PDO ನೇಮಕಾತಿ ಅಧಿಸೂಚನೆ 2024 ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ! ಇಂದೇ ಅಪ್ಲೈ ಮಾಡಿ ಕೊನೆ ದಿನಾಂಕ ಮತ್ತು ಇತರ ಹೆಚ್ಚಿನ ಮಾಹಿತಿ ಇಲ್ಲಿದೆ – PDO Recruitment 2024 Apply Online.
PDO Recruitment 2024 Apply Online : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಿದ್ದು ಮತ್ತೆ ಇದೀಗ ದಿನಾಂಕ ವಿಸ್ತರಣೆ ಆಗಿದೆ.ಒಟ್ಟು ಉಳಿಕೆ ಮೂಲ ವೃಂದಡಲ್ಲಿ 150ಹೈದರಬಾದ್ ಕನಾಟಕದಲ್ಲಿ 97 ಒಟ್ಟಾರೆಯಾಗಿ 247 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಕಾನೂನಿನನ್ವಯ ಸ್ಥಾಪಿತವಾದ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರದ ವಯೋಮಿತಿ ಸಡಿಲಿಕೆ ಪ್ರಕಾರ ಈ ಕೆಳಕಂಡಂತೆ ಜಾತಿವಾರು ವಿನಾಯಿತಿ ಇದೆ.ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 35 ವರ್ಷಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ. ಪ.ಜಾತಿ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ .
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 37,900 ರಿಂದ ರೂ. 70,850 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ. ಇನ್ನು ಅರ್ಜಿ ಶುಲ್ಕದ ವಿಚಾರಕ್ಕೆ ಬರುವುದಾದರೆ ಸಾಮಾನ್ಯ ಅಭ್ಯರ್ಥಿಗಳು ರೂ. 600, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300, ಮಾಜಿ ಸೈನಿಕ ಅಭ್ಯರ್ಥಿಗಳು ರೂ. 50, ಪ.ಜಾತಿ, ಪ.ಪಂ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.ಅರ್ಜಿ ಸಲ್ಲಿಸುವ ಲಿಂಕ್ : https://kpsc.kar.nic.in/