ಸ್ವಾಮಿತ್ವ ಯೋಜನೆಯಡಿಯಲ್ಲಿ ಸುಮಾರು 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಹಸ್ತಾಂತರಿಸಿದ ನರೇಂದ್ರ ಮೋದಿ. ಏನಿದು ಈ ಯೋಜನೆ?
Swamitva Yojana: ನಿನ್ನೆ ಅಂದರೆ ದಿನಾಂಕ 18 ಜನವರಿ 2025 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಸ್ವಾಮಿತ್ವ ಯೋಜನೆಯಡಿಯಲ್ಲಿ ಸುಮಾರು 65 ಲಕ್ಷ ಕ್ಕೂ ಅಧಿಕ ಅಸ್ತಿ ಕಾರ್ಡ್ ಅನ್ನು ದೇಶವಾಸಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಈ ಕಾರ್ಯಕ್ರಮ 10 ರಾಜ್ಯ ಹಾಗು 2 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿತ್ತು. ಛತ್ತೀಸಘಡ್, ಗುಜರಾತ್, ಹಿಮಾಚಲ್ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ತಾನ ಹಾಗು ಉತ್ತರ ಪ್ರದೇಶಗಳನ್ನೊಳಗೊಂಡಿತ್ತು. ಇದರ ಜೊತೆಗೆ ಜಮ್ಮು ಕಾಶ್ಮೀರ ಹಾಗು ಲಢಾಕ್ ನಾಗರಿಕರಿಗೂ ಈ ಅಸ್ತಿ ಕಾರ್ಡ್ ವಿತರಣೆ ಮಾಡಲಾಗಿದೆ.
ಏನಿದು ಸ್ವಾಮಿತ್ವ ಯೋಜನೆ?
ಹಳ್ಳಿಗಳಲ್ಲಿನ ವಸತಿ ಆಸ್ತಿಗೆ ಸಂಬಂದಿಸಿದ ವಿವಾದಗಳನ್ನು ನಿವಾರಿಸಲು ಮತ್ತು ಅವುಗಳ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರಕಾರ ಸ್ವಾಮಿತ್ವ ಯೋಜನೆಯನ್ನು (Swamitva Yojana) ಪ್ರಾರಂಭ ಮಾಡಿತು. ಈ ಯೋಜನೆಯಡಿ ಗ್ರಾಮಸ್ಥರಿಗೆ ಅವರ ಆಸ್ತಿಯ ಮಾಲೀಕತ್ವವನ್ನ ನೀಡಲಾಗುವುದು. ಈ ಯೋಜನೆ ದೇಶಾದ್ಯಂತ ಜಾರಿಗೆ ಬರಲಿದ್ದು. ನಿನ್ನೆ 65 ಲಕ್ಷಕ್ಕೂ ಹೆಚ್ಚು ಅಸ್ತಿ ಕಾರ್ಡ್ ದೇಶದ ನಾಗರಿಕರಿಗೆ ಹಂಚಲಾಗಿದೆ.

ಏನಿದು ಮಾಲೀಕತ್ವ ಯೋಜನೆ?
ಗ್ರಾಮದ ಸಾಗುವಳಿ ಜಮೀನಿನ ದಾಖಲೆಗಳು ಖಸ್ರ ಖತಾವ್ ನಲ್ಲಿದೆ ಇದೊಂದು ಪರಿಸಿಯನ್ ಪದವಾಗಿದ್ದು ಗ್ರಾಮೀಣ ಪ್ರದೇಶದಲ್ಲಿನ ಅಸ್ತಿ ಅಥವಾ ತುಂಡು ಭೂಮಿಗೆ ನಿಯೋಜಿಸಲಾದ ಸರ್ವೇ ಸಂಖ್ಯೆಯನ್ನು ಸೂಚಿಸುತ್ತದೆ. ಆದ್ದರಿಂದ ಈ ಭೂಮಿಯ ಅಧಿಕೃತ ದಾಖಲೆಗಳು ಗ್ರಾಮಗಳ ಜನರ ಬಳಿ ಇಲ್ಲ. ಇದರಿಂದಾಗಿ ಭೂಮಿಯ ಬಗ್ಗೆ ಹಲವಾರು ಬಾರಿ ಮಾಲೀಕತ್ವದ ವಿವಾದ ಎದ್ದಿದೆ. ಹಾಗಾಗಿ ಜನರಿಗೆ ಭೂಮಿಯ ಮಾಲೀಕತ್ವ ನೀಡಲು ಈ ಮಾಲೀಕತ್ವ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಹಳ್ಳಿಗಳಲ್ಲಿ ಡ್ರೋನ್ ಮೂಲಕ ಮ್ಯಾಪಿಂಗ್ ಮಾಡಲಾಗುತ್ತದೆ. ಇದು ಪಂಚಾಯತ್ ರಾಜ್ ಸಚಿವಾಲಯ, ರಾಜ್ಯ ಕಂದಾಯ ಇಲಾಖೆ ಹಾಗು ಭಾರತೀಯ ಸಮೀಕ್ಷೆ ಸಂಸ್ಥೆಗಳ ಅಧೀನದಲ್ಲಿ ಬರುತ್ತದೆ. ಭೂಮಿಯ ಎಲ್ಲ ವಿಷ್ಯಗಳನ್ನು ಖಚಿತ ಪಡಿಸಿಕೊಂಡ ನಂತರ ಜನರಿಗೆ ಮಾಲೀಕತ್ವವನ್ನು ನೀಡಲಾಗುತ್ತದೆ. 2021 ರಿಂದ 2025 ರ ವರೆಗೆ ದೇಶದ ಸುಮಾರು 6.62 ಲಕ್ಷ ಹಳ್ಳಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದೆ.