KSSFCL Recruitment 2024 – Apply for 39 Junior Assistant, Driver Posts – ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ಸನ್ನದು ಲೆಕ್ಕ ಸಹಾಯಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸಹಾಯಕರು ಮತ್ತು ಕಿರಿಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ವಿದ್ಯಾರ್ಹತೆ ತಕ್ಕ ಪೋಸ್ಟ್ ನೋಡಿ ನೀವು ಕೂಡ ಇದಕ್ಕೆ ಅಪ್ಲೈ ಮಾಡಬಹುದು.
ಇಲಾಖೆ ಹೆಸರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರಲ್ಲಿ ಒಟ್ಟು ಹುದ್ದೆಗಳು 39 ಹುದ್ದೆಗಳು ಖಾಲಿ ಇದ್ದು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ ಈಕೆಳಗಿನಂತಿದೆ ಚಾರ್ಟರ್ಡ್ ಅಕೌಂಟೆಂಟ್ 1ಕಾನೂನು ಅಧಿಕಾರಿ : 02ಮಾನವ ಸಂಪನ್ಮೂಲ ಅಧಿಕಾರಿ : 01ತರಬೇತಿ ಅಧಿಕಾರಿ : 01ಸೌಹಾರ್ದ ಅಭಿವೃದ್ಧಿ ಅಧಿಕಾರಿ : 11ಸಹಾಯಕರು : 08ಟೈಪಿಸ್ಟ್ ಕಂ ಸ್ಟೆನೋಗ್ರಾಫರ್ : 02ಕಿರಿಯ ಸಹಾಯಕರು : 11ಉಪ ಸಿಬ್ಬಂದಿ ಕಮ್ / ವಾಹನ ಚಾಲಕ : 02ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ SSLC, PUC, ಕಾನೂನು ಪದವಿ, MBA, B.Com, BBM, MA, ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.ಹುದ್ದೆಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಇನ್ನು ಹುದ್ದೆಗಳ ಸಂಬಳದ ವಿಚಾರಕ್ಕೆ ಸಂಬಂಧಿಸಿದಂತೆ ಸನ್ನದು ಲೆಕ್ಕಪರಿಶೋಧಕರು ಹುದ್ದೆಗಳಿಗೆ : 60,000/-ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ ಹುದ್ದೆಗಳಿಗೆ : 35000/-ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ : 28000/- ರೂ , ಸಹಾಯಕರು, ಟೈಪಿಸ್ಟ್ ಕಂ ಸ್ಟೆನೋಗ್ರಾಫರ್ : 20000/-, ಕಿರಿಯ ಸಹಾಯಕರು, ಉಪ ಸಿಬ್ಬಂದಿ ಕಮ್ / ವಾಹನ ಚಾಲಕ ಹುದ್ದೆಗಳಿಗೆ : 13000/- ರೂಗಳವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ :“ಸೌಹಾರ್ದ ಸಹಕಾರಿ ಸೌದ” 468,ಒಂದನೇ ಮಹಡಿ, 18ನೇ ಅಡ್ಡರಸ್ತೆ,ಮಾರ್ಗೋಸ ರಸ್ತೆ ಮಲ್ಲೇಶ್ವರ,ಬೆಂಗಳೂರು-560055.ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29 ಆಗಸ್ಟ್ 2024ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಸೆಪ್ಟೆಂಬರ್ 2024