4600 ಕೋಟಿ ಮೌಲ್ಯದ ಆಸ್ತಿ ಒಡತಿಯಾದ ಭಾರತದ ನಟಿ, 15 ವರ್ಷಗಳಲ್ಲಿ ಯಾವುದೇ ಹಿಟ್ ಸಿನೆಮಾ ಇಲ್ಲ, ದೀಪಿಕಾ, ಪ್ರಿಯಾಂಕಾ, ಆಲಿಯಾ, ಕತ್ರಿನಾ, ಐಶ್ವರ್ಯಾ ರೈ ಗಿಂತ ಶ್ರೀಮಂತೆ? ಯಾರಿವರು?

ಹುರುನ್ ಇಂಡಿಯಾ (Huran India richest people list) ಶ್ರೀಮಂತರ ಪಟ್ಟಿಯ 2024 ರ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ವಾರ್ಷಿಕ ಪಟ್ಟಿಯು ಭಾರತದಲ್ಲಿನ ಅತ್ಯಂತ ಶ್ರೀಮಂತ (Richest people of india list) ವ್ಯಕ್ತಿಗಳ ಹೆಸರುಗಳನ್ನು ಅವರ ಗಳಿಕೆಯ ಆಧಾರದ ಮೇಲೆ ಅವರ ಸಂಪತ್ತಿನ ಅಂದಾಜುಗಳೊಂದಿಗೆ ಸಂಗ್ರಹಿಸುತ್ತದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಬಿಲಿಯನೇರ್‌ಗಳ(billianair list) ಈ ಪಟ್ಟಿಯಲ್ಲಿ ಇದ್ದಾರೆ ಅವರ ಜೊತೆಗೆ ಹಲವಾರು ಮನರಂಜನಾ ಸೆಲೆಬ್ರಿಟಿಗಳು ಸಹ ಪಟ್ಟಿಯ ಭಾಗವಾಗಿದ್ದಾರೆ. ಈ ಪಟ್ಟಿಯ ಆಶ್ಚರ್ಯಕರ ಸಂಗತಿಯೆಂದರೆ ಸಿನೆಮಾ ರಂಗದ ಶ್ರೀಮಂತ ನಟಿಯ ಹೆಸರು – ಹೌದು ದಶಕಗಳಿಂದ ಈ ನಟಿ ಯಾವುದೇ ಹಿಟ್ ಸಿನೆಮಾಗಳನ್ನು ಕೊಡಲಿಲ್ಲ ಆದರೂ ಇವರು ಭಾರತದ ಶ್ರೀಮಂತ ನಟಿ. (Richest people of entertainment industry)

ನಟ ಶಾರುಖ್ ಖಾನ್ ಅವರು 7300 ಕೋಟಿ ರೂಪಾಯಿಗಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಇರುವ ಅತಿ ಹೆಚ್ಚು ಸಂಪತ್ತು ಹೊಂದಿರುವ ಸಿನೆಮಾ ನಟ, (richest man in entertainment industry) ಇದು ಭಾರತದ ಯಾವುದೇ ಮನರಂಜನಾ ಕ್ಷೇತ್ರದ ವ್ಯಕ್ತಿಗಳಿಗೆ ಹೋಲಿಕೆ ಮಾಡಿದರೆ ಅತೀ ಹೆಚ್ಚು ಸಂಪತ್ತು ಇವರ ಬಳಿ ಇದೆ. ಅವರ ನಂತರದ ಸ್ಥಾನದಲ್ಲಿ ಇರುವವರೇ ಈ ನಟಿ ಹೌದು ಶಾರುಕ್ ಅವರ ಬಿಸಿನೆಸ್ ಪಾಲುದಾರೆ ಮತ್ತು ಮಾಜಿ ನಟಿ ಜೂಹಿ ಚಾವ್ಲಾ. 4600 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ, ಜೂಹಿ ಈಗ ಆರಾಮವಾಗಿ ಭಾರತದ ಶ್ರೀಮಂತ ನಟಿ ಮತ್ತು ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. (Richest women of entertainment industry)

2000 ರ ನಂತರ, ನಟಿ ಚಲನಚಿತ್ರ ನಿರ್ಮಾಣ ಮತ್ತು ಪೋಷಕ ಪಾತ್ರಗಳಿಗೆ ತಮ್ಮನ್ನು ತಾವು ಸೀಮಿತ ಮಾಡಿಕೊಂಡರು. ಮೊದಲು ಡ್ರೀಮ್ಸ್ ಅನ್‌ಲಿಮಿಟೆಡ್ ಸಂಸ್ಥೆಯೊಂದಿಗೆ ನಿರ್ಮಾಣ ಮಾಡುತ್ತಿದ್ದು ಮತ್ತು ಈಗ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಅವರು ಚಲನಚಿತ್ರ ನಿರ್ಮಾಣದಲ್ಲಿ ಶಾರುಖ್‌ನ ಪಾಲುದಾರರಾಗಿದ್ದಾರೆ. ಈ ಸಂಸ್ಥೆ ಅವರಿಗೆ ಹೇರಳವಾದ ಸಂಪತ್ತನ್ನು ತಂದು ಕೊಟ್ಟಿದೆ. ಅದೇ ಅಲ್ಲದೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಕೂಡ ಇವರ ಪಾಲು ಇದೆ. (Richest actress with ೦ hits from last 15 years)

0hit filmsActressbollywoodHuran India listRich actorRich actressRichest people of indiaSharukkhan
Comments (0)
Add Comment