Smart Electric Meter ಅಳವಡಿಕೆಯಿಂದ ಹೆಚ್ಚಿನ ಬಿಲ್ ಬರುತ್ತದೆ ಅಂತೆ ? Hauda ಏನಿದರ ಸತ್ಯಾಸತ್ಯತೆ ಇಲ್ಲಿದೆ! ನೀವು ಇಂದೇ ನಿಮ್ಮ ಮೀಟರ್ ಚೆಕ್ ಮಾಡಿ

107

ಸರ್ಕಾರ ಇದೀಗ ಹಳೆಯ ಎಲ್ಲಾ ರೀಡಿಂಗ್ ಮೀಟರ್ ತೆಗೆದು ಹೊಸ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ ಮಾಡುತ್ತಿದೆ. ಆದರೆ ಈಗ ಅದೇ ಸ್ಮಾರ್ಟ್ ಮೀಟರ್ ವಿಷಯ ಬಹಳಷ್ಟು ಸದ್ದು ಮಾಡುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಸರ್ಕಾರ ಜನರ ಹಣ ಲೂಟಿ ಮಾಡುತ್ತಿದೆ. ಹೆಚ್ಚಿನ ಬಿಲ್ ಬರುತ್ತಿದೆ ಎಂದು ಗಲಾಟೆ ಶುರು ಮಾಡಿದ್ದಾರೆ. ಅಷ್ಟಕ್ಕೂ ನಡೆದದ್ದು ಏನು ತಿಳಿಯೋಣ.ಬಿಹಾರದಲ್ಲಿ ಸ್ಮಾರ್ಟ್ ಮೀಟರ್‌ಗಳ ಬಗ್ಗೆ ಇದೀಗ ದೊಡ್ಡ ಮಟ್ಟದಲ್ಲಿ ಕೋಲಾಹಲ ಎದ್ದಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸ್ಮಾರ್ಟ್ ಮೀಟರ್‌ಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಜನರು. ಈ ಸ್ಮಾರ್ಟ್ ಮೀಟರ್ ನಲ್ಲಿ ವಿದ್ಯುತ್ ಲೋಡ್ ಹೆಚ್ಚು ಹೆಚ್ಚಾಗುತ್ತದೆ ಎಂದು ಗ್ರಾಮೀಣ ಪ್ರದೇಶದ ಜನರು ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬ ವಿಚಾರ ತಿಳಿಯೋಣ. ಹಾಗದರೆ ಹಳೆಯ ಮೀಟರ್ ಮತ್ತು ಈ ಹೊಸ ಸ್ಮಾರ್ಟ್ ಮೀಟರ್ ನಡುವಿನ ವ್ಯತ್ಯಾಸವೇನು ಎಂದು ನಾವು ನಿಮಗೆ ಹೇಳುತ್ತೇವೆ?

ಹಳೆಯ ಮೀಟರ್‌ನಲ್ಲಿ ಏನಿತ್ತು? ನೀವು ಹಳೆಯ ವಿದ್ಯುತ್ ಮೀಟರ್ ಅನ್ನು ಸುಲಭವಾಗಿ ಆಫ್ ಮಾಡಬಹುದು. ಹಾಗೆಯೇ ಹಳೆಯ ಮೀಟರ್ ಅನ್ನು ಟ್ಯಾಂಪರ್ ಮಾಡುವುದು ತುಂಬಾ ಸುಲಭ. ಹಳೆಯ ವಿದ್ಯುತ್ ಮೀಟರ್‌ಗಳಲ್ಲಿ, ಪ್ರತಿ 100 ಯೂನಿಟ್ ವಿದ್ಯುತ್ ಬಳಕೆಗೆ ಮೀಟರ್ 10 ಯೂನಿಟ್ ಮಾತ್ರ ತೋರಿಸುತ್ತಿತ್ತು. ಹಳೆಯ ಮೀಟರ್‌ನಲ್ಲಿ ಸರ್ಕ್ಯೂಟ್ ಅನ್ನು ಸುಲಭವಾಗಿ ಬದಲಾವಣೆ ಮಾಡಬಹುದು. ಹಳೆಯ ಮೀಟರ್‌ಗಳಲ್ಲಿ ಪ್ರತಿ ತಿಂಗಳು ವಿದ್ಯುತ್ ಕಳ್ಳತನ ನಡೆಸಿರುವ ಅದೆಷ್ಟೋ ಉದಾಹರಣೆ ನೋಡಿದ್ದೇವೆ.

ಆದರೆ ಸ್ಮಾರ್ಟ್ ಮೀಟರ್‌ನ ಇದಕ್ಕಿಂತ ಭಿನ್ನ ಇದರ ವಿಶೇಷತೆ ಏನೆಂದರೆ? ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಸ್ಮಾರ್ಟ್ ಮೀಟರ್ ಅನ್ನು ರೀಚಾರ್ಜ್ ಮಾಡಬಹುದು. ಸ್ಮಾರ್ಟ್ ಮೀಟರ್‌ನಲ್ಲಿ ನೀವು ರೀಚಾರ್ಜ್ ಮಾಡದೆ ವಿದ್ಯುತ್ ಅನ್ನು ಬಳಸಲಾಗುವುದಿಲ್ಲ. ನೀವು ಹೆಚ್ಚು ಯೂನಿಟ್ ವಿದ್ಯುತ್ ಹೊಂದಿದ್ದರೆ, ನೀವು ಹೆಚ್ಚು ಬಳಕೆ ಮಾಡಲು ಸಾಧ್ಯವಾಗುತ್ತದೆ. ಸ್ಮಾರ್ಟ್ ಮೀಟರ್‌ನಲ್ಲಿ ನೀವು ಎಷ್ಟು ವಿದ್ಯುತ್ ಉಳಿದಿದೆ ಎಂದು ನಿಮಗೆ ಯಾವಾಗಲೂ ತಿಳಿಯುತ್ತದೆ.ಸ್ಮಾರ್ಟ್ ಮೀಟರ್‌ಗಳು ನಿಮಗೆ ನಿಖರವಾದ ಬಿಲ್‌ಗಳನ್ನು ನೀಡುತ್ತವೆ ಸ್ಮಾರ್ಟ್ ಮೀಟರ್ ನಿಂದ ವಿದ್ಯುತ್ ಕಳ್ಳತನ ಮಾಡಲು ಸಾಧ್ಯವೇ ಇಲ್ಲ. ಈ ಎಲ್ಲಾ ಕಾರಣಗಳಿಂದ ಜನರು ದೊಂಬಿ ಮಾಡುತ್ತಿರಬಹುದು. ಬದಲಾಗಿ ಇಲ್ಲಿ ಯಾವುದೇ ರೀತಿಯ ಅಕ್ರಮ ಎಸಗಳು ಸಾಧ್ಯ ಇಲ್ಲ.

Leave A Reply

Your email address will not be published.