KGF Chapter 2 ನಲ್ಲಿ ಅನಂತ್ ನಾಗ್ sir ಯಾಕೆ ಇಲ್ಲ? ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನಟ ಯಶ್?

390

ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಸಿನೆಮಾಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ನಮ್ಮ ಹೆಮ್ಮೆಯ ಕನ್ನಡಿಗನ ಚಿತ್ರ KGF ಚಾಪ್ಟರ್ 2. ಇದೆ ಬರುವ 14ರಂದು ಚಿತ್ರ ಮಂದಿರಕ್ಕೆ ಎಂಟ್ರಿ ಕೊಡಲಿರುವ ಚಿತ್ರ ಇದೀಗಾಗಲೇ ಅತೀ ಹೆಚ್ಚು ಪ್ರೀ ಬುಕಿಂಗ್ ಕೂಡ ಆಗಿದೆ. ಆದರೆ ಟ್ರೇಲರ್ ನೋಡಿದ ಜನರು ಮಾತ್ರ ಕೊಂಚ ನಿರಾಸೆಯಾಗಿದೆ. ಯಾಕೆಂದರೆ KGF ಮೊದಲ ಅಧ್ಯಾಯದ ಗೆಲುವಿನ ರೂವಾರಿ ಅನಂತ್ ನಾಗ್ ಅವರು ಎರಡನೇ ಭಾಗದಲ್ಲಿ ಇರಲಿಲ್ಲ.

ಅವರ ಬದಲಿಗೆ ಪ್ರಕಾಶ್ ರಾಜ್ ಇದ್ದದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದರೆ ಈ ವಿಚಾರದಲ್ಲಿ ಯಶ್ ಅವರು ಹೇಳಿದ್ದೇನು. ಅನಂತ್ ನಾಗ್ ಸರ್ ಅವರು ನಮಗೆ ಗುರುಗಳು ಇದ್ದ ಹಾಗೆ. ಅವರ ಸಿನೆಮಾಗಳನ್ನು ನೋಡಿ ನಾವು ಬೆಳೆದವರು. ಅವರ ಹೆಜ್ಜೆಯಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಅವರು ನಮ್ಮ ಕೈ ಹಿಡಿದು ನಡೆಸಿಕೊಂಡು ಹೋದವರು. ಅವರನ್ನು ಈ ಸಿನಿಮಾದಿಂದ ಕೈ ಬಿಟ್ಟಿದ್ದೇವೆ ಇಲ್ಲವೋ ಎಂದು ನೀವು ಸಿನೆಮಾ ನೋಡಿಯೇ ತಿಳಿದುಕೊಳ್ಳಬೇಕು.

ಮತ್ತು ನಿರ್ದೇಶಕರ ನಿರ್ಧಾರಗಳೇ ಅಂತಿಮ ಅದರಲ್ಲಿ ಯಾವುದೇ ಎರಡು ಮಾತಿಲ್ಲ. ನೀವು ಸಿನೆಮಾ ಸಂಪೂರ್ಣವಾಗಿ ನೋಡಿ ಆಗ ನಿಮಗೂ ಗೊತ್ತಾಗುತ್ತದೆ ಎಂದರು. ಹಾಗೆ ಮುಂದುವರೆಸಿ ಪ್ರಕಾಶ್ ರಾಜ್ ಒಬ್ಬ ಶ್ರೇಷ್ಠ ನಟ. ಅವರು ಚಿತ್ರವನ್ನು 5 ಭಾಷೆಗಳಲ್ಲಿ ಕೂಡ ಡಬ್ ಮಾಡಿದ್ದಾರೆ. ಇಡೀ ಚಿತ್ರ ತಂಡದಲ್ಲಿ 5 ಭಾಷೆಗಳಲ್ಲಿ ಡಬ್ ಮಾಡಿದ ನಟ ಅವರೊಬ್ಬರೆ ಎಂದಿದ್ದಾರೆ. ನೀವು ಚಿತ್ರವನ್ನು ನೋಡಿ ಎಲ್ಲಾ ಉತ್ತರಗಳು ನಿಮಗ್ ಸಿಗುತ್ತದೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರ ೧೪ ರಂದು ಬಿಡುಗಡೆಗೊಳ್ಳಲಿದ್ದು ದೇಶದೆಲ್ಲೆಡೆ ಹವಾ ಸೃಷ್ಟಿಸಿದೆ.

Leave A Reply

Your email address will not be published.