ತನ್ನ ಕುಟುಂಬದ ಸಾಲವನ್ನು ತೀರಿಸಲು ಮಾಡಿದ ವ್ಯಾಪಾರದಿಂದ ಇಂದು ಈ ವ್ಯಕ್ತಿ ಅದೆಷ್ಟು ಕೋಟಿಯ ಒಡೆಯ. ಅಷ್ಟಕ್ಕೂ ಈ ವ್ಯಕ್ತಿ ನಡೆಸಿದ ವ್ಯಾಪಾರವೇನು ಗೊತ್ತೇ?

2,720

೨೦೦೮ ರಲ್ಲಿ ಇಂಫಾಲದ ರಾಗೇಶ್ ಕೀಶಮ್ ಅನ್ನುವ ವ್ಯಕ್ತಿ ತನ್ನ ದತ್ತು ಪಡೆದ ಸಹೋದರಿಯ ಕ್ಯಾನ್ಸರ್ ನ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಸಾಲ ಮಾಡಿ ಸಾಲದ ಸುಳಿಗೆ ಸಿಕ್ಕಿದರು. ಸಾಲ ಮಾಡಿಯೂ ತನ್ನ ಸಹೋದರಿಯನ್ನು ಬದುಕಿಸಲು ಈ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ತನ್ನ ಕುಟುಂಬವನ್ನು ಸಾಲದ ಹೊರೆಯಿಂದ ಇಳಿಸಲು ರಾಗೇಶ್ ಕಿಶಮ್ ಹಲವು ವ್ಯಾಪಾರಕ್ಕೆ ಕೈ ಹಾಕಿದರೂ ಯಾವುದು ಕೈಗೂಡಲಿಲ್ಲ. ಮಣಿಪುರದಿಂದ ಉತ್ತರಾಖಂಡಕ್ಕೆ ಬಿದಿರನ್ನು ಸಾಗಿಸುವ ಕೆಲಸಕ್ಕೂ ಕೂಡ ಇಳಿದಿದ್ದರು. ಯಾವುದರಲ್ಲೂ ಯಶಸ್ಸು ಕಾಣಲಿಲ್ಲ.

ಯಾವುದಾದರು ವ್ಯಾಪಾರ ಮಾಡಬೇಕು ಎಂದು ಯೋಚನೆ ಮಾಡುತಿದ್ದರು ರಾಗೇಶ್ ಆದರೆ ಇದಕ್ಕೆ ಕರೆಂಟ್ ಬೇಕೇ ಬೇಕು. ಇವರ ಊರಿನಲ್ಲಿ ದಿನಕ್ಕೆ ಕೇವಲ ನಾಲ್ಕೇ ಗಂಟೆ ಕರೆಂಟ್ ಸಿಗುತಿತ್ತು. ಇದರಿಂದ ಯಾವ ವ್ಯಾಪಾರಕ್ಕೆ ಇಳಿದರು ಕೈ ಕೂಡುವುದಿಲ್ಲ ಎನ್ನುವ ಯೋಚನೆಯಲ್ಲಿ ಕೊರಗುತ್ತ ಹೋದರು. ಇವರಿಗೆ ಕೊನೆಗೆ ಉಳಿದದ್ದು ವ್ಯವಸಾಯ ಒಂದೇ ಮಾರ್ಗ. ಅದಕ್ಕಾಗಿ ಒಂದು ವಿನೂತನ ಯೋಚನೆ ಮುಕಾಂತರ ಲಿಂಬೆ ಹುಲ್ಲಿನ ರಸದ ಚಹಾ ಮಾಡುವ ಎಂದು ದಿಟ್ಟ ನಿರ್ಧಾರ ಕೈ ಗೊಂಡರು. ೨೦೧೦ ರಲ್ಲಿ SuiGenris Agronomy ಎನ್ನುವ ಪೇರೆಂಟ್ ಕಂಪನಿ ಕೆಳಗಡೆ CC ಟೀ ಎನ್ನುವ ಬ್ರಾಂಡ್ ಅನ್ನು ಶುರು ಮಾಡಿದರು.

ಇವರು ೨೦೦ ಪ್ಯಾಕೆಟ್ ಲಿಂಬೆರಸದ ಟೀ ತಯಾರು ಮಾಡುತ್ತಿದ್ದರು, ಕೇವಲ ೫ ನಿಮಿಷಕ್ಕೆ ಎಲ್ಲ ಟೀ ಮಾರಾಟವಾಗತೊಡಗಿತು. ಇದಕ್ಕೆ ಪ್ರಾಥಮಿಕವಾಗಿ ೫ ಲಕ್ಷದ ಬಂಡವಾಳ ಹಾಕಿದ್ದರು. ಇಂದು ಈ CC Tea ಎನ್ನುವ ಲಿಂಬೆ ಹುಲ್ಲಿನ ಟೀ ಬ್ರಾಂಡ್ ನ ಬೆಲೆ ಸುಮಾರು ೮ ಕೋಟಿಗಳಷ್ಟಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ರಾಗೇಶ್ ಕೀಶಮ್. ಈ ವ್ಯಾಪಾರಕ್ಕೆ ಐಡಿಯಾ ಕೊಟ್ಟಿದ್ದು ತಮ್ಮ ವಿಜ್ಞಾನಿ ಮಿತ್ರ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನ ಒಬ್ಬ ಇಂಡೋನೇಷಿಯಾದ ಮಿತ್ರ ೧೦೦೦೦ ದಷ್ಟು ಲಿಂಬೆ ಹುಲ್ಲನ್ನು ರಾಗೇಶ್ ಅವರಿಗೆ ಕಲಿಸಿಕೊಟ್ಟಿದ್ದ. ಇದ್ರಲ್ಲಿ ಚಹಾ ಹೇಗೆ ಮಾಡಬಹುದು ಎಂದು ಕಲಿತು ತಮ್ಮ ಹೊಸ ವ್ಯಾಪಾರ ಪ್ರಾರಂಭಿಸಿ ಇಂದು ೮ ಕೋಟಿಯ ಒಡೆಯರಾಗಿದ್ದಾರೆ ರಾಗೇಶ್ ಕೀಶಮ್.

Leave A Reply

Your email address will not be published.