ಭಾರತದ ಪ್ರವಾಸದಲ್ಲಿದ್ದ ಇವರು ರಸ್ತೆಯ ಬದಿ ತಿಂದಿದ್ದ ಈ ಹಣ್ಣಿನ ರುಚಿಯ ಬೆನ್ನತ್ತಿ ತನ್ನ ದೇಶದಲ್ಲಿ ಸ್ಥಾಪಿಸಿದರು ಕೋಟ್ಯಂತರ ವಹಿವಾಟು ನಡೆಸುವ ಕಂಪನಿ?
ನಮ್ಮ ದೇಶ ಹಾಗೆ ನೋಡಿ ಇಲ್ಲಿ ಎಲ್ಲವೂ ಇದೆ ಅದರಿಂದ ಏನೇನೋ ಮಾಡಬಹುದು , ಆದರೆ ನಮ್ಮವರಿಗೆ ಅದು ಗೊತ್ತೇ ಆಗುವುದಿಲ್ಲ . ಯಾವುದೋ ದೇಶದಿಂದ ಬಂದವರು ನಮ್ಮ ದೇಶದ ಸಂಪತ್ತನ್ನು ಪೇಟೆಂಟ್ ಮಾಡಿ ಅವರ ವಹಿವಾಟು ನಡೆಸುತ್ತಾರೆ, ನಾವು ಬರಿ ಕಚ್ಚಾ ವಸ್ತು ರಫ್ತು ಮಾತ್ರ ಮಾಡುವಂತೆ ಆಗುತ್ತೇವೆ. ಹಾಗೆ ಇದೆ ಇದೂ ಕೂಡ ಕಥೆ , ಏನಿದು ಬನ್ನಿ ತಿಳಿಯೋಣ.
ಅವರ ಹೆಸರು ಅನೀ ರಯೂ ಅಂತ, 2011 ರಲ್ಲಿಡಾಕ್ಟರ್ ಕಲಿಯುಟ್ಟಿದ್ದಾಗ ತಮ್ಮ ಕಲಿಕಾ ಕಾರ್ಯದ ನಿಮಿತ್ತ ಇವರು ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದರು. ತಮ್ಮ ಸ್ನೇಹಿತರ ಒಡಗೂಡಿ ಇವರು ಅಂದು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಲಸಿನ ಹಣ್ಣು ತಿಂಡಿದ್ದರು. ಏಕೋ ಇದು ಅವರಿಗೆ ತುಂಬಾ ರುಚಿ ಅನಿಸಿತ್ತು ಮತ್ತು ಹಿಡಿಸಿತ್ತು. ನಮ್ಮ ದೇಶದಲ್ಲಿ ಯಾರಿಗೂ ಬೇಡದ ಬಿದ್ದು ಕೊಳೆತು ಹಾಳಾಗುವ ಹಣ್ಣು ಇದು. ತಿಂದರೆ gastic ಅದು ಇದು ಎಂದು ಕೂಗಾಡುವುದೆ. ಆದರೆ ಈಕೆ ಮಾತ್ರ ಈ ಹಣ್ಣಿನ ರುಚಿ ಬೆನ್ನತ್ತಿ ಹೋದಳು. ತನ್ನ ದೇಶಕ್ಕೆ ಹಿಂತಿರುಗಿ ಇದರ ಬಗ್ಗೆ ಅಧ್ಯಯನ ಮಾಡಿದಳು, ಮತ್ತು ಈ ಹಣ್ಣಿನ ರುಚಿಗೆ ಜನರು ಸೋಲುತ್ತಾರೆ ಇದಕ್ಕೊಂದು ಮಾರುಕಟ್ಟೆ ಖಂಡಿತಾ ಇಲ್ಲಿ ಸಿಗುತ್ತದೆ ಎಂದು ನಿರ್ಧರಿಸಿ “ಜಾಕ್ ಅಂಡ್ ಎನಿಸ್” ಎಂಬ ಕಂಪನಿಯನ್ನು ಹುಟ್ಟು ಹಾಕಿದಳು.
ಇದು ಮೂಲತಃ ಹಲಸಿನ ಹಣ್ಣು ಮತ್ತು ಅದರ ಉತ್ಪನ್ನಗಳ ತಯಾರಿ ಮಾಡುವ ಕಂಪೆನಿಯಾಗಿ ಬೆಳೆಯಿತು. ಯಾರಿಗೂ ಬೇಡದ ಮಂಗಗಳು ತಿನ್ನುವ ಭಾರತದ ಈ ಹಣ್ಣಿಗೆ ವಿದೇಶಿ ಮಾರುಕಟ್ಟೆ ಮಾಡಿದಳು ಇವಳು. ಇದರ ಆರೋಗ್ಯ ಸತ್ವದ ಬಗ್ಗೆ ಜನರಿಗೆ ತಿಳಿಸಿದಳು. ಇದರಲ್ಲಿ ಕ್ಯಾಲರಿ ಕಡಿಮೆ, ಇದರಿಂದ ಫೈಬರ್, ಪ್ರೊಟೀನ್, ವಿಟಮಿನ್ ಸಿ ದೊರಕುತ್ತದೆ ಎಂದು ಪ್ರಚಾರ ಮಾಡಿದಳು. ಮತ್ತು ಇದರ ರುಚಿಗು ಜನರು ಮನ ಸೋತರು. ಹೀಗೆ ಆರಂಭವಾದ ಈ ಕಂಪನಿ ಈಗ ಬೇರೆ ದೇಶದಲ್ಲೂ ವಿಸ್ತಾರ ಆಗುತ್ತಿದೆ. ಭಾರತ ದೇಶದ ಹಣ್ಣು ವಿದೇಶದಲ್ಲಿ ಮಾರುಕಟ್ಟೆ ಸ್ಥಾಪಿಸಿ , ವಿದೇಶವನ್ನು ಉದ್ದಾರ ಮಾಡುತ್ತಿದೆ. ಇನ್ನಾದರೂ ನಮ್ಮ ಸಂಪತ್ತಿನ ಮಹತ್ವ ಅರಿತು ನಾವುಗಳು ಬೆಳೆಯೋಣ.