Paris Paraolympic: ಪ್ಯಾರ ಒಲಂಪಿಕ್ಸ್ ನಲ್ಲಿ ಡಬಲ್ ಪದಕ ಪಡೆದು ಇತಿಹಾಸ ಸೃಷ್ಟಿಸಿದ ಭಾರತದ ಸ್ಪ್ರಿಂಟರ್ ! (Sprinter)

14

ಈ ಬಾರಿಯ ಪ್ಯಾರ ಒಲಂಪಿಕ್ಸ್ ನಲ್ಲಿ ಭಾರತ ಅತ್ಯದ್ಭುತ ಪ್ರದರ್ಶನ ನೀಡುವ ಭರವಸೆಯೊಂದಿಗೆ ಪ್ಯಾರಿಸ್ ತಲುಪಿತ್ತು. ಅದರಂತೆ ಕೊಟ್ಟ ಭರವಸೆ ಹುಸಿ ಆಗಲಿಲ್ಲ. ಮೊದಲ ದಿನಕ್ಕೆ ಮೂರು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿ ಮಾಡಿತ್ತು . ಅಷ್ಟೇ ಅಲ್ಲದೆ ಇನ್ನಷ್ಟು ಪದಕ ಗೆಲ್ಲುವ ವಿಶ್ವಾಸ ಕೂಡ ಮೂಡಿಸಿತ್ತು. ಆದರೆ ಈ ಬಾರಿ ವಿಭಿನ್ನ ಎಂಬಂತೆ ಭಾರತದ 23 ವರ್ಷದ ಪೋರಿ (preethi Pal)ಪ್ರೀತಿ ಪಾಲ್ ಅವರು ಡಬಲ್ ಧಮಾಕ ಮಾಡುವ ಮೂಲಕ ಭಾರತದ ಇತಿಹಾಸದಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಗರಿಮೆ ತಮ್ಮದಾಗಿಸಿ ಕೊಂಡಿದ್ದಾರೆ.(Two medals in one Olympics)

ಹೌದು ಇದೆ ಮೊದಲ ಬಾರಿಗೆ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಮೂರನೇ ಪದಕ ಗೆದ್ದಿತ್ತು ಎಂಬುವುದು ನಮಗೆ ಗೊತ್ತಿದೆ. ಅಷ್ಟೇ ಅಲ್ಲದೆ ಈ ವಿಭಾಗದಲ್ಲಿ ಇದು ಚೊಚ್ಚಲ ಪದಕವೂ ಆಗಿತ್ತು. 23ರ ಹರೆಯದ ಪ್ರೀತಿ ಪಾಲ್ ಅವರು 100 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು.14.21 ಸೆಕೆಂಡ್ ನಲ್ಲಿ ಓಟ ಮುಗಿಸಿದ ಇವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು . ನಿನ್ನೆಯ ದಿನ ಮತ್ತೆ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದ 200 ಮೀಟರ್ ಓಟದಲ್ಲಿ 30.01 ಸೆಕೆಂಡ್ಸ್ ನಲ್ಲಿ ಓಡಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಒಂದೇ ಒಲಂಪಿಕ್ಸ್ ನಲ್ಲಿ ಎರಡು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ. (Preethi pal creates history by winning 2 medals in one olympic)ಇವರ ಸಾಧನೆ ಹೀಗೆ ಮುಂದುವರೆಯಲಿ ಇನ್ನಷ್ಟು ಕ್ರೀಡಾ ಪಟುಗಳು ಭಾರತದ ಪಾಲಿಗೆ ಪದಕ ಗೆಲ್ಲಲಿ ಎಂದು ಹಾರೈಸೋಣ.

Leave A Reply

Your email address will not be published.