SSC GD 2025 ಕಾನ್ಸ್‌ಟೇಬಲ್ ನೇಮಕಾತಿ: 39,000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಪ್ರಾರಂಭ! Central Govt job

151

ಈಗಾಗಲೇ SSC GD 2025 ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು SSC GD ಕಾನ್ಸ್‌ಟೇಬಲ್ ನೇಮಕಾತಿ 2025 ಗೆ ನೋಂದಾಯಿಸಲು ಕೊನೆಯ ದಿನಾಂಕ ಅಕ್ಟೋಬರ್ 14. SSC GD ಕಾನ್ಸ್‌ಟೇಬಲ್ 2025ರ ಪರೀಕ್ಷೆಯು ಜನವರಿ ಮತ್ತು ಫೆಬ್ರವರಿ ನಡುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.ಸೆಪ್ಟೆಂಬರ್ 5 ರಂದು ಜನರಲ್ ಡ್ಯೂಟಿ (ಜಿಡಿ) ಕಾನ್ಸ್‌ಟೇಬಲ್ ನೇಮಕಾತಿಗಾಗಿ ಅರ್ಜಿಯನ್ನು ಪ್ರಾರಂಭಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – ssc.gov.in ನಲ್ಲಿ SSC GD 2025 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಪ್ರಕ್ರಿಯೆಯ ಭಾಗವಾಗಿ 39,481 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಗಳಲ್ಲಿ ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ) ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮತ್ತು ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF), ರೈಫಲ್‌ಮ್ಯಾನ್ (ಜನರಲ್ ಡ್ಯೂಟಿ) ಅಸ್ಸಾಂ ರೈಫಲ್ಸ್ (AR), ಮತ್ತು ಸಿಪಾಯಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB).

ಆಯೋಗವು SSC GD 2025 ಪರೀಕ್ಷೆಯನ್ನು ನಾಲ್ಕು ಹಂತಗಳಲ್ಲಿ ನಡೆಸುತ್ತದೆ – ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ದಕ್ಷತೆ ಪರೀಕ್ಷೆ (PET), ಮತ್ತು ದೈಹಿಕ ಗುಣಮಟ್ಟದ ಪರೀಕ್ಷೆ (PST) ನಂತರ ವೈದ್ಯಕೀಯ ಪರೀಕ್ಷೆ.*SSC Constable GD Recruitment 2025*ವಯೋಮಿತಿ ಈ ಕೆಳಕಂಡ ರೀತಿಯಲ್ಲಿದೆ.*AGE LIMIT : 18-23**Gm: 23**OBC/EWS: 26**SC/ST: 28*ಹಾಗೆ ಪರೀಕ್ಷಾ ಶುಲ್ಕವು ಈ ಕೆಳಕಂಡ ರೀತಿಯಲ್ಲಿದೆ*EXAM FEES: 100/rs**SC/ST/ESM : NIL*https://ssc.gov.in/

Leave A Reply

Your email address will not be published.