18 ವರ್ಷದ ಹುಡುಗನ ಬಿಸಿನೆಸ್ ಐಡಿಯಾ ಗೆ ಫಿದಾ ಆದ ರತನ್ ಟಾಟಾ. ಆ ಕಂಪನಿ ಮೇಲೆ ೫೦% ಬಂಡವಾಳ ಹೂಡಿದ ಟಾಟಾ?
ಭಾರತ ದೇಶದ ದೊಡ್ಡ ದೊಡ್ಡ ಕಂಪನಿ ಗಳಲ್ಲಿ ಒಂದು ಟಾಟಾ ಸಮೂಹ. ಇದರ ಮುಖ್ಯಸ್ಥರಾದ ರತನ್ ಟಾಟಾ ಇದೀಗ ೧೮ ವರ್ಷದ ಹುಡುಗ ಅರ್ಜುನ್ ದೇಶಪಾಂಡೆ ಪ್ರಾರಂಭಿಸಿದ ಔಷದ ಮಾರುವ ಕಂಪನಿ ಮೇಲೆ ೫೦% ಬಂಡವಾಳ ಹಾಕಿದ್ದಾರೆ. ಅಂದರೆ ಆ ಕಂಪನಿ ಇದೀಗ ೫೦% ರತನ್ ಟಾಟಾಗೆ ಸೇರಿದ್ದು. ಈ ಹುಡುಗನ ಔಷದಿ ಮಾರುವ ಕಂಪನಿ ಬೇರೆ ಆನ್ಲೈನ್ ಮೂಲಕ ಔಷದಿ ಮಾರುವ ಕಂಪನಿ ಗಳಿಗಿಂತ ಭಿನ್ನವಾಗಿದೆ. ಇದೊಂದು ಜೆನೆರಿಕ್ ಔಷದಿ ಕೇಂದ್ರ ಆಗಿದ್ದು ಇಲ್ಲಿ ದೊರಕುವ ಮದ್ದುಗಳ ಬೆಲೆ ಬೇರೆ ಕಡೆಗಿಂತ ತುಂಬಾ ಕಡಿಮೆ ಇರುತ್ತದೆ.
ಅರ್ಜುನ್ ದೇಶಪಾಂಡೆ ಪ್ರಕಾರ ರತನ್ ಟಾಟಾ ಈ ಬಂಡವಾಳ ಹೂಡಿಕೆ ವಿಚಾರ ೩-೪ ತಿಂಗಳ ಮೊದಲೇ ತಮ್ಮ ಗಮನಕ್ಕೆ ತಗೊಂಡಿದ್ದರು. ಟಾಟಾ ಈ ಜೆನೆರಿಕ್ ಕಂಪನಿ ಯಾ ಪಾರ್ಟ್ನರ್ ಆಗಬೇಕೆಂದಿದ್ದರು. ಅದೇ ರೀತಿ ಅರ್ಜುನ್ ದೇಶಪಾಂಡೆ ಅವರ ಮೆಂಟರ್ ಕೂಡ ಆಗಬೇಕೆನ್ನುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ದಾರೆ. ರತನ್ ಟಾಟಾ ಹಾಗು ಜೆನೆರಿಕ್ ಆಧಾರ್ ಎರಡು ಕೂಡ PARTNERSHIP ಆಗುದು ಬಹುತೇಕ ಖಚಿತವಾಗಿದ್ದು ಇದನ್ನು ಮಾದ್ಯಮಕ್ಕೆ ತಿಳಿಸುವುದು ಮಾತ್ರ ಬಾಕಿ ಇದೆ.
