ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನೇಮಕಾತಿ 2024 – SIDBI Bank Recruitment 2024
SIDBI Bank Recruitment 2024 – ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐಡಿಬಿಐ) ನಲ್ಲಿ ಮೂಲಕ ಖಾಲಿ ಇರುವ 35 ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆ ಪ್ರಕಾರ ಒಟ್ಟು 35 ಹುದ್ದೆಗಳು ಖಾಲಿ ಇದ್ದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಹಾಗೆ ಆಯ್ಕೆ ಆದ ಅಭ್ಯರ್ಥಿಗಳು ದೇಶದ ಯಾವ ರಾಜ್ಯದಲ್ಲಾದರು ಕೆಲಸ ಮಾಡಲು ಸಿದ್ಧರಿರಬೇಕು.
ವ್ಯವಸ್ಥಾಪಕರು (ಶಾಖೆ ಕಛೇರಿಗಳು) : 30ಮ್ಯಾನೇಜರ್ : 5 ಒಟ್ಟು 35 ಹುದ್ದೆಗಳು ಖಾಲಿ ಇದ್ದು, ಇನ್ನು ವಿಧ್ಯಾಭ್ಯಾಸದ ವಿಚಾರಕ್ಕೆ ಬರುವುದಾದರೆ ಅಭ್ಯರ್ಥಿಗಳು CFA, BE ಅಥವಾ B.Tech, MBA, MMS, MS, PGDM, M.Sc, MA ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಗರಿಷ್ಠ 37 ವರ್ಷಗಳನ್ನು ಹೊಂದಿರಬೇಕಾಗುತ್ತದೆ. ವಯೋಮಿತಿ ವಿಚಾರಕ್ಕೆ ಸಂಬಂಧಿಸಿದಂತೆ ಒಬಿಸಿ (NCL) ಅಭ್ಯರ್ಥಿಗಳು 03 ವರ್ಷಗಳು, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ಅಂಗವಿಕಲ ( UR / EWS) ಅಭ್ಯರ್ಥಿಗಳು : 10 ವರ್ಷಗಳ ವಿನಾಯಿತಿ ಇದೆ.
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.55200/- ರೂ ಗಳಿಂದ ರೂ.99750/- ರೂ ಗಳ ವರೆಗೆ ನಿಗದಿಪಡಿಸಲಾಗಿದೆ.ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆಅರ್ಜಿ ಸಲ್ಲಿಸುವ ವಿಳಾಸ:CGM (HRDV), ಸ್ವಾವಲಂಬನ್ ಭವನ, ಪ್ಲಾಟ್ ನಂ. C-11, ‘G’ ಬ್ಲಾಕ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಪೂರ್ವ), ಮುಂಬೈ-400051, ಮಹಾರಾಷ್ಟ್ರಸೆಪ್ಟೆಂಬರ್ 13 ರಿಂದ 30 ರ ವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು.