ಭಾರತ ಈ ಬಾರಿಯ ಒಲಂಪಿಕ್ಸ್ ನಲ್ಲಿ ಕಳೆದ ರೀತಿಯಲ್ಲೇ ತನ್ನ ಛಾಪು ಮೂಡಿಸಿದೆ. ಇಲ್ಲಿವರೆಗೆ ಉತ್ತಮ ಪ್ರರ್ಷಣ ನೀಡುತ್ತಾ ಬಂದ ತಂಡ ನಿನ್ನೆಯ ದಿನ ಎರಡು ಮೆಡಲ್ ಪಡೆಯುವ ಮೂಲಕ ಮತ್ತೆ ಮೆಡಲ್ ಟ್ಯಾಲಿ ಅಲ್ಲಿ ತನ್ನ ಸ್ಥಾನವನ್ನು ಮೇಲಕ್ಕೆ ಬರಿಸಿದೆ. ನಿನ್ನೆಯ ವಿಶೇಷ ಎಂದರೆ ಪಡೆದ ಎರಡು ಮೆಡಲ್ ಕೂಡ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ. ಮೊದಲು ಪ್ರೀತಿ ಪಾಲ್ ಅವರು ತಮ್ಮ ಎರಡನೇ ಮೆಡಲ್ ಪಡೆದರೆ ಇನ್ನೂಂದು ಕಡೆ ಹುಡುಗರ ವಿಭಾಗದ ಹೈ ಜಂಪ್ ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಹೈ ಜಂಪ್ T47 ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ .
ಈ ಹಿಂದೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಕೂಡ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಾಧನೆ. ಮಾಡಿದ್ದರು. ಎರಡು ಒಲಂಪಿಕ್ಸ್ ನಲ್ಲಿ ಎರಡು ಪದಕ ಗೆಲ್ಲುವ ಮೂಲಕ ತಮ್ಮ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿದರು. ಅಂಗ ವೈಫಲ್ಯತೆ ಕೇವಲ ನೆಪ ಮಾತ್ರ ಅದು ಸಾಧನೆಗೆ ಯಾವುದೇ ಅಡ್ಡಿ ಅಲ್ಲ ಎಂಬುದನ್ನು ನಮ್ಮ ಪ್ಯಾರ ಒಲಂಪಿಕ್ಸ್ ಆಟಗಾರರು ಪ್ರೂ ಮಾಡಿದ್ದಾರೆ.