ಕೊರಗಜ್ಜ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ತುಳುನಾಡ ಮಣ್ಣಿನಲ್ಲಿ ಬಹಳ ಕಾರ್ಣಿಕ ದೈವವಾಗಿ ಕುತ್ತಾರು ಪದವಿನಲ್ಲಿ ಅಜ್ಜ ನೆಲೆ ನಿಂತಿದ್ದಾರೆ. ಅಲ್ಲಿಂದ ನಂತರ ತುಳುನಾಡಿನ ಹಲವಾರು ಪ್ರದೇಶಗಳಲ್ಲಿ ಅಜ್ಜನ ಕಟ್ಟೆಗಳನ್ನು ಕಾಣಬಹುದು. ದೈವಾರಾಧನೆ ಎಂದರೆ ಅದನ್ನು ಆಡಂಬರಕ್ಕೆ ಮಾಡುತ್ತೇನೆ ಎಂದರೆ ದೈವಗಳು ಯಾವತ್ತೂ ಬಿಟ್ಟಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇಲ್ಲದೆ ಹೋದಾಗ ದೈವ ಕೈ ಹಿಡಿಯುವುದಿಲ್ಲ ಎಂಬುದು ತುಳುವರ ನಂಬಿಕೆ . ಅದೇ ರೀತಿಯಲ್ಲಿ ದೈವಾರಾಧನೆ ಎಂಬುವುದು ಅದು ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತ. ದೈವಗಳು ಎಂದು ಕೂಡ ಘಟ್ಟ ದಾಟಿ ಹೋಗುವುದಿಲ್ಲ ಎಂಬ ಮಾತು ನಮ್ಮ ಹಿರಿಯರು ಹೇಳಿಕೊಂಡು ಬಂದ ವಿಷಯ. ಈಗ ಕೊರಗಜ್ಜನ್ ಹೆಸರಿನಲ್ಲಿ ದಂದೆ ಮಾಡಲು ಇಳಿದ ಜನರಿಗೆ ಕೊರಗಜ್ಜನೆ ಸ್ವತ ಬುದ್ದಿ ಕಳಿಸಿದ್ದಾರೆ ಎಂದರು ತಪ್ಪಾಗಲಿಕ್ಕಿಲ್ಲ.
ಮೈಸೂರಿನಲ್ಲಿ ಕಾಂತಾರ ಸಿನೆಮಾ ನಂತರ ಕೋರಗಜ್ಜನ ಕಟ್ಟೆಯೊಂದು ನಿರ್ಮಾಣ ಆಗಿದ್ದು ಎಲ್ಲರಿಗೂ ಗೊತ್ತಿತ್ತು. ಕಾಂತಾರ ಸಿನೆಮಾ ನಂತರ ಅಂತೂ ದೈವಾರಾಧನೆ ಘಟ್ಟದ ಮೇಲು ಆರಂಭ ಆಗಿತ್ತು ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಜ್ಜನ ಕಟ್ಟೆ ನಿರ್ಮಾಣ ಮಾಡಿ ವ್ಯಾಪಾರ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತು. ಅದಕ್ಕೆ ಕರಾವಳಿಯ ಕೆಲವರು ಸೇರಿಕೊಂಡು ಹಣ ಮಾಡಿದ್ದು ಎಲ್ಲರಿಗೂ ಗೊತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎನ್ನುವ ಮಾತಿದೆ. ಇದೀಗ ಅಜ್ಜನ ಹೆಸರಲ್ಲಿ ದಂಧೆ ಮಾಡುತ್ತಿದ್ದ ಕುಟುಂಬ ಸ್ವತ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಮೊದ ಮೊದಲು ಮನೆಯಲ್ಲಿ ಕಲಹ ಆರಂಭವಾಗಿ ಮನೆ ಸುಖ ಶಾಂತಿ ನೆಮ್ಮದಿ ಎಲ್ಲವೂ ನಾಶ ಆಗಿ ಹೋಯಿತು. ಇದೀಗ ಅಜ್ಜನ ಕಟ್ಟೆ ನಿರ್ಮಾಣ ಮಾಡಿದ ಜಾಗವೂ ಕೂಡ ಅದು ಸರ್ಕಾರದ ಭೂಮಿ ಅದನ್ನು ಕಬಳಿಸಿ ಅಜ್ಜನ ಹೆಸರಲ್ಲಿ ದಂಧೆ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಸಾವಿರಾರು ಜನರು ಇಲ್ಲಿ ಬಂದು ಅಜ್ಜನಿಗೆ ಕೈ ಮುಗಿದು ಹುಂಡಿ ಹಣ ಹಾಕುತ್ತಿದ್ದರು , ಕಾರ್ ಪಾರ್ಕಿಂಗ್ ಕೂಡ ಇವರು ಹಣ ವಸೂಲಿ ಮಾಡುತ್ತಾ ಇಂತಹ ಅಂಗಡಿಯಲ್ಲಿ ಅಜ್ಜನಿಗೆ ಬೇಕಾದ ವಸ್ತು ಖರೀದಿ ಮಾಡಬೇಕು ಎಂದು ಹಣ ಲೂಟಿ ಮಾಡುತ್ತಿದ್ದರು.
