ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಭಾರತದ ಆರ್ಥಿಕತೆಯ ಅಡಿಪಾಯದಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ವಾಸ್ತವವಾಗಿ, ಅವರ ಅಗಾಧವಾದ ಸಂಪತ್ತಿನ ಪ್ರಭಾವವು ಪ್ರಪಂಚದಾದ್ಯಂತ ಗೊತ್ತು . ರಿಲಯನ್ಸ್ ಇಂಡಸ್ಟ್ರೀಸ್, ದಶಕಗಳಿಂದ, ವಿಭಿನ್ನ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ತಮ್ಮನ್ನು ತಾವು ಗುರುತಿಸಿಕೊಂಡಿದೆ. ದೇಶದ ಹಣಕಾಸು ವ್ಯವಸ್ಥೆಯನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ.
2008-2009 ರ ಆರ್ಥಿಕ ವರ್ಷದಿಂದ ಅಂಬಾನಿ ಅವರ ವೈಯಕ್ತಿಕ ಸ್ಯಾಲರಿ ವಾರ್ಷಕೆ 15 ಕೋಟಿ ರೂ. ಆಗಿದೆ ಎಂದು ಹಲವು ಮಾರುಕಟ್ಟೆ ವರದಿಗಳು ಹೇಳುತ್ತವೆ. ಪ್ರತಿಯೊಬ್ಬ ಉದ್ಯೋಗಿ, ತನ್ನ ವ್ಯವಹಾರಗಳಿಂದ ಹಿಡಿದು ತನ್ನ ವೈಯಕ್ತಿಕ ಸಿಬ್ಬಂದಿಯವರ ಬಗೆಗೆ ಕೂಡ ಚೆನ್ನಾಗಿ ಕಾಳಜಿ ವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ.
ಅವರ ವೈಯಕ್ತಿಕ ಕಾರು ಚಾಲಕನಿಗೆ(Driver) ತಿಂಗಳಿಗೆ ರೂ 2 ಲಕ್ಷ ರೂ ಇದೆ.ವಾರ್ಷಿಕವಾಗಿ 24 ಲಕ್ಷ ವೇತನ ಪ್ಯಾಕೇಜ್ ಇದೆ ಎಂದು ಕೆಲವು ವರದಿಗಳು ಹೇಳುತ್ತದೆ. ಇದು 2017 ರಲ್ಲಿ ಅವರು ತಮ್ಮ ಡ್ರೈವರ್ ಗೆ ನೀಡುತ್ತಿದ್ದ ಸಂಬಳ ಈ ವಿಷಯ ವೀಡಿಯೊ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಏಳು ವರ್ಷಗಳ ನಂತರ, ಈಗ ಚಾಲಕನ ಸಂಬಳವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಯಾರು ಬೇಕಾದರೂ ಸುಲಭವಾಗಿ ಊಹಿಸಬಹುದು. ಸದ್ಯದ ಪ್ಯಾಕೇಜ್ ಎಷ್ಟಿರಬಹುದು ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಮೂಡಿದೆ. ಕೆಲವರ ಪ್ರಕಾರ ಅದೀಗ 3.5-4 ಲಕ್ಷದ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.