ಸೂರ್ಯಗ್ರಹಣದ ದಿನದಂದು ಹುಟ್ಟಿದ ನನ್ನ ಮಂಕಿ ಮೆಂಟಲ್ ಎಂದು ಕರೆಯುತ್ತಿದ್ದರು! ಆದರೆ ಈಗ ಭಾರತ ದೇಶ ಹೆಮ್ಮೆ ಪಡುವ ಸಾಧಾನೆ ಮಾಡಿದ್ದಾರೆ!

22

ಜೀವನವೇ ಅಷ್ಟೇ ನೋಡಿ ಕಷ್ಟಗಳನ್ನು ನೋಡಿದಷ್ಟು ಮನಸ್ಸು ಗಟ್ಟಿಯಾಗುತ್ತದೆ. ಕಷ್ಟಗಳನ್ನಾದರು ಎದುರಿಸಬಹುದು ಆದರೆ ಈ ಮನಸಿನ ಮೇಲೆ ನಡೆಯುವ ದಬ್ಬಾಳಿಕೆಯನ್ನು ಎದುರಿಸಲು ಬಹಳ ಗಟ್ಟಿ ಗುಂಡಿಗೆ ಬೇಕು. ಅಂತಹದೇ ಒಂದು ರೋಚಕ ಕಥೆ ಇದು. ಈಕೆ ಹುಟ್ಟಿದ್ದು ಸೂರ್ಯಗ್ರಹಣದ ದಿನದಂದು, ಊರಿನವರೆಲ್ಲಾ ಅನಿಷ್ಟದ ಮಗು ಇದು , ಇದನ್ನು ಸಾಕಬೇಡಿ ಆಶ್ರಮಕ್ಕೆ ಕೊಟ್ಟಿ ಬಿಡಿ, ಮಂಕಿ ಮೆಂಟಲ್ ಎಂದೆಲ್ಲ ಕರೆದಿದ್ದರು. ಆದರೆ ತಾಯಿ ಕರುಣಾಮಯಿ ಈಕೆಯನ್ನು ಸಮಾಜದ ಎದುರು ನಿಂತು ಸಾಕಿ ದೊಡ್ಡವರಾನ್ನಾಗಿ ಮಾಡಿದ್ದಾರೆ. ಅದೇ ಹೆಣ್ಣು ಮಗಳು ಈಗ ಭಾರತದ ಎಲ್ಲಾ ಜನತೆ ತಲೆ ಎತ್ತಿ ಗರ್ವದಿಂದ ನಡೆಯುವಂತೆ ಮಾಡಿದ್ದಾರೆ.

ಅವರ ಹೆಸರೇ ದೀಪ್ತಿ ಜೀವಂಜಿ ಇವರು ತೆಲಂಗಾಣದ ವಾರಂಗಲ್ ಜಿಲ್ಲೆಯ ಕಲ್ಲೆಡ ಗ್ರಾಮದಲ್ಲಿ ಜನಿಸಿದರು. ಆಕೆಯ ಪೋಷಕರಾದ ಜೀವಂಜಿ ಯಾದಗಿರಿ ಮತ್ತು ಜೀವಂಜಿ ಧನಲಕ್ಷ್ಮಿ ಅವರಿಗೆ ಅರ್ಧ ಎಕರೆ ಕೃಷಿ ಭೂಮಿ ಇತ್ತು ಮತ್ತು ಇತರರ ತೋಟಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಹೆಸರಲ್ಲಿ ಏಷ್ಯನ್ ಪ್ಯಾರ ರೆಕಾರ್ಡ್ ಕೂಡ ಇದೆ. ಇವರು ವರ್ಲ್ಡ್ ರೆಕಾರ್ಡ್ ಕೂಡಾ ಮಾಡಿದ್ದರು. ಜೀವನದಲ್ಲಿ ಗೇಲಿ ಮಾಡಿದ ಸಮಾಜವೇ ಕರೆದು ಗೌರವಿಸುವ ಮಟ್ಟಕ್ಕೆ ಬೆಳೆದು ನಿಂತರು ಇವರು.

ಈಗ ನಡೆಯುತ್ತಿರುವ ಪ್ಯಾರಿಸ್  ಪ್ಯಾರ ಒಲಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇವರು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಸಾಧನೆ ಎಂಬುವುದು ಯಾರಪ್ಪನ ಮನೆಯ ಸೊತ್ತು ಅಲ್ಲ ಅದು ಕಷ್ಟ ಪಟ್ಟು ಶ್ರಮ ಹಾಕಿದವರಿಗೆ ಖಂಡಿತವಾಗಿ ಒಲಿದೆ ಒಲಿಯುತ್ತದೆ ಎಂಬುವುದಕ್ಕೆ . ದೀಪ್ತಿ ಅವರ ಭವಿಷ್ಯ ಇನ್ನಷ್ಟು ಬೆಳೆಯಲು ದೇವರು ಅನುಗ್ರಹಿಸಲಿ. ಈ ಅಷ್ಟು ಸಾಧನೆ ಮಾಡುವ ಶಕ್ತಿ ದೇವರು ಕೊಡಲಿ ಎಂದು ಹಾರೈಸೋಣ .

Leave A Reply

Your email address will not be published.