21 ನೇ ವಯಸ್ಸಿನಲ್ಲಿ ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ AIR 13 (All India Ranking) ಆದರೆ IAS, ಅಥವಾ IPS ಆಗಲಿಲ್ಲ ಯಾಕೆ ? ತಮ್ಮ ಅಜ್ಜ ಅಜ್ಜಿ ಆಸೆ ಈಡೇರಿಸಲು ಏನು ಮಾಡಿದರು?
ಜೀವನದಲ್ಲಿ ಐಎಎಸ್ ಐಪಿಎಸ್ ಅಧಿಕಾರಿ ಆಗಬೇಕು ಎಂದು ಕನಸಿನ ಬುತ್ತಿ ಕಟ್ಟಿಕೊಂಡು ಅದೆಷ್ಟೋ ಲಕ್ಷ ಜನ ಪ್ರತಿ ವರ್ಷ ಅದರ ತಯಾರಿ ನಡೆಸುತ್ತಾರೆ. ತಮ್ಮೆಲ್ಲಾ ಜೀವನದ ಯೌವ್ವನವನ್ನು ಓದು ಓದು ಎಂದು ಕಳೆಯುತ್ತಾ ಈ ಪರೀಕ್ಷೆ ತಯಾರಿ ನಡೆಸುತ್ತಾರೆ. ಮುಂದೆ ಇದರಲ್ಲಿ ಕೇವಲ ಕೈ ಬೆರಳೆಣಿಕೆ ಅಷ್ಟು ಜನ ಮಾತ್ರ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಹೊಂದುತ್ತಾರೆ ಐಎಎಸ್ ಐಪಿಎಸ್ ಅಧಿಕಾರಿ ಆಗುತ್ತಾರೆ. ಆದರೆ ಇಲ್ಲೊಬ್ಬಳು ಹೆಣ್ಮಗಳು ಯಾವುದೇ ರೀತಿಯ ಕೋಚಿಂಗ್ ಇಲ್ಲದೆ ತನ್ನದೇ ರೀತಿಯ ಓದುವಿಕೆಯ ಮೂಲಕ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಆಗಿದ್ದು ಅಲ್ಲದೆ ಅಖಿಲ ಭಾರತ ಮಟ್ಟದಲ್ಲಿ 13 ನೆಯ ರ್ಯಾಂಕ್ ಪಡೆದಿದ್ದಾರೆ.
ರಾಜಸ್ಥಾನದ ಜೋಧಪುರದಲ್ಲಿ ಹುಟ್ಟಿ ಬೆಳೆದ ವಿದುಷಿ ಅವರು ಮೂಲತಃ ಅಯೋಧ್ಯೆಯವರು. ದೆಹಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ 2021 ರಲ್ಲಿ ಬಿಎ ಪದವಿ (ಅರ್ಥಶಾಸ್ತ್ರ ವಿಭಾಗದಲ್ಲಿ) ಪಡೆದ ನಂತರ, ಅವರು ತಮ್ಮ ಯುಪಿಎಸ್‌ಸಿ ಸಿದ್ಧತೆಗಳನ್ನು ಪ್ರಾರಂಭಿಸಿದರು. ತನ್ನ ಯಶಸ್ಸಿನ ಹಿಂದಿನ ಕೆಲಸಗಳ ಬಗ್ಗೆ ಮಾತನಾಡುವಾಗ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು, ತಾನು ಅನೇಕ ಟೆಸ್ಟ್ ಸರಣಿಗಳು ಮತ್ತು mock ಪರೀಕ್ಷೆಗಳನ್ನು ನೀಡಿದ್ದೇನೆ ಎಂದು ಹೇಳಿದರು. ಸ್ವಯಂ-ಅಧ್ಯಯನವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದವರು ಹೇಳುತ್ತಾರೆ.
ಇವರು 13ನೆಯ ರ್ಯಾಂಕ್ ಪಡೆದಿದ್ದರು ಐಎಎಸ್ ಅಥವಾ ಐಪಿಎಸ್ ಆಗಲಿಲ್ಲ. ಬದಲಾಗಿ ಅವರ ಅಜ್ಜಿ ಮತ್ತು ಅಜ್ಜ a ಆಸೆ ಪ್ರಕಾರ IFS ಸೇರಿಕೊಂಡಿದ್ದಾರೆ. IFS (Indian Foreign Service) . ಹೌದು ಇದು ಭಾರತದ ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದ ಇವರು ಅದರಲ್ಲೇ ಏನಾದರೂ ಸಾಧನೆ ಮಾಡಬೇಕು ಮತ್ತು ತಮ್ಮ ಅಜ್ಜ ಅಜ್ಜಿಯ ಆಸೆ ಈಡೇರಿಸಬೇಕು ಎಂಬ ಬಯಕೆಯಿಂದ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಅವರು ಸ್ವತಃ ಹೇಳಿಕೊಂಡಿದ್ದಾರೆ.