ಎರಡು ವರ್ಷಗಳ ಹಿಂದೆ ಶುರು ಮಾಡಿದ್ದರು ಈ ಉದ್ಯಮ – ಅರ್ಜುನ್ ದೇಶಪಾಂಡೆ ಈ ಫಾರ್ಮ ಉದ್ಯಮ ಶುರು ಮಾಡುವಾಗ ಅವರಿಗೆ ಕೇವಲ ೧೬ ವರ್ಷ ಪ್ರಾಯ ಅಷ್ಟೇ ಆಗಿತ್ತು. ಅಂದರೆ ೨೦೧೮-೧೯ ರಲ್ಲಿ ಪ್ರಾರಂಭಿಸಿದ್ದರು. ಇದರ ವಾರ್ಷಿಕ ಆಧಾಯ ೬ ಕೋಟಿಗೂ ಮೇಲಿದೆ ಎಂದು ಹೇಳಿತ್ತಿದ್ದಾರೆ ಅರ್ಜುನ್ ದೇಶಪಾಂಡೆ. ರತನ್ ಟಾಟಾ ಈ ಹುಡುಗನ ಉದ್ಯಮಕ್ಕೆ ಅಲ್ಲದೆ ಅನೇಕ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಿದ್ದಾರೆ. ಈ ಜೆನೆರಿಕ್ ಆಧಾರ್ ಔಷದ ಕೇಂದ್ರ ದ ಮೇಲೆ ರತನ್ ಟಾಟಾ ಹಾಕಿದ ಬಂಡವಾಳ ರತನ್ ಟಾಟಾ ಸ್ವಂತ ಹಣವಾಗಿದ್ದು ಇದು ಟಾಟಾ ಸಂಸ್ಥೆ ಮೂಲಕ ಹಾಕಿದ್ದಲ್ಲ. ಇದಲ್ಲದೆ ಇದಕ್ಕಿಂತ ಮೊದಲು ಓಲಾ ಪೆಟಿಎಂ, ಲೆನ್ಸ್ ಕಾರ್ಟ್ ನಂತಹ ಉದ್ಯಮಗಳಿಗೂ ಬಂಡವಾಳ ಹಾಕಿದ್ದಾರೆ ರತನ್ ಟಾಟಾ.
ಅರ್ಜುನ್ ದೇಶಪಾಂಡೆ ಅವರ ಈ ಉದ್ಯಮ ಪ್ರಾಫಿಟ್ ಶೇರಿಂಗ್ ರೀತಿಯ ಉದ್ಯಮ ಆಗಿದೆ. ಈ ಕಂಪನಿ ಈಗ ನಿಧಾನಕ್ಕೆ ಪ್ರಗತಿ ಸಾಧಿಸುತ್ತಿದೆ. ಮುಂಬೈ, ಬೆಂಗಳೂರು ಮತ್ತು ಒಡಿಷಾದಂತಹ ಕಡೆಗಳಲ್ಲಿ ಸುಮಾರು ೩೦ ಕ್ಕೂ ಅಹ್ದಿಕ ರೀಟೇಲರ್ ಈ ೧೮ ವರ್ಷದ ಯುವಕನ ಬಿಸಿನೆಸ್ ಮಾಡೆಲ್ ಗೆ ಕೈ ಜೋಡಿಸಿದ್ದಾರೆ. ಇದೊಂದು ಯುವಕರಿಗೆ ಸ್ಫೂರ್ತಿ ಅಂದರೆ ತಪ್ಪಾಗಲಾರದು. ಇಷ್ಟು ಸಣ್ಣ ವಯಸ್ಸಿಗೆ ರತನ್ ಟಾಟಾ ರಂತಹ ದೊಡ್ಡ ಉದ್ಯಮಿ ಜೊತೆ ಕೈ ಜೋಡಿಸಿದ್ದಾರೆ. ಅರ್ಜುನ್ ಅವರ ಪ್ರಕಾರ ಮುಂಬರುವ ಒಂದು ವರ್ಷದಲ್ಲಿ ೧೦೦೦ ಕ್ಕೂ ಅಧಿಕ ಫ್ರಾಂಚೈಸ್ ತೆರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕಂಪನಿ ಡಯಾಬಿಟಿಸ್ ಹಾಗು ಹೈಪರ್ ಟೆನ್ಶನ್ ನಂತಹ ಚಿತ್ಸೆಗೆ ಮದ್ದನ್ನು ಪೂರೈಸುತ್ತದೆ. ಅದೇ ರೀತಿ ಕಂಪನಿ ಸ್ವಲ್ಪ ಸಮಯದಲ್ಲೇ ಕ್ಯಾನ್ಸರ್ ರೋಗಿಗಳಿಗೂ ಮದ್ದನ್ನು ತರುವ ಯೋಚನೆ ಮಾಡುತ್ತಿದೆ ಎಂದು ಅರ್ಜುನ್ ಹೇಳಿದ್ದಾರೆ.