KPSC ಇಂದ 945 ಹುದ್ದೆಗಳಿಗೆ ಅರ್ಜಿ ಅಹ್ವಾನ – KPSC Recruitment 2024
KPSC Recruitment 2024 – Apply Online for 945 Assistant Agricultural Officers Posts – ಕರ್ನಾಟಕ ಲೋಕಸೇವಾ ಆಯೋಗ (KPSC) 2024ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟುಕೃಷಿ ಅಧಿಕಾರಿಗಳು 128, ಸಹಾಯಕ ಕೃಷಿ ಅಧಿಕಾರಿಗಳು 817 ಒಟ್ಟಾಗಿ 945 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
KPSC ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ B.Sc, B.Tech in Food and Science & Technology/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು. ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ವಯಸ್ಸಿನವರಾಗಿರಬೇಕು.
ಕೃಷಿ ಅಧಿಕಾರಿಗಳು ರೂ.43100-83900/-ಸಹಾಯಕ ಕೃಷಿ ಅಧಿಕಾರಿಗಳು ರೂ.40900-78200/-ಸಾಮಾನ್ಯ ಅಭ್ಯರ್ಥಿಗಳಿಗೆ 600 ರುಪಾಯಿ ಶುಲ್ಕ ಇದ್ದು,ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 300 ರುಪಾಯಿ.ಮಾಜಿ ಸೈನಿಕರಿಗೆ 50 ಉಳಿದಂತೆ ಪರಿಶಿಷ್ಟ ಜಾತಿ ಪಂಗಡ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.ಅಭ್ಯರ್ಥಿಗಳ ಆಯ್ಕೆ ಪರೀಕ್ಷೆ ಮೂಲಕ ನಡೆಸಲಾಗುತ್ತದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ. ಅಕ್ಟೋಬರ್ 7 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ನವೆಂಬರ್ 7 ಕೊನೆ ದಿನಾಂಕ ಆಗಿರುತ್ತದೆ.
https://kpsconline.karnataka.gov.in/HomePage/index.html