KGF Chapter 2 ಅಲ್ಲಿ ಮುಖ್ಯ ಪಾತ್ರವೇ ಇಲ್ಲ. ಅಭಿಮಾನಿಗಳಲ್ಲಿ ಬಹಳ ನಿರಾಸೆ.

1,798

KGF ಚಾಪ್ಟರ್ 2 ಇದೀಗಾಗಲೇ ಚಿತ್ರ ಮಂದಿರಕ್ಕೆ ಬರುವ ಎಲ್ಲಾ ತಯಾರಿ ಮುಗಿಸಿದ್ದು. ಇದೆ ಬರುವ ಏಪ್ರಿಲ್ 14ರಂದು ಸಿನಿ ಮಂದಿರಗಳನ್ನು ಪ್ರವೇಶ ಮಾಡಲಿದೆ . ರಾಜ್ಯ ಅಲ್ಲದೇ ದೇಶ ವಿದೇಶಗಳಲ್ಲಿ ಈ ಚಿತ್ರದ ಬಿಡುಗಡೆಗೆ ಜನರು ಕಾದು ಕುಳಿತಿದ್ದಾರೆ. ಮೊನ್ನೆ ತಾನೆ ಕನ್ನಡದ ಶ್ರೇಷ್ಠ ನಟ ಶಿವರಾಜ್ ಕುಮಾರ್ ಅವರು ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು , ಸಖತ್ ವೈರಲ್ ಆಗುತ್ತಿದೆ. ಆದರೆ ಇದರ ಜೊತೆಗೆ ವೀಕ್ಷಕರು ತುಸು ನಿರಾಶೆ ಕೂಡ ಆಗಿದೆ. ಕಾರಣ ಟ್ರೇಲರ್ ನಲ್ಲಿ ಎಲ್ಲೂ ಅನಂತ್ ನಾಗ್ ಅವರು ಕಾಣದೆ ಇರುವುದು.

ಈ ಹಿಂದೆಯೇ ಅನಂತ್ ನಾಗ್ ಚಿತ್ರದಲ್ಲಿ ಇಲ್ಲ ಅವರ ಬದಲಿಗೆ ಪ್ರಕಾಶ್ ರಾಜ್ ಅವರು ಇಂಗಳಗಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸುದ್ದಿ ಬಂದಾಗ ಜನರು ಬಹಳ ಬೇಸರ ವ್ಯಕ್ತ ಪಡಿಸಿದ್ದರು. KGF ಮೊದಲ ಭಾಗದ ಯಶಸ್ಸಿನಲ್ಲಿ ಅನಂತ್ ನಾಗ್ ಅವರ ಪಾತ್ರ ಬಹುಮುಖ್ಯ ವಾಗಿತ್ತು. ಇಡೀ ಕಥೆಯನ್ನು ಹೇಳಿದ್ದೆ ಅವರು. ಹಲವಾರು ಅಭಿಮಾನಿ ಬಳಗ ಅವರಿಗೆ ಸೃಷ್ಟಿ ಆಗಿತ್ತು. ಆದರೆ ಈಗ ಚಾಪ್ಟರ್ 2 ನಲ್ಲಿ ಅನಂತ್ ನಾಗ್ ಅವರು ಇಲ್ಲ ಎಂಬುವುದು ಕನ್ಫರ್ಮ್ ಆಯಿತು. ಇದರಿಂದ ಹಲವಾರು ಜನರು ಬೇಸರ ವ್ಯಕ್ತ ಪಡಿಸಿದರು.

ಈ ಹಿಂದೆ ಚಿತ್ರ ತಂಡ ಅವರ ಕೆಲವು ಶೂಟಿಂಗ್ ಬಾಕಿ ಇದೆ ಎಂದು ಹೇಳಿಕೆ ನೀಡಿತ್ತು ಆದರೆ ಇದೀಗ ಅವರು ಚಿತ್ರದಲ್ಲಿ ಇಲ್ಲ ಎಂಬ ವಿಚಾರ ಸತ್ಯ ಎಂಬಂತಾಗಿದೆ. ಹಾಗೆಯೇ ಅವರು ಅತೀ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದ ಕಾರಣ ಚಿತ್ರ ತಂಡ ಕೈ ಬಿಟ್ಟಿದೆ ಎಂದು ಒಂದು ವಲಯ ಹೇಳುತ್ತಿದೆ. ಹಾಗೆ ನೈಜವಾದ ಕಾರಣ ಏನು ಎಂಬುವುದನ್ನು ಚಿತ್ರ ತಂಡ ಕೂಡ ಬಿಟ್ಟು ಕೊಟ್ಟಿಲ್ಲ , ಹಾಗೆಯೇ ಅನಂತ್ ನಾಗ್ ಅವರು ಕೂಡ ಇದರ ಬಗ್ಗೆ ಏನು ಹೇಳಿಲ್ಲ.

Leave A Reply

Your email address will not be published.