ಇದೀಗ ಆ ಕುಟುಂಬ ಕೂಡ ಸರಿ ಇಲ್ಲದೆ ಅಜ್ಜನ ಕಟ್ಟೆಯ ಎದುರೆ ಜಗಳ ಮಾಡಿಕೊಂಡು ವೈಮನಸ್ಸು ಮೂಡಿ ಎಲ್ಲವೂ ಛಿದ್ರ ಚಿದ್ರವಾಗಿದೆ. ಇತ್ತ ಸರ್ಕಾರ ಕೂಡ ಈ ಅಕ್ರಮವಾಗಿ ನಿರ್ಮಾಣ ಆಗಿದ್ದ ಕಟ್ಟೆಯನ್ನು ಕೆಡವಿ ಅಲ್ಲಿ ರಾಜಕಾಲುವೆ ನಿರ್ಮಾಣ ಮಾಡಿದೆ. ಇದು ಸರ್ಕಾರಿ ಭೂಮಿ ಆಗಿದ್ದು ಇಲ್ಲಿ ರಾಜಕಾಲುವೆ ಇತ್ತು ಅದನ್ನು ಒಳಗೆ ಹಾಕಿ ಇಲ್ಲಿ ಅಜ್ಜನ ಹೆಸರಲ್ಲಿ ದಂಧೆ ಮಾಡುತ್ತಿದ್ದ ಈ ಕುಟುಂಬ ಈಗ ಎಲ್ಲವನ್ನೂ ಕಳಕೊಂಡು ಬೀದಿ ಗೆ ಬಿದ್ದ ಹಾಗೆ ಆಗಿದೆ. ಇದೆ ಕಾರಣಕ್ಕೆ ಕರಾವಳಿಗರ ಯಾವತ್ತೂ ಹೇಳುವುದು ದೈವ್ ದೇವರ ವಿಚಾರದಲ್ಲಿ ಯಾವತ್ತೂ ಯಾರು ಅಷ್ಟೊಂದು ಸಲೀಸಾಗಿ ತೆಗೆದು ಕೊಳ್ಳಬಾರದು ಅಂತ. ಈಗಲೂ ಕಾಲ ಮಿಂಚಿಲ್ಲ ಮಾಡಿದ ತಪ್ಪನ್ನು ಒಪ್ಪಿಕೊಂಡು ಅಜ್ಜನಿಗೆ ಶರಣಾದರೆ ಖಂಡಿತವಾಗಿಯೂ ಅಜ್ಜ ಕ್ಷಮೆ ನೀಡಿ ಬಂದ ಕಷ್ಟಗಳು ದೂರ ಆಗುತ್ತದೆ. ಸದಾ ಧರ್ಮ ಮಾರ್ಗದಲ್ಲಿ ನಡೆಯಬೇಕು ಅಧರ್ಮದಲ್ಲಿ ನಡೆದರೆ ಸಮಯ ಬಂದಾಗ ಎಲ್ಲಾ ಲೆಕ್ಕಾಚಾರ ತಪ್ಪಿ ನಮ್ಮ ಕರ್ಮಕ್ಕೆ ನ ಅನುಭವಿಸಬೇಕು.