SBI 1513 ಹುದ್ದೆಗಳಿಗೆ ಅರ್ಜಿ ಅಹ್ವಾನ – sbi specialist cadre officer recruitment 2024

sbi specialist cadre officer recruitment 2024 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಖಾಲಿ ಇರುವ 1513 ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ & ಡೆಲಿವರಿ, ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – IT ಆರ್ಕಿಟೆಕ್ಟ್, ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫಾರ್ಮಶನ್ ಸೆಕ್ಯೂರಿಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಇದೀಗ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಸರಿಯಾದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದ್ದು ಭಾರತದಾದ್ಯಂತ ಎಲ್ಲಿಯಾದರೂ ಕೆಲಸ ಮಾಡಲು ತಯಾರಿರಬೇಕು.

ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ 187ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಬೆಂಬಲ ಮತ್ತು ಕ್ಲೌಡ್ ಕಾರ್ಯಾಚರಣೆಗಳು 412ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ನೆಟ್‌ವರ್ಕಿಂಗ್ ಕಾರ್ಯಾಚರಣೆಗಳು 80ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್ 27ಉಪ ವ್ಯವಸ್ಥಾಪಕರು (ಸಿಸ್ಟಮ್ಸ್) – ಮಾಹಿತಿ ಭದ್ರತೆ 7ಸಹಾಯಕ ವ್ಯವಸ್ಥಾಪಕ (ಸಿಸ್ಟಮ್) 798ಉಪ ಉಪಾಧ್ಯಕ್ಷ-ಐಟಿ ಅಪಾಯ 1ಸಹಾಯಕ ಉಪಾಧ್ಯಕ್ಷ-ಐಟಿ ಅಪಾಯ 1 ಈ ಮೇಲಿನ ಹುದ್ದೆಗಳು ಖಾಲಿ ಇದ್ದು ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BE. /B. Tech / MCA/ M. Tech/ M.Sc/ MBA ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.

ಇನ್ನು ವಯೋಮಿತಿ ವಿಚಾರಕ್ಕೆ ಬಂದರೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉಳಿದಂತೆ ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ರೂ.64820-93960/- ಪ್ರತಿ ತಿಂಗಳು ನಿಗದಿಪಡಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಮಾತ್ರ 750/- ರುಪಾಯಿ ಶುಲ್ಕ ನಿಗದಿಪಡಿಸಲಾಗಿದೆ.ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸೆಪ್ಟೆಂಬರ್ 14 ರಿಂದ ಅರ್ಜಿ ಸಲ್ಲಿಕೆ ಆರಂಭ ವಾಗಿದ್ದು ಅಕ್ಟೋಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಿರುತ್ತದೆ.https://ibpsonline.ibps.in/sbisco2aug24/

https://recruitment.bank.sbi/crpd-sco-2024-25-16/apply

Banking jobsGovernment jobsSBISBI recruitmentSBI recruitment 2024SBI SO 2024Specialist officer recruitment
Comments (0)
Add Comment