ಪ್ಯಾರಾಲಿಂಪಿಕ್ಸ್ 2024 ಭಾರತದ ಸಾಧನೆ ಅತ್ಯಂತ ಗಮನಾರ್ಹ ರೀತಿಯಲ್ಲಿ ಮೂಡಿ ಬಂದಿದೆ. ಒಂದೇ ದಿನದಲ್ಲಿ ನಾಲ್ಕನೇ ಪದಕ ಗೆದ್ದಿದೆ. ಮೊದಲ ಮೂರು ಪದಕ ಭಾರತದ ಹೆಣ್ಮಕ್ಕಳ ಪಾಲಾದರೆ ನಾಲ್ಕನೆಯ ಪದಕ ಭಾರತದ ಶೂಟರ್ ಮನೀಶ್ ನಾರ್ವಾಲ್ ಅವರ ಪಾಲಾಗಿದೆ. ಹೌದು ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ ಚೈನಾದ ಕಳೆದ ಒಲಂಪಿಕ್ಸ್ ಚಿನ್ನದ ಪದಕ ವಿಜೇತ ಆಟಗಾರನನ್ನು ಸೋಲಿಸಿ ಬೆಳ್ಳಿ ಪದಕ ಗೆದ್ದರು. ಫೈನಲ್ ನಲ್ಲಿ ಕಡೆಗೆ ಕೊರಿಯಾದ ಎದುರಾಳಿ ವಿರುದ್ಧ 2 ಅಂಕಗಳಲ್ಲಿ ಹಿನ್ನಡೆ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದರು.
ಆದರೂ ಇಂತಹ ದೊಡ್ಡ ವೇದಿಕೆಗಳಲ್ಲಿ ಇಂತಹ ಸಾಧನೆ ಸಣ್ಣದ್ದಲ್ಲ. ಇಡೀ ದೇಶಕ್ಕೆ ದೇಶವೇ ಖುಶಿ ಪಡುವ ಸಂತಸ ಇಂದು ಭಾರತದ ಕ್ರೀಡಾ ಪಟುಗಳು ಕೊಟ್ಟಿದ್ದಾರೆ. ಪದಕ ಪಟ್ಟಿಯಲ್ಲಿ ತಮ್ಮ ಸುಧಾರಣೆ ಕೂಡ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಪದಕದ ನಿರೀಕ್ಷೆ ಭಾರತಕ್ಕೆ ಇದೇ. ಇಂದಿನ ದಿನ ಮಾತ್ರ ಇಡೀ ಭಾರತದ ಜನತೆ ಹೆಮ್ಮೆಯ ಪಡುವ ದಿನ. ಒಂದೇ ದಿನ 4 ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ ನಮ್ಮ ಹೆಮ್ಮೆಯ ಕ್ರೀಡಾಳುಗಳು. ಇನ್ನಷ್ಟು ಪದಕ ಗೆಲ್ಲಲಿ ಎಂದು ಆಶಿಸೋಣ.