ಮತ್ತೊಮ್ಮೆ ಪ್ಯಾರ ಒಲಂಪಿಕ್ಸ್ ನಲ್ಲಿ ಮಹಿಳೆಯರ ಪಾರುಪತ್ಯ ಮುಂದುವರೆದಿದೆ. ಎರಡನೇ ದಿನ ನಾಲ್ಕು ಪದಕ ಗಿದ್ದಿದ ಭಾರತ ಮೂರನೇ ದಿನ ಕೂಡ ಪದಕದ ಬೇಟೆ ಮುಂದುವರೆಸಿದೆ. ರುಬಿನಾ ಫ್ರಾನ್ಸಿಸ್ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಪದಕದ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಈ ವಿಭಾಗದಲ್ಲಿ ಅತಿ ಕಿರಿಯ ಆಟಗಾರ್ತಿ ಆಗಿದ್ದ ರುಬಿನಾ ಫ್ರಾನ್ಸಿಸ್ ಅವರು ತಮ್ಮ ಗುರಿಯನ್ನು ಕಂಚಿನ ಪದಕಕ್ಕೆ ಇಟ್ಟಿದ್ದಾರೆ.
ರುಬಿನಾ ಫ್ರಾನ್ಸಿಸ್ ಅವರು 1999 ರಲ್ಲಿ ಮಧ್ಯಪ್ರದೇಶ ದ ಭೋಪಾಲ್ ನಲ್ಲಿ ಜನೆದ್ದ ಇವರು ಭಾರತದ ಪರ ಪ್ಯಾರಾ ಪಿಸ್ತೂಲ್ ಶೂಟರ್ ಆಗಿದ್ದಾರೆ. ಅವರು 2024 ರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ P2 10 m ಏರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು.ಪಿಸ್ತೂಲ್ ಶೂಟಿಂಗ್‌ನಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೌದು ಶೂಟಿಂಗ್ ನಲ್ಲಿ ಪದಕ ಗೆದ್ದಿದ್ದರು ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಇದು ಭಾರತದ ಮೊದಲ ಪಡಕವಾಗಿದೆ.