ಬಾಲವಸ್ಥೆ ಕಳೆದ ಕೃಷ್ಣನ ಜೀವನ ಹೇಗಿತ್ತು? ಇಲ್ಲಿದೆ ಅದರ ಬಗೆಗಿನ ಸಣ್ಣ ತುಣುಕು!
ಕೃಷ್ಣನು ಬಾಲಲೀಲೆಯೊಂದಿಗೆ ಪೂತನಿವಧೆ, ಕಾಳಿಂಗ ಮರ್ಧನ, ಗೋವರ್ಧನ ಗಿರಿ ರಕ್ಷಣೆ, ಹಾಗೂ ಬಾಲ್ಯಚೇಷ್ಟೆಯನ್ನು ಮಾಡುತ್ತ, ತನ್ನ ಅಣ್ಣ ಬಲರಾಮ, ಹಾಗೂ ಗೆಳತಿ ರಾಧೆಯೊಂದಿಗೆ ತನ್ನ ಬಾಲ್ಯವನ್ನು ಕಳೆಯುತ್ತಾನೆ. ಕಂಸನ ಆದೇಶದಂತೆ ಪೂತನಿಯು ಕೃಷ್ಣನನ್ನು ಸಂಹಾರ ಮಾಡಲು ಸುಂದರ ಮಹಿಳೆಯ ವೇಷವನ್ನು ಧರಿಸಿ ಗೋಕುಲ ನಗರಕ್ಕೆ ಬಂದಳು. ತನ್ನ ಮಾಯಾಜಾಲ ದಿಂದ ಯಶೋಧೆಯ ಬಳಿಯಿಂದ ಕೃಷ್ಣನನ್ನು ತನ್ನ ಮಡಿಲಿಗೆ ಸೇರಿಸಿಕೊಂಡು ಎದೆಹಾಲು ಉಣಿಸಲು ಮುಂದಾದಳು. ಕೃಷ್ಣನು ಪೂತನಿಯ ಎದೆಹಾಲು ಸವಿಯುತ್ತ, ಹಿಂಡುತ್ತಾನೆ. ಪೂತನಿಯು ಎಷ್ಟೇ ಕಿರುಚಾಡಿದರೂ ಕೃಷ್ಣನು ಬಿಡದೆ ಅವಳ ಸಂಹಾರ ಮಾಡಿದನು.
ಬಲರಾಮನು ತನ್ನ ಬಾಲ್ಯವನ್ನು ತನ್ನ ಸಹೋದರ ಕೃಷ್ಣನೊಂದಿಗೆ ಗೋಪಾಲಕನಾಗಿ ಕಳೆದನು. ಅವನು ಕಂಸನಿಂದ ಕಳುಹಿಸಲ್ಪಟ್ಟ ಧೇನುಕ ಎಂಬ ಅಸುರನನ್ನು ಮತ್ತು ರಾಜನಿಂದ ಕಳುಹಿಸಲ್ಪಟ್ಟ ಪ್ರಲಂಬ ಮತ್ತು ಮುಷ್ಟಿಕ ಕುಸ್ತಿಪಟುಗಳನ್ನು ಕೊಂದನು. ಕೃಷ್ಣನು ಕಂಸನನ್ನು ಕೊಲ್ಲುತ್ತಿದ್ದಾಗ, ಬಲರಾಮನು ತನ್ನ ಬಲಿಷ್ಠ ಸೇನಾಪತಿಯಾದ ಕಾಲವಕ್ರನನ್ನು ಕೊಂದನು.
ಮಹಾಭಾರತದಲ್ಲಿ ಕೃಷ್ಣನ ಪಾತ್ರ ಅಪಾರವಾದದ್ದು. ಪಾಂಡವರ ಪರವಾಗಿ, ದ್ರೌಪದಿಯ ಅಣ್ಣನಾಗಿ, ಅರ್ಜುನನ ಸಾರಥಿಯಾಗಿ ಮಹಾಭಾರತವನ್ನೇ ಸೃಷ್ಟಿಸಿದ. ಮಹಾಭಾರತ ಕಥೆಯಲ್ಲಿ ಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ. ಜೂಜಿನಲ್ಲಿ ಪಾಂಡವರು ಸೋತಾಗ, ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತಿಸುತ್ತಾರೆ. ಆಗ ದ್ರೌಪದಿಗೆ ಕೃಷ್ಣ ತನ್ನ ಲೀಲೆಯ ಮೂಲಕ ಮಾನರಕ್ಷಣೆಯನ್ನು ಮಾಡುತ್ತಾನೆ. ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಯುದ್ಧವನ್ನು ಮುನ್ನಡೆಸುತ್ತಾನೆ. ಯುದ್ಧದಲ್ಲಿ ಕೌರವರ ವಿನಾಶದಿಂದಾಗಿ ಗಾಂಧಾರಿಯಿಂದ ಕೃಷ್ಣನು ಶಾಪಗ್ರಸ್ತನಾಗುತ್ತಾನೆ. ಒಂದು ದಿನ ಕಾಡಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತಿರುವಾಗ ಗಾಂಧಾರಿಯಾ ಶಾಪದಿಂದ ಬೇಡನ ಬಿಲ್ಲಿನ ಬಾಣದ ಗುರಿಗೆ ಬಲಿಯಾಗಿ ಕೃಷ್ಣನು ತನ್ನ ಅವತಾರವನ್ನು ಅಂತ್ಯಗೊಳಿಸುತ್ತಾನೆ.