SportsTrending

World Chess Champion ಗುಕೇಶ್ ಅವರ ಜೀವನದ ಸಂಕ್ಷಿಪ್ತ ಬರಹ. ಯಾರಿವರು? ಇವರ ಸಾಧನೆ ಹಾಗು ಹೆತ್ತವರು ಯಾರು? ಇಲ್ಲಿದೆ ಮಾಹಿತಿ.

ಚದುರಂಗದಾಟಕ್ಕೆ ಹೊಸ ಚಾಂಪಿಯನ್. ಬ್ಯಾಕ್ ಟು ಬ್ಯಾಕ್ 14 ಗೇಮ್ ಗಳಲ್ಲಿ ಅಲ್ಪ ಪಾಯಿಂಟ್ ಗಳಿಂದ ಹಿಂದುಳಿದಿದ್ದ D ಗುಕೇಶ್ (D Gukesh) ಕೊನೆಯ ಗೇಮ್ ಅಲ್ಲಿ ವಿಶ್ವ ಚೆಸ್ ಚಾಂಪಿಯನ್ (World Chess Champion) ಆಗಿ ಬದಲಾಗಿದ್ದಾರೆ.

ದೊಮ್ಮರಾಜು ಗುಕೇಶ್ ತಮಿಳುನಾಡಿನವರಾದ ಇವರು ಕೇವಲ 18 ವರ್ಷದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿಯೊಬ್ಬರೂ ಕನಸು ಕಾಣುತ್ತಾರೆ ಆದರೆ ಅದನ್ನು ನನಸು ಮಾಡುವತ್ತ ಶ್ರದ್ದೆ ಹಾಗು ಪರಿಶ್ರಮ ಪಡುವವರು ಕೆಲವೇ ಕೆಲವರು. ಇದರಿಂದ ಕನಸು ನನಸು ಮಾಡಿಕೊಂಡವರ ಪಟ್ಟಿಯಲ್ಲಿ ಹೆಸರು ಮಾಡಿಕೊಂಡವರಲ್ಲಿ ಗುಕೇಶ್ (Gukesh) ಕೂಡ ಒಬ್ಬರಾಗಿದ್ದಾರೆ. 11 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ (World Chess Champion) ಆಗಬೇಕೆಂದು ಕನಸು ಕಂಡಿದ್ದರು. ಇದೀಗ 18 ನೇ ವಯಸ್ಸಿನಲ್ಲಿ ಅವರ ಕನಸನ್ನು ಅವರ ಪರಿಶ್ರಮ ಸಾಕಾರ ಗೊಳಿಸಿದೆ.

ಗುಕೇಶ್ ಅವರ ಜನನ 29 ಮೇ 2006 ರಲ್ಲಿ ಚನ್ನೈ ನಲ್ಲಿ ಆಯಿತು. ಇವರ ತಂದೆ ಹೆಸರು ರಜನೀಕಾಂತ್ ಒಬ್ಬ ಸರ್ಜನ್ (Surgeon) ಹಾಗು ತಾಯಿ ಹೆಸರು ಪದ್ಮ ಮೈಕ್ರೋಬಿಯೊಲೊಜಿಸ್ಟ್ (Microbiologist) ಡಾಕ್ಟರ್. ಗುಕೇಶ್ ಮೊದಮೊದಲ ಚೆಸ್ ಆಟವನ್ನು ಕೇವಲ ನೋಡುತ್ತಿದ್ದರು. ನೋಡುತ್ತಿದ್ದಂತೆಯೇ ಇದು ಇವರ ಹವ್ಯಾಸವಾಗಿ ಬದಲಾಯಿತು. 7 ನೇ ವಯಸ್ಸಿನಲ್ಲಿ ಪ್ರಾರಂಭವಾದ ಚೆಸ್ ಆತ ವಾರದಲ್ಲಿ 3 ದಿನ ಪ್ರತಿ ಒಂದು ಗಂಟೆ ಚೆಸ್ ಆಟವನ್ನು ಪ್ರಾಕ್ಟೀಸ್ ಮಾಡುವುದರಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ನಂತರ ಬೇರೆ ಬೇರೆ ಚೆಸ್ ಪಂದ್ಯಗಳಲ್ಲಿ ಭಾಗವಹಿಸ ತೊಡಗಿದರು.

ಗುಕೇಶ್ ಅವರ ಬಾಲ್ಯದ ಕೋಚ್ ವಿಷ್ಣು ಪ್ರಸನ್ನ ಬಾಲ್ಯದಿಂದಲೂ ಗುಕೇಶ್ ಒಂದು ಗುರಿಯನ್ನ ಹೊಂದಿದ್ದರು. ವಿಶ್ವ ಚಾಂಪಿಯನ್ ಆಗುವ ಗುರಿ ಇದೆ ವಿಷ್ಣು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಗುಕೇಶ್ ಯಾವಾಗಲೂ ತನ್ನ ವಯಸ್ಸಿನ ಇತರ ಚೆಸ್ (Chess) ಕಡೆಗೆ ಆಟಗಾರರಿಗೆ ಹೋಲಿಸಿದರೆ 11 ವರ್ಷ ವಯಸ್ಸಿನಲ್ಲೂ ಹೆಚ್ಚು ಗಂಭೀರವಾಗಿದ್ದ ಎಂದು ಕೋಚ್ ಹೇಳಿದ್ದಾರೆ. ಈ ಹುಡುಗನಿಗೆ 2015 ರಲ್ಲಿ ಕೇವಲ 9 ವರ್ಷ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಒಂಬತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ.

world chess champion d gukesh

12 ವರ್ಷ ಈ ವಯಸ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ 2018 ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್ (Youth Chess Championship) ಅಡಿಯಲ್ಲಿ 12ನೇ ವಿಭಾಗದಲ್ಲಿ ಬಂದರೂ ಗುಕೇಶ್ ಒಬ್ಬರಾಗಿದ್ದರು. 2017 ರಲ್ಲಿ, 34 ನೇ ಕ್ಯಾಪೆಲ್ಲಾ ಗ್ರ್ಯಾಂಡ್ ಓಪನ್‌ನಲ್ಲಿ 12 ವರ್ಷ ವಯಸ್ಸಿನಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಆಗಿದ್ದ. 2023 ಆಗಸ್ಟ್‌ನಲ್ಲಿ ಮುಖೇಶ್ ಒಂದು ಸಂಚಲನ ಮೂಡಿಸಿದ್ದರು ಅವರು 2750 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ ಅತ್ಯಂತ ಕಿರಿಯ ಆಟಗಾರರಾದರು ಗುಕೇಶ್. ಇದೀಗ ಚೀನಾ ವನ್ನು ಸೋಲಿಸುವ ಮೂಲಕ ಚೆಸ್ ಚಾಂಪಿಯನ್ ಆಗಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.

Leave a Reply

Your email address will not be published. Required fields are marked *