KGF Chapter 2 ರಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ಕೊಟ್ಟಿಲ್ಲ ಎಂದ ಪತ್ರಕರ್ತೆಗೆ ಕಟಕ್ಕಾಗಿ ಉತ್ತರಿಸಿದ ರಾಕಿ ಬಾಯ್. ಪೂರ್ತಿ ವೀಡಿಯೋ.
KGF Chapter 2 ಭಾರತದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ನಿರೀಕ್ಷಿಸಲ್ಪಟ್ಟ ಸಿನೆಮಾ. ದೇಶದಾದ್ಯಂತ ಅಲ್ಲದೇ ವಿದೇಶದಲ್ಲೂ ಅತೀ ಹೆಚ್ಚು ಸುದ್ದಿ ಮಾಡಿದ ಸಿನೆಮಾ. ಕನ್ನಡ ಸಿನೆಮಾ ದ ದಿಕ್ಕು ಬದಲಿಸಬಲ್ಲ ಸಿನೆಮಾ ಅಂದರು ಕೂಡಾ ತಪ್ಪಾಗಲಾರದು. ಕೆಜಿಎಪ್ ತಂಡ ದೇಶದ ಎಲ್ಲಾ ಕಡೆ ಪ್ರಚಾರ ಪ್ರಕ್ರಿಯೆ ಆರಂಭಿಸಿದೆ. ಇದೀಗ ಒಂದು ಸಂದರ್ಶನ ದೇಶದೆಲ್ಲೆಡೆ ಸುದ್ದಿ ಮಾಡುತ್ತಿದೆ. ಅನುಪಮಾ ಎನ್ನುವ ಭಾರತೀಯ ಸಿನೆಮಾ ಪತ್ರಕರ್ತೆ, ದೇಶದಲ್ಲಿಯೇ ಅತೀ ದೊಡ್ಡ ಪತ್ರಕರ್ತೆ ಕೂಡಾ ಹೌದು ರಾಕಿಂಗ್ ಸ್ಟಾರ್ ಯಶ್‌ರವರ ಸಿನೆಮಾ ಪ್ರಚಾರದ ಸಂದರ್ಶನದಲ್ಲಿ ಒಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಕಟಕ್ಕಾಗಿ ಉತ್ತರಿಸಿದ ರಾಕಿ ಬಾಯ್ ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.
ಅನುಪಮಾ ಅವರು ಯಶ್‌ರ ಬಳಿ ಇದೀಗ ಬರುತ್ತಿರುವ ಸಿನೆಮಾಗಳು, RRR ಆಗಲಿ, Pushpa ಆಗಲಿ ಅಥವಾ ನಿಮ್ಮದೇ KGF Chapter 1 ಆಗಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಮಹಿಳೆಯರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಹೆಳಿದರು. ಈ ಸಿನೆಮಾಗಳಲ್ಲಿ ಹಾಗೆನೆ ಮುಂದೆ ಬರಲಿರುವ ಸಿನೆಮಾಗಳಲ್ಲಿ ಪ್ರಸಿದ್ದ ನಾಯಕರ ಜೊತೆಗೆ ಮಹಿಳೆಯರಿಗೂ ಅವಕಾಶ ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರಶ್ನಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್ “ಮಹಿಳೆಯರು ಸಿನೆಮಾದಲ್ಲಿ ಈಗಾಗಲೇ ಸ್ಥಾನ ಪಡೆದಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್ ” ಈ KGF ಸಿನೆಮಾ ಇರುವುದೇ ತಾಯಿಯ ಮೇಲೆ. ಅವಳ ಮಗ ಹಾಗು ಅವಳ ಕನಸಿನ ಮೇಲೆ. ಇದು ನಾವು ಮಹಿಳೆಗೆ ಹೇಗೆ ಗೌರವ ನೀಡಬೇಕು ಎಂದು ತೋರಿಸುವ ವಿಧಾನ ಎಂದು ಹೇಳಿದ್ದಾರೆ.
ತನ್ನ ವಾದ ಮುಂದುವರಿಸಿದ ಅನುಪಮ ಈ ಕೆಜಿಎಪ್ ಚಿತ್ರದಲ್ಲಿ ಕೇವಲ ರಾಕಿ ಬಾಯ್ ಮೇಲೆ ಮಾತ್ರ ಸಂಪೂರ್ಣವಾಗಿ ಕೇಂದ್ರೀಕರಿಸಲಾಗಿದೆ. ಮಹಿಳೆಯರ ಮೇಲೆ ಯಾವುದೇ Spotlight ಇಲ್ಲ ಎಂದು ಹೇಳಿದ್ದಾರೆ. ಮಹಿಳೆಯರ ಮೇಲಿನ spotlight ಎಲ್ಲಿದೆ ಎಂದು ಕೇಳಿದ್ದಾರೆ. “ನಾವು ಯಾರನ್ನು ಈ ಸಿನೆಮಾದಲ್ಲಿ ಮೂಲೆಗುಂಪು ಮಾಡಿಲ್ಲ, ನಮ್ಮಲ್ಲಿ (ಸಿನೆಮಾದಲ್ಲಿ) ಜನರು ಮಹಿಳೆಯರಿಗೋಸ್ಕರ ಹೋರಾಡಿದ್ದಾರೆ ಹಾಗೆನೆ ಮಹಿಳೆಯ ಕನಸಿಗಾಗಿ ಹೋರಾಡಿದ್ದಾರೆ ಎಂದು ಯಶ್ ಹೇಳಿದ್ದಾರೆ.
ಮಹಿಳೆಯರು ಮೇನ್ ಲೀಡ್ ರೋಲ್ ಅಲ್ಲಿ ಇರುವಂತಹ ಸಿನೆಮಾಗಳನ್ನು ನಾವು ನೋಡಬಹುದೇ ಎಂದು ಅನುಪಮಾ ಕೇಳಿದಕ್ಕೆ ರಾಕಿ ಬಾಯ್ ಇದು ನಿರ್ದೇಶಕರ ಕಥೆಯ ಮೇಲೆ ಸಿನೆಮಾ ನಿರ್ಧಾರ ಆಗುತ್ತದೆ ಎಂದು ಹೇಳಿದ್ದಾರೆ. ನೀವು ಮಹಾಭಾರತವನ್ನು ದ್ರೌಪದಿಯ ಸ್ಥಾನದಿಂದ ನೋಡಿದರೆ ಕಥೆ ವಿಭಿನ್ನವಾಗಿರುತ್ತದೆ, ಅದೇ ರೀತಿ ದುರ್ಯೋಧನನ ಸ್ಥಾನದಿಂದ ನೋಡಿದರೆ ಕಥೆ ಬೇರೆಯದ್ದೇ ಆಗಿರುತ್ತದೆ. ಇದೆಲ್ಲಾ ನಿರ್ದೇಶಕರು ಯಾವ ರೀತಿ ತೋರಿಸಲು ಬಯಸುತ್ತಾರೆ ಅದರ ಮೇಲೆ ಕಥೆ ನಿರ್ಧಾರವಾಗುತ್ತದೆ ಎಂದು ಯಶ್ ಅನುಪಮಾ ಅವರ ಬಾಯಿ ಮುಚ್ಚಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಎಲ್ಲಡೆ ಯಶ್ ಅವರ ಉತ್ತರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