರ, ಸುದೀಪ್ ಹಾಗು ಶಿವಣ್ಣ ಅವರು ಮೂರೂ ಜನರು ಒಟ್ಟಿಗೆ ಒಂದೇ ಸಿನೆಮಾದಲ್ಲಿ ನಟನೆ ಮಾಡಿದ್ದು. ಹಾಗೇನೇ ಈ ಸಿನೆಮಾ ಪಾನ್ ಇಂಡಿಯಾ ದಲ್ಲಿ ಬಿಡುಗಡೆ ಆಗುತ್ತಿರುವುದು. ಆದರೆ ಸಿನೆಮಾ ನೋಡಿ ಬಂದ ಜನರಿಂದ ಮಿಶ್ರ ಪ್ರತಿಕ್ರಿಯೆ ಭಾರತೊಂಡಗಿದೆ.

KGF ಮಾದರಿಯಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದ ಆರ್. ಚಂದ್ರು, ಸಿನೆಮಾ ಕ್ವಾಲಿಟಿ ಹಾಗು bgm ಉತ್ತಮವಾಗಿ ತೋರಿಸಿದ್ದರು. ಇದನ್ನೇ ಜನರು KGF ಸಿನೆಮಾವನ್ನು ಮೀರಿಸುತ್ತೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮಾರ್ಚ್ 17 ರಂದು ಬಿಡುಗಡೆ ಆದಾಗ ಜನರ ನಿರೀಕ್ಷೆ ಹುಸಿಯಾಗಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಚಂದ್ರು ಅವರ ನಿರ್ದೇಶನಕ್ಕೆ ನಮ್ಮ ಕಡೆಯಿಂದ 2 ಅಂಕ ಅಷ್ಟೇ ನೀಡುತ್ತಿದ್ದೇವೆ. ಇನ್ನು ಸಿನೆಮಾದಲ್ಲಿ ರವಿ ಬಸರೂರು ಅವರ ಮ್ಯೂಸಿಕ್ ನಡು ನಡುವಿನಲ್ಲಿ KGF ನೆನಪು ನೀಡಿದ್ದು, ಅದನ್ನೇ ಇಲ್ಲಿ ಬಳಸಿದ್ದರೋ ಎನ್ನುವ ಅನುಮಾನ ಕೂಡ ಬರುತ್ತದೆ.

ಇನ್ನು ನಟನೆ ಬಗ್ಗೆ ಮಾತಾಡುವುದಾದರೆ, ಉಪೇಂದ್ರ ಅವರಿಗೆ ತಕ್ಕಂತಹ ಪಾತ್ರ ಅಲ್ಲ. ಸುದೀಪ್ ಅವರು ಮೊದಲೇ ಎಂಟ್ರಿ ಪಡೆಯುತ್ತಾರೆ ಆದ್ರೂ, 10 ನಿಮಿಷ ಮಾತ್ರ ಮೊದಲಿಗೆ ಪೆರೇಡ್ ಮೇಲೆ ಕಾಣಿಸಿಕೊಂಡರೆ, ಕೊನೆಯಲ್ಲಿ 10 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ತೆರೆ ಹಿಂದೆ ಕಥೆ ಹೇಳುವ ರೀತಿಯಲ್ಲಿ ಇವರು ಸಿನೆಮಾದಲ್ಲಿ ಇರುತ್ತಾರೆ ಅಷ್ಟೇ. ಇನ್ನು ಶಿವಣ್ಣ ಕೊನೆಗೆ ಸುದೀಪ್ ಹಾಗು ಉಪೇಂದ್ರ ಫೈಟ್ ಅಲ್ಲಿ ಕಾಣಿಸಿಕೊಂಡರೆ ಇವರ ಬಗೆಗಿನ ಕಥೆ ಎರಡನೇ ಪಾರ್ಟ್ ಅಲ್ಲಿ ಗೊತ್ತಾಗಲಿದೆ.

ಸಿನೆಮಾ ಮೇಕಿಂಗ್ ಬಗ್ಗೆ ಹೇಳುವುದಾದರೆ vfx ಹಾಗು CGI ಬಳಸಿದ್ದಾರೆ ಆದರೆ ಅದನ್ನು ಉಪಯುಕ್ತವಾಗಿ ಬಳಸಿಕೊಳ್ಳಲಿಲ್ಲ. 1971 ನೇ ಇಸವಿಯಲ್ಲಿ ಅರಮನೆ ರೀತಿ ಕಟ್ಟಿದ್ದು, ಉಪೇಂದ್ರ ಅವರ ಅರಮನೆ ಬಯಲು ಸೀಮೆ ನಡುವಿನಲ್ಲಿ ಇಟ್ಟಿದ್ದು, ಸುತ್ತ ಮುತ್ತ ಏನೇನು ಮನೆ, ಮರ ಇಲ್ಲವೇ ಇಲ್ಲ. ಬರಿ ಖಾಲಿ ಖಾಲಿ ಕಾಣಿಸುತ್ತದೆ. ಇನ್ನು ಅಷ್ಟು ದೊಡ್ಡ ಅರಮನೆ ಯಲ್ಲಿ ಒಬ್ಬನೇ ಒಬ್ಬ ಉಪೇಂದ್ರ ನ ಸಹಚರರು ಕಾಣ ಸಿಗುವುದಿಲ್ಲ. ಒಟ್ಟಾರೆ BGM ರವಿ ಬಸರೂರ್ ನೀಡಿದ್ದು, ನಡು ನಡುವಿನಲ್ಲಿ ಡೈಲಾಗ್ ಗಳು ಕೇಳುವುದೇ ಇಲ್ಲ. ಸಿನೆಮಾ ಕಥೆ ಅಷ್ಟೇನೂ ಇಲ್ಲದೆ ಇದ್ದರು ಕೂಡ ರಕ್ತ ಸಿಕ್ತ ಸಿನೆಮಾವಾಗಿದೆ. ಅನೇಕರ ಪ್ರಕಾರ ಇದೊಂದು ಉತ್ತಮ ಸಿನೆಮಾವಲ್ಲ ಎನ್ನುವ ಅಭಿಪ್ರಾಯ ಬಂದಿದೆ. Review is by our writer. and this is his personal views.

kabzaKANTARAshivannasudeepupendra
Comments (0)
Add Comment