ನಿನ್ನೆಯ ಪಾಲಿಗೆ ಭಾರತಕ್ಕೆ ಸುದಿನ, ನಿನ್ನೆ ಭಾರತ ಒಟ್ಟು 2 ಚಿನ್ನದ ಪದಕ ಗೆಲ್ಲುವ ಮೂಲಕ ದಾಖಲೆ ಸೃಷ್ಟಿ ಮಾಡಿದೆ. ಮೊದಲಿಗೆ ಶಟ್ಲ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದರೆ ನಂತರ ನಡೆದ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದ ಜಾವಲಿನ್ ತ್ರೋ ನಲ್ಲಿ ಭಾರತದ ಸುಮಿತ್ ಅಂತಿಲ್ ಅವರು ಒಲಂಪಿಕ್ಸ್ ಇತಿಹಾಸದಲ್ಲಿ ದಾಖಲೆಯ ಥ್ರೋ ಮಾಡೋ ಮೂಲಕ ಹೊಸ ಒಲಂಪಿಕ್ಸ್ ದಾಖಲೆ ಬರೆದಿದ್ದು ಅಲ್ಲದೆ ಚಿನ್ನದ ಪದಕಕ್ಕೆ ಕೊರಳೋಡ್ಡಿದರು. ಇವರು 70.59 ಮೀಟರ್ ದೂರ ಎಸೆಯುವ ಮೂಲಕ ಒಲಂಪಿಕ್ಸ್ ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದರು. ಮತ್ತೊಂದು ವಿಶೇಷ ಎಂದರೆ ಇವರು ಒಲಂಪಿಕ್ಸ್ ನಲ್ಲಿ ಎರಡು ಬಾರಿ ಒಲಂಪಿಕ್ಸ್ ದಾಖಲೆ ಮಾಡಿದ್ದಾರೆ.
ಹರಿಯಾಣದ ಸೋನಿಪತ್ ನಲ್ಲಿ ಜನಿಸಿದ 26ರ ಹರೆಯದ ಸುಮಿತ್ ಅವರು ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ 68.55 ಮೀಟರ್‌ಗಳ ದೂರ ಎಸೆಯುವ ಮೂಲಕ ಪ್ಯಾರಾಲಿಂಪಿಕ್ ದಾಖಲೆಯನ್ನು ಸ್ಥಾಪಿಸಿದ್ದರು. ಅಲ್ಲಿ ಕೂಡ ಅವರು ಚಿನ್ನದ ಪದಕ ಗೆದ್ದಿದ್ದರು. ಮತ್ತೊಮ್ಮೆ ತಮ್ಮದೇ ದಾಖಲೆಯನ್ನು ಮುರಿದ ಇವರು ತಮ್ಮ ಹೆಸರಲ್ಲಿದ್ದ ಕಳೆದ ಒಲಂಪಿಕ್ಸ್ ಗೋಲ್ಡ್. ಮೆಡಲ್ ಅನ್ನು ಕೂಡ ತಾವೇ ಪಡೆದು ಕೊಂಡರು. ಈ ರೀತಿಯಾಗಿ ತಮ್ಮ ಗೋಲ್ಡ್ ಮೆಡಲ್ ಡಿಫೆಂಡ್ ಮಾಡಿದ ಅಪರೂಪದ ಸಾಧನೆ ಕೂಡ ಮಾಡಿದ್ದಾರೆ.