ಭಾರತದ ಎರಡನೇ ಶ್ರೀಮಂತ ನಟ ಯಾರು ಗೊತ್ತೇ? ಪ್ರತಿದಿನ 27 ಲಕ್ಷ ರೂ ಗಳಿಸುವ ಇವರು, ಅಮಿತಾಭ್, ಅಕ್ಷಯ್, ಸಲ್ಮಾನ್, ಅಮೀರ್ ಗಿಂತ ಶ್ರೀಮಂತ!

16

ಶಾರುಖ್ ಖಾನ್ ಮೊದಲ ಬಾರಿಗೆ Huran India Richest people ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಡಿದ್ದಾರೆ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರಂತಹವರ ಮಧ್ಯೆ ಶಾರುಕ್ ಕೂಡ ತಮ್ಮನ್ನು ತಾವು ಗುರುತಿಸಿ ಕೊಂಡಿದ್ದಾರೆ. 7,300 ಕೋಟಿ ರೂ.ಗಳ ಅಂದಾಜು ನಿವ್ವಳ ಮೌಲ್ಯದೊಂದಿಗೆ ಶಾರುಖ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ ಎಂದು ವರದಿಗಳು ಹೇಳುತ್ತವೆ. ಆದರೆ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವವರು ಯಾರು ಗೊತ್ತಾ? ಈ ನಟ ಪ್ರತಿ ದಿನಕ್ಕೆ 27 ಲಕ್ಷ ರುಪಾಯಿ ದುಡಿಯುತ್ತಾರೆ. ಅಷ್ಟೇ ಅಲ್ಲದೆ ಇವರು ಇತರ ದಿಗ್ಗಜ ಕೆಲ ನಟರಿಗಿಂತಲು ಶ್ರೀಮಂತ. ಅಚ್ಚರಿ ಅನಿಸಿದರೂ ಇದು ನಿಜ ಸಂಗತಿ . ಆ ನಟ ಮತ್ಯಾರು ಅಲ್ಲ ಹೃತಿಕ್ ರೋಶನ್ ಅವರು.

ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಪ್ರಕಾರ, ಹೃತಿಕ್ ಅವರು ಕಳೆದ 10 ವರ್ಷಗಳಲ್ಲಿ ಕೇವಲ 7 ಚಿತ್ರಗಳಲ್ಲಿ ನಟಿಸಿದ್ದರು ,ಹೃತಿಕ್ ರೋಷನ್ 2000 ಕೋಟಿ ರೂ.ಗಳ ನಿವ್ವಳ ಆಸ್ತಿಯೊಂದಿಗೆ ಶಾರುಖ್ ಖಾನ್ ನಂತರದ ಸ್ಥಾನವನ್ನು ಪಡೆದಿದ್ದಾರೆ. ಅವರು ಕಾಣಿಸಿಕೊಳ್ಳುವ ಚಲನಚಿತ್ರಗಳಿಗೆ ಪಡೆಯುವ ಸಂಪಾದನೆ ಹೊರತುಪಡಿಸಿ, ಹೃತಿಕ್ ರೋಷನ್ ಅವರ ನಿವ್ವಳ ಮೌಲ್ಯವು ಅವರ (athleisure brand HRX) ಅಥ್ಲೀಶರ್ ಬ್ರ್ಯಾಂಡ್ HRX ನ ಯಶಸ್ಸಿಗೆ ಸಲ್ಲುತ್ತದೆ. ಹೃತಿಕ್ ರೋಷನ್ ಟ್ವಿಟರ್‌ನಲ್ಲಿ ಒಟ್ಟು 32.3 ಮಿಲಿಯನ್ ಹಿಂಬಾಲಕರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೃತಿಕ್ ರೋಷನ್ 2000 ರಲ್ಲಿ ‘ಕಹೋ ನಾ…ಪ್ಯಾರ್ ಹೈ’ ಸಿನೆಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಹೃತಿಕ್ ರೋಶನ್ ಅವರು ಒಂದು ಚಿತ್ರಕ್ಕೆ 75-100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅವರ ವಾರ್ಷಿಕ ಆದಾಯ ಸುಮಾರು 260 ಕೋಟಿ ಎಂದು ಹೇಳಲಾಗಿದೆ. ಹೃತಿಕ್ ರೋಷನ್ ಬ್ರಾಂಡ್ ಜಾಹೀರಾತುಗಳ ಮೂಲಕವೂ 10-12 ಕೋಟಿ ರೂ ಗಳಿಸುತ್ತಾರೆ , ಸಾಮಾಜಿಕ ಜಾಲತಾಣದ ತಮ್ಮ ಪೋಸ್ಟ್‌ಗಳಿಗೆ ನಟ 4-5 ಕೋಟಿ ರೂ. ಹಣ ಪಡೆಯುತ್ತಾರೆ.

Leave A Reply

Your email address will not be published